ಸನ್ಮಾರ್ಗ ವಾರ್ತೆ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು, ಶೋಯೆಬ್ ಅಖ್ತರ್ ಅವರ ಯೂಟ್ಯೂಬ್ ಚಾನೆಲ್ @ShoaibAkhtar100mph ಸೇರಿದಂತೆ 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ಗಳನ್ನು ನಿಷೇಧಿಸಿದೆ. ಡಾನ್ ನ್ಯೂಸ್, ಎಆರ್ವೈ ನ್ಯೂಸ್, ಜಿಯೋ ನ್ಯೂಸ್, ಸಮಾ ಟಿವಿ ಸೇರಿದಂತೆ ಪ್ರಮುಖ ಸುದ್ದಿ ಚಾನೆಲ್ಗಳ ಆನ್ಲೈನ್ ಪ್ರಸಾರವನ್ನು ಸಹ ನಿಲ್ಲಿಸಲಾಗಿದೆ. ಕೆಲವು ಪಾಕಿಸ್ತಾನಿ ಕ್ರೀಡಾ ಚಾನೆಲ್ಗಳ ವಿರುದ್ಧವೂ ನಿರ್ಬಂಧ ಹೇರಲಾಗಿದೆ.
ಈ ಚಾನೆಲ್ಗಳು ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಸೇನೆ ಹಾಗೂ ಭಾರತೀಯ ಭದ್ರತಾ ಸಂಸ್ಥೆಗಳ ವಿರುದ್ಧ ಪ್ರಚೋದನಕಾರಿ ವಿಷಯಗಳನ್ನು ಹರಡುತ್ತಿದ್ದವು ಎಂದು ಆರೋಪಿಸಲಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವ ಮಾಹಿತಿಯನ್ನು ತಡೆಗಟ್ಟುವ ಉದ್ದೇಶದಿಂದ ಭಾರತದ ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ಈ ಚಾನೆಲ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ನಿಷೇಧಿತ ಚಾನೆಲ್ಗಳನ್ನು ತೆರೆಯಲು ಪ್ರಯತ್ನಿಸಿದರೆ “ಈ ವಿಷಯವು ಭಾರತದಲ್ಲಿ ಲಭ್ಯವಿಲ್ಲ” ಎಂಬ ಸಂದೇಶ ತೋರಿಸುತ್ತಿದ್ದು, ವಿವರಗಳಿಗೆ Googleಅನ್ನು ಉಲ್ಲೇಖಿಸಲಾಗಿದೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಸಿಂಧೂ ಜಲ ಒಪ್ಪಂದವನ್ನು ರದ್ದುಪಡಿಸಿ, ವಾಘಾ-ಅಟ್ಟಾರಿ ಗಡಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸಾರ್ಕ್ ವೀಸಾ ವಿನಾಯಿತಿಯನ್ನೂ ಕೊನೆಗೊಳಿಸಲಾಗಿದೆ.












