ವಕ್ಫ್ ದೇವನ ಆಸ್ತಿ, ದೇವನು ನಮಗೆ ನೆರವು ನೀಡುವನು ಇನ್ಶಾ ಅಲ್ಲಾಹ್: ಶಿಯಾ ನಾಯಕ ಕಲ್ಪೇ ಜವ್ವಾದ್

0
701

ಸನ್ಮಾರ್ಗ ವಾರ್ತೆ

ಮುಸ್ಲಿಂ ಸಮುದಾಯವನ್ನು ಕೇಂದ್ರ ಸರಕಾರ ವಂಚಿಸಿದೆ ಎಂದು ಪ್ರಮುಖ ಶಿಯಾ ನಾಯಕ ಮತ್ತು ಅಂಜುಮನೆ ಹೈದ್ರಿಯ ಮುಖ್ಯಸ್ಥರೂ ಆಗಿರುವ ಮೌಲಾನ ಕಲ್ಬೆ ಜವ್ವಾದ್ ಹೇಳಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆಯನ್ನು ತಾನು ಪೂರ್ಣವಾಗಿ ವಿರೋಧಿಸುವುದಾಗಿಯೂ ಮುಂದೆ ಪ್ರತಿಭಟನೆಯ ಮಾಹಿತಿಯನ್ನು ಹಂಚಿಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ.

ಮುಸ್ಲಿಂ ಸಮುದಾಯವನ್ನು ಕೇಂದ್ರ ಸರಕಾರ ಮತ್ತು ಅವರ ಮಿತ್ರ ಪಕ್ಷಗಳು ವಂಚಿಸಿವೆ. ಬಿಹಾರದಲ್ಲಿ ಮತ್ತು ಆಂಧ್ರಪ್ರದೇಶದಲ್ಲಿ ಮುಸ್ಲಿಮರು ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡುಗೆ ಮತ ಚಲಾಯಿಸಿದ್ದಾರೆ. ಆದರೆ ಅವರಿಬ್ಬರೂ ಮುಸ್ಲಿಂ ಸಮುದಾಯಕ್ಕೆ ವಂಚಿಸಿದರು. ಮುಸ್ಲಿಮರ ಶಕ್ತಿ ಏನು ಎಂಬುದನ್ನು ನಾವು ತೋರಿಸಿಕೊಡುತ್ತೇವೆ ಎಂದು ಮೌಲಾನ ಕಲ್ಬೆ ಜವ್ವಾದ್ ಹೇಳಿದ್ದಾರೆ.

ವಕ್ಫ್ ಎಂಬುದು ದೇವನ ಆಸ್ತಿಯಾಗಿದೆ. ದೇವನು ನಮಗೆ ನೆರವು ನೀಡುವನು. ಈ ಹೋರಾಟದಲ್ಲಿ ನಾವು ಗೆಲ್ಲುವೆವು. ನಾವು ಈ ಮಸೂದೆಯ ವಿರುದ್ಧ ಸುಪ್ರೀಂ ಕೋರ್ಟ್ ಅನ್ನು ಸಮೀಪಿಸಲಿದ್ದೇವೆ. ದೇಶಾದ್ಯಂತ ಪ್ರತಿಭಟನೆ ಕೈಗೊಳ್ಳಲಿದ್ದೇವೆ ಎಂದು ಅವರು ಹೇಳಿದ್ದಾರೆ.