ಸನ್ಮಾರ್ಗ ವಾರ್ತೆ
ಜಮಾ ಅತೆ ಇಸ್ಲಾಮಿ ಹಿಂದ್ ನ ನಿಯೋಗವು ಹಿಂಸಾ ಪೀಡಿತ ಸಂಭಾಲ್ ಗೆ ಭೇಟಿ ನೀಡಿದೆ ಮತ್ತು ಅಲ್ಲಿಯ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರನ್ನು ಭೇಟಿಯಾಗಿ ಮಾಹಿತಿಯನ್ನು ಕಲೆ ಹಾಕಿದೆ.
ಹಾಗೆಯೇ ಸಂಭಾಲ್ ಜಾಮಾ ಮಸೀದಿಯ ಆಡಳಿತ ಸಮಿತಿಯ ಹಾಲಿ ಸದಸ್ಯರನ್ನು ಮತ್ತು ಈ ಹಿಂದಿನ ಆಡಳಿತ ಸಮಿತಿಯ ಸದಸ್ಯರನ್ನೂ ಭೇಟಿಯಾಗಿದೆ.
ನಿಯೋಗದಲ್ಲಿ ಜಮಾಅತ್ ನ ರಾಷ್ಟ್ರೀಯ ಕಾರ್ಯದರ್ಶಿ ಮೌಲಾನಾ ಶಫಿ ಮದನಿ, ಉತ್ತರ ಪ್ರದೇಶದ ಅಧ್ಯಕ್ಷ ಮೌಲಾನಾ ಝಮೀರುಲ್ ಹಸನ್ ಫಲಾಯಿ, ಎಪಿಸಿಆರ್ ನ ರಾಷ್ಟ್ರೀಯ ಕಾರ್ಯದರ್ಶಿ ನದೀಮ್ ಖಾನ್, ಜಮಾಅತ್ ಉಪ ಕಾರ್ಯದರ್ಶಿ ಇನಾಮು ರಹಮಾನ್, ಮಾಧ್ಯಮ ಕಾರ್ಯದರ್ಶಿ ಮಹಮ್ಮದ್ ಸಲ್ಮಾನ್ ಮತ್ತಿತರರು ಇದ್ದರು.












