✍️ ಶಹಜಹಾನ್ ಮಗ್ದಮ್
ಎಕ್ಸಿಕ್ಯೂಟಿವ್ ಎಡಿಟರ್, `ಶೋಧನ್’ ಮರಾಠಿ ಸಾಪ್ತಾಹಿಕ
ಅನು: ಮುಖ್ತಾರ್ ಅಹ್ಮದ್
ಯಾರಿಂದ ಖರೀದಿಸಬೇಕು ಎಂಬ ವಿವಾ ದಾತ್ಮಕ ಫಲಕಗಳನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಪ್ರದರ್ಶಿಸಲಾಗಿತ್ತು. ಹಿಂದೂ ವ್ಯಾಪಾರಿಗಳಿಂದ ಖರೀಸಬೇಕೆಂಬ ಸಂದೇಶವನ್ನು ನೀಡುವ ಈ ಬ್ಯಾನರ್ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಕೊಂಡಂತೆ ಕಾಣುತ್ತದೆ. ವ್ಯಾಪಾರಿಯು ಹೆಸರು ಹೇಳಿದ ನಂತರವೇ ಖರೀದಿಸಿ ಎಂದು ಅದರಲ್ಲಿ ಹೇಳಲಾಗಿತ್ತು. ಈ ಬಗ್ಗೆ ಕೊಲ್ಲಾಪುರದಲ್ಲಿ ಚರ್ಚೆ ನಡೆದಿತ್ತು.
ದೇಶದೊಳಗಿನ ಕೆಲವು ಗುಂಪುಗಳು ಸಾಮಾಜಿಕ ಉದ್ವಿಗ್ನತೆಯನ್ನು ಸೃಷ್ಟಿಸಲು ಮುಸ್ಲಿಮರ ವಿರುದ್ಧ ಆರ್ಥಿಕ ಬಹಿಷ್ಕಾರಗಳಂತಹ ಅಸ್ತ್ರಗಳನ್ನು ಬಳಸುತ್ತಿವೆ. ಇದು ಕೇವಲ ಒಂದು ಸಮುದಾಯದ ವಿರುದ್ಧದ ಕೃತ್ಯವಲ್ಲ. ಬದಲಾಗಿ ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಸಮಾನವಾಗಿದೆ. ಈ ಕ್ರಮಗಳು ಶತ್ರು ರಾಷ್ಟ್ರಗಳ ಉದ್ದೇಶ ಗಳೊಂ ದಿಗೆ ಹೊಂದಿಕೆಯಾಗುತ್ತದೆ. ಭಾರತ ದಲ್ಲಿ ಭಯ, ದ್ವೇಷ ಮತ್ತು ಸಂಘರ್ಷದ ವಾತಾವರಣವನ್ನು ಸೃಷ್ಟಿಸುವುದಾಗಿದೆ ಇದರ ಉದ್ದೇಶ.
ಇಷ್ಟೆಲ್ಲಾ ಇದ್ದರೂ, ಭಯೋತ್ಪಾದಕರನ್ನು ಹೊಣೆಗಾರರನ್ನಾಗಿ ಮಾಡುವ ಬದಲು ಹಿಂಸಾತ್ಮಕ ಘಟನೆಗಳು ಮತ್ತು ಬಹಿಷ್ಕಾರಗಳಿಗೆ ಭಾರತೀಯ ಮುಸ್ಲಿಮರನ್ನು ದೂಷಿಸಲಾಗುತ್ತಿದೆ. ಪಹಲ್ಗಾಮ್ ದಾಳಿಯಲ್ಲಿ ಸೈಯದ್ ಆದಿಲ್ರಂತಹ ಭಾರತೀಯ ಮುಸ್ಲಿಮರು ಪ್ರವಾಸಿಗರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಈ ಹಿನ್ನೆಲೆಯಲ್ಲಿ, ಮುಸ್ಲಿಮರ ಮೇಲೆ ಆರ್ಥಿಕ ಬಹಿಷ್ಕಾರ ಹೇರುವುದು ಅವರದೇ ಶಭಕ್ತಿಗೆ ಮಾಡಿದ ಅವಮಾನಕ್ಕಿಂತ ಕಡಿಮೆಯೇನಲ್ಲ.
