ಸನ್ಮಾರ್ಗ ವಾರ್ತೆ
ಹತ್ಯೆಗೀಡಾದ ನಾಲ್ಕು ಮಂದಿ ಇಸ್ರೇಲ್ ಒತ್ತೆಯಾಳುಗಳ ಮೃತ ದೇಹವನ್ನು ಹಮಾಸ್ ಹಸ್ತಾಂತರಿಸಿದೆ. ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಗೆ ಈ ಮೃತ ದೇಹಗಳನ್ನು ಹಸ್ತಾಂತರಿಸಿದೆ.
ಒತ್ತೆಯಾಳುಗಳಲ್ಲೇ ಅತಿ ಕಡಿಮೆ ವಯಸ್ಸಿನ ಕಫೀರ್ ಬಿಬಾಸ್, 4 ವಯಸ್ಸಿನ ಆತನ ಸಹೋದರ ಏರಿಯಲ್, ತಾಯಿ ಶಿರಿ ಮತ್ತು ಒಡೆಡ್ ದೇಹವನ್ನು ಹಸ್ಥಾಂತರಿಸಲಾಗಿದೆ. ನಾಲ್ಕು ಕಪ್ಪು ಶವ ಪೆಟ್ಟಿಗೆಗಳಲ್ಲಿ ಈ ಮೃತ ದೇಹವನ್ನು ಹಸ್ತಾಂತರಿಸಲಾಗಿದೆ.
ಈ ಶವ ಪೆಟ್ಟಿಗೆಗಳಲ್ಲಿ ಒತ್ತೆಯಾಳುಗಳ ಪುಟ್ಟ ಚಿತ್ರವನ್ನು ಅಂಟಿಸಲಾಗಿತ್ತು. ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇವರೆಲ್ಲ ಮೃತಪಟ್ಟಿದ್ದರು. ಇದೇ ವೇಳೆ ಈ ಮಕ್ಕಳ ತಂದೆ ಗಾರ್ಡನ್ ಬಿಬಾಸ್ ಅವರನ್ನು ಫೆಬ್ರವರಿಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಖಾನ್ ಯೂನಿಸ್ ನಲ್ಲಿ ಈ ಮೃತ ದೇಹವನ್ನು ಹಸ್ತಾಂತರಿಸಲಾಗಿದೆ. ಈ ಸಂದರ್ಭದಲ್ಲಿ ಬಂದೂಕುಧಾರಿ ಹಮಾಸ್ ಹೋರಾಟಗಾರರು ಉಪಸ್ಥಿತರಿದ್ದರು.
ಒತ್ತೆಯಾಳುಗಳನ್ನು ಜೀವಂತ ನಿಮಗೆ ಹಸ್ತಾಂತರಿಸುವುದು ನಮ್ಮ ಬಯಕೆಯಾಗಿತ್ತು. ಆದರೆ ನಿಮ್ಮ ವಿಮಾನಗಳು ಮತ್ತು ರಾಜಕೀಯ ನಾಯಕರು ಅವರನ್ನು ಮರಳಿ ಕರೆದುಕೊಂಡು ಹೋಗುವುದಕ್ಕಿಂತ ಹತ್ಯೆ ಮಾಡುವುದನ್ನೇ ಬಯಸಿದ್ರು ಎಂದು ಹಮಾಸ್ ಹೇಳಿದೆ. ಈ ನಾಲ್ಕು ಮಂದಿ ಹತ್ಯೆಗೀಡಾಗಿದ್ದಾರೆ ಎಂದು 2023 ನವಂಬರ್ ನಲ್ಲೇ ಹಮಾಸ್ ಘೋಷಿಸಿತ್ತು.












