ಮಹಾರಾಷ್ಟ್ರ: ವಜಾಗೊಂಡ 167 ಕಾರ್ಮಿಕರಲ್ಲಿ 114 ಕಾರ್ಮಿಕರೂ ಮುಸ್ಲಿಮರೇ

0
891

ಸನ್ಮಾರ್ಗ ವಾರ್ತೆ

ಮಹಾರಾಷ್ಟ್ರದ ಪ್ರಸಿದ್ಧ ಶನಿ ಸಿಂಗನಾಪೂರ್ ದೇವಾಲಯದಲ್ಲಿ 167 ಗುತ್ತಿಗೆ ಕಾರ್ಮಿಕರನ್ನು ವಜಾ ಮಾಡಲಾಗಿದೆ. ವಿಶೇಷ ಎಂದರೆ ಇವರಲ್ಲಿ 114 ಮಂದಿ ಕೂಡ ಮುಸ್ಲಿಮರು. ಇವರ ಕಾರ್ಯಕ್ಷಮತೆ ಉತ್ತಮವಾಗಿಲ್ಲದ ಕಾರಣ ಮತ್ತು ಕೆಲಸಕ್ಕೆ ಗೈರು ಹಾಜರಾಗುತ್ತಿದ್ದ ಕಾರಣ ಇವರನ್ನೆಲ್ಲ ವಜಾ ಮಾಡಲಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ಹೇಳಿದ್ದಾರೆ. ಆದರೆ ವಜಾಕ್ಕಿಂತ ದಿನಗಳ ಮೊದಲು ಇವರನ್ನು ವಜಾ ಮಾಡಬೇಕು ಎಂದು ಸಂಘ ಪರಿವಾರ ಪ್ರತಿಭಟಿಸಿತ್ತು.

ಕಳೆದ ಮೇ ತಿಂಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ವಿಡಿಯೋ ಮೂಲಕ ವಿವಾದ ಆರಂಭವಾಗಿತ್ತು. ದೇವಸ್ಥಾನದ ಹತ್ತಿರ ಮುಸ್ಲಿಂ ಕಾರ್ಮಿಕರು ಪೇಂಟಿಂಗ್ ಮತ್ತು ನಿರ್ವಹಣಾ ಕೆಲಸ ಮಾಡುತ್ತಿದ್ದರು. ಅದರ ಬೆನ್ನಿಗೆ ಏನ್ ಸಿ ಪಿ ಶಾಸಕ ಸಂಗ್ರಾಮ್ ಜಗಪತ್ ಅವರು ಸೇರಿದಂತೆ ಬಲಪಂಥೀಯ ಗುಂಪು ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿತು. ಮಂದಿರದ ಕೆಲಸವನ್ನು ಮಾಡಬಾರದು ಎಂದು ಪ್ರತಿಭಟನೆ ಸಲ್ಲಿಸಿತು. ಜೂನ್ ಎಂಟು ಮತ್ತು ಹದಿನಾಲ್ಕರಂದು ಮಂದಿರದ ಟ್ರಸ್ಟ್ ಸಭೆಯನ್ನು ಸೇರಿ 164 ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿತು.

ಆದರೆ ಹೀಗೆ ವಜಾ ಮಾಡುವುದಕ್ಕೆ ಧರ್ಮ ಕಾರಣವಲ್ಲ ಎಂದು ಟ್ರಸ್ಟ್ ಹೇಳ್ತಾ ಇದೆ.

ಇದೆ ವೇಳೆ ನಾವು ಮಂದಿರದಲ್ಲಿ ಕೆಲಸ ಮಾಡುತ್ತಿರಲಿಲ್ಲ. ನಾವು ಗೋಶಾಲೆಯಲ್ಲಿ ಕೆಲಸ ಮಾಡುತ್ತಿದ್ದೆವು. ನಮ್ಮಲ್ಲಿ ಯಾರು ಕೂಡ ಕೆಲಸದ ಬಗ್ಗೆ ಪ್ರಶ್ನಿಸಿಯೇ ಇಲ್ಲ. ನಮಗಿದು ಇದೊಂದೇ ಕೆಲಸ ಮತ್ತು ನಮ್ಮ ಕುಟುಂಬವನ್ನು ನಾವಿದರಿಂದಲೇ ಸಾಕುತ್ತಿದ್ದೇವು ಎಂದು ವಜಾಗೊಂಡ ಓರ್ವ ಕಾರ್ಮಿಕ ಹೇಳಿದ್ದಾರೆ.

ಇದೇ ವೇಳೆ ಅಹ್ಮದ್ ನಗರ ಜಿಲ್ಲೆಯಲ್ಲಿ ರಾಜಕೀಯ ಧ್ರುವೀಕರಣ ನಡೆದಿದೆ. ಮುಸ್ಲಿಮರು ಪದೇ ಪದೇ ದಾಳಿಗೆ ಗುರಿಯಾಗುತ್ತಿದ್ದಾರೆ. ಅವರನ್ನು ಕೆಲಸದಿಂದ ಹೊರಹಾಕಲಾಗುತ್ತಿದೆ. ಅವರನ್ನು ಒಂಟಿಗೊಳಿಸಲಾಗ್ತಾ ಇದೆ.ಮಾತ್ರ ಅಲ್ಲ ಅವರ ಭೂಮಿಯನ್ನು ಬಲಪಂಥೀಯ ಗುಂಪುಗಳು ಆಕ್ರಮಿಸುತ್ತಿವೆ. ಸರಕಾರ ಎಲ್ಲರಿಗೂ ಉದ್ಯೋಗ ಕೊಡುತ್ತೇವೆ ಎಂದು ಹೇಳಿದರೂ ನಿರ್ದಿಷ್ಟ ಗುಂಪನ್ನು ಅದರಿಂದ ಹೊರ ಹಾಕಲಾಗುತ್ತಿದೆ ಇದು ನ್ಯಾಯವಲ್ಲ ಇದು ಸಂವಿಧಾನ ವಿರೋಧಿ ಎಂದು ಸಾಮಾಜಿಕ ಕಾರ್ಯಕರ್ತ ಡಾ |ಪರ್ವೇಶ್ ಅಶ್ರಫಿ ಹೇಳಿದ್ದಾರೆ.