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ವೈವಿಧ್ಯತೆಗೆ ಗೌರವ ನೀಡುವ ಆಧಾರದ ಮೇಲೆ ನಿರ್ಮಿಸಲ್ಪಟ್ಟಿದೆ. ಸಂವಿಧಾನದ ಮೇಲೆ ನೆಲೆ ನಿಂತಿದೆ ಮತ್ತು ಎಲ್ಲಾ ಧರ್ಮಗಳು, ಜಾತಿಗಳು ಮತ್ತು ಪಂಥಗಳಿಗೆ ಸಮಾನ ಹಕ್ಕುಗಳನ್ನು ನೀಡುತ್ತದೆ. ಆದಾಗ್ಯೂ, ಇತ್ತೀಚಿನ ದಿನಗಳು, ನಿರ್ದಿಷ್ಟ ಧಾರ್ಮಿಕ ಸಮುದಾಯಗಳ ವಿರುದ್ಧ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರದ ಪ್ರಕರಣಗಳು ಪದೇ ಪದೇ ಬೆಳಕಿಗೆ ಬರುತ್ತಿವೆ. ಇವುಗಳಲ್ಲಿ ಅಂಗಡಿಗಳನ್ನು ಮುಚ್ಚುವಂತೆ ಒತ್ತಾಯಿಸುವುದು, ಅವರ ವ್ಯವಹಾರಗಳನ್ನು ಬಹಿಷ್ಕರಿಸು ವಂತೆ ಕರೆ ನೀಡುವುದು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷಪೂರಿತ ಅಭಿಯಾನಗಳನ್ನು ನಡೆಸುವುದೂ ಸೇರಿವೆ.
ಭಾರತವು ವೈವಿಧ್ಯತೆಯಲ್ಲಿ ಏಕತೆಗೆ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ಆದರೂ, ಇತ್ತೀಚಿನ ವರ್ಷಗಳಲ್ಲಿ, ಕೆಲವು ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ದೇಶದ ವಿವಿಧ ಭಾಗಗಳಲ್ಲಿ ನಿರ್ದಿಷ್ಟ ಸಮುದಾಯಗಳ ವಿರುದ್ಧ-ವಿಶೇಷವಾಗಿ ಮುಸ್ಲಿಮರ ವಿರುದ್ಧ ಆರ್ಥಿಕ ಬಹಿಷ್ಕಾರಕ್ಕೆ ಬಹಿರಂಗವಾಗಿ ಕರೆ ನೀಡಿವೆ. ಅವರಿಂದ ಹಣ್ಣುಗಳನ್ನು ಖರೀದಿಸಬೇಡಿ. ಅವರ ಅಂಗಡಿಗಳಿಂದ ಖರೀದಿಸಬೇಡಿ ಅಥವಾ ಅವರ ಬಾಡಿಗೆ ವಾಹನಗಳನ್ನು ಬಳಸಬೇಡಿ, ಅವರಿಗೆ ಬಾಡಿಗೆಗೆ ಮನೆಯನ್ನು ನೀಡಬೇಡಿ… ಮುಂತಾದ ಮಾತುಗಳು ಈಗ ಭಾಷಣಗಳಿಗೆ ಸೀಮಿತವಾಗಿಲ್ಲ, ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕೆಲವೊಮ್ಮೆ ಹಿಂಸಾತ್ಮಕ ಘಟನೆಗಳಲ್ಲಿಯೂ ಗೋಚರಿಸಬಹುದು.
ಈ ಕರೆಗಳು ಕೇವಲ ದ್ವೇಷದ ಸಂಕೇತಗಳಲ್ಲ, ಬದಲಾಗಿ ಭಾರತೀಯ ಸಮಾಜದ ಅಡಿಪಾಯವನ್ನೇ ಅಲುಗಾಡಿಸುತ್ತವೆ. ಧರ್ಮ ಆಧಾರಿತ ಆರ್ಥಿಕ ಬಹಿಷ್ಕಾರಗಳು ಕೇವಲ ಸಾಮಾಜಿಕ ವಿಷಯವಲ್ಲ, ