ಈ ವರ್ಷ ಒಂದು ಕೋಟಿ 30 ಲಕ್ಷಕ್ಕಿಂತ ಅಧಿಕ ಮಂದಿಯಿಂದ ರೌಲ ಸಂದರ್ಶನ

0
277

ಸನ್ಮಾರ್ಗ ವಾರ್ತೆ

ಒಂದು ಕೋಟಿ 30 ಲಕ್ಷಕ್ಕಿಂತಲೂ ಅಧಿಕ ಅಧಿಕ ಮಂದಿ ಒಂದೇ ವರ್ಷದೊಳಗೆ ಮದೀನಾದ ಮಸ್ಜಿದುನ್ನ ಬವಿಯ ರೌಲಕ್ಕೆ ಭೇಟಿ ನೀಡಿ ಪ್ರಾರ್ಥನೆ ನಡೆಸಿದ್ದಾರೆ ಎಂದು ಸೌದಿ ಅರೇಬಿಯಾ ತಿಳಿಸಿದೆ. ರೌಲಕ್ಕೆ ಭೇಟಿ ನೀಡಬೇಕಾದರೆ ನುಸುಕ್ ಅಥವಾ ತವಕ್ಕಲ್ ನಾ ಆಪ್ ಮೂಲಕ ಅಪೇಕ್ಷೆ ಸಲ್ಲಿಸಬೇಕು ಮತ್ತು ಆ ಮೂಲಕ ಪರ್ಮಿಷನ್ ಪಡೆಯಬೇಕು. ಓರ್ವ ವ್ಯಕ್ತಿಗೆ ಒಂದು ವರ್ಷದಲ್ಲಿ ಒಮ್ಮೆ ಮಾತ್ರ ಈ ಅವಕಾಶವನ್ನು ನೀಡಲಾಗುತ್ತದೆ.

ರೌಲ ಶರೀಫ್ ನಲ್ಲಿ ಹತ್ತು ನಿಮಿಷಗಳ ಕಾಲ ಪ್ರಾರ್ಥನೆ ನಡೆಸಲು ಅವಕಾಶ ಇದೆ. ನಿಬಿಡತೆಯ ಕಾರಣ ಈ ಸಮಯ ನಿಗದಿ ಮಾಡಲಾಗಿದೆ. ಯಾತ್ರಿಕರು ಪರ್ಮಿಟ್ ನಲ್ಲಿರುವ ದಿನಾಂಕ ಮತ್ತು ಸಮಯವನ್ನು ಸ್ಪಷ್ಟವಾಗಿ ಗಮನಿಸಬೇಕಾಗಿದೆ. ಪರ್ಮಿಟನ್ನು ತೋರಿಸಿ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮೊದಲೇ ರೌಲ ಶರೀಫನ ಬಳಿ ಇರಬೇಕು ಎಂದು ತಿಳಿಸಲಾಗಿದೆ.

ಯಾವುದಾದರೂ ಕಾರಣದಿಂದ ಪರ್ಮಿಟ್ ನಲ್ಲಿ ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಬರಲು ಸಾಧ್ಯವಾಗದಿದ್ದರೆ ಅದನ್ನು ಮೊದಲೇ ರದ್ದುಪಡಿಸಬೇಕಾಗಿದೆ. ಇದೇ ವೇಳೆ ಹಿರಿಯರಿಗೆ ಮತ್ತು ವಿಶೇಷ ಚೇತನರಿಗೆ ಬೇರೆಯದೆ ಆದ ವ್ಯವಸ್ಥೆಯನ್ನು ಮಾಡಲಾಗಿದೆ.