ಇಸ್ರೇಲ್ ನಿಂದ 7.5 ಮಿಲಿಯನ್ ಡಾಲರ್ ಆಯುಧ ಖರೀದಿ ಒಪ್ಪಂದದಿಂದ ಹಿಂದೆ ಸರಿದ ಸ್ಪೇನ್

0
537

ಸನ್ಮಾರ್ಗ ವಾರ್ತೆ

ಇಸ್ರೇಲ್ ನಿಂದ ಸುಮಾರು 7.5 ಮಿಲಿಯನ್ ಡಾಲರ್ ಮೊತ್ತದ ಆಯುಧ ಖರೀದಿ ಒಪ್ಪಂದದಿಂದ ಸ್ಪೇನ್ ಹಿಂದೆ ಸರಿದಿದೆ. ಈ ಮೂಲಕ ಇಸ್ರೇಲ್ ಗೆ ಭಾರಿ ಹಿನ್ನಡೆಯಾಗಿದೆ. ಈ ಒಪ್ಪಂದದ ವಿರುದ್ಧ ಸರಕಾರದ ಒಳಗಡೆಯೇ ಭಾರಿ ವಿರೋಧ ವ್ಯಕ್ತವಾದ ಬಳಿಕ ಪ್ರಧಾನಿ ಪೆಡ್ರೂ ಸ್ಯಾಂಚಸ್ ಅವರು ಒಪ್ಪಂದದಿಂದ ಹಿಂದೆ ಸರಿದಿದ್ದಾರೆ.

ಸ್ಯಾಂಚಸ್ ಅವರ ಸರಕಾರವು ಫೆಲೆ ಸ್ತೀನನ್ನು ಒಂದು ರಾಷ್ಟ್ರವಾಗಿ ಒಪ್ಪಿಕೊಂಡ ದೇಶವಾಗಿದೆ. ಆದರೆ ಈ ನಿಲುವಿನ ಹೊರತಾಗಿಯೂ ಸ್ಪೈನ್ ನ ರಕ್ಷಣಾ ಸಚಿವರು ಈ ಒಪ್ಪಂದವನ್ನು ಮಾಡಿಕೊಂಡಿದ್ದರು. ಎಡಪಕ್ಷವಾದ ಸುಮರ್ ಜೊತೆ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುತ್ತಿರುವ ಸ್ಯಾಂಚಸ್ ಸರಕಾರವು ಎಡಪಕ್ಷಗಳ ಭಾರಿ ವಿರೋಧದ ಬಳಿಕ ಇಕ್ಕಟ್ಟಿಗೆ ಸಿಲುಕಿತು.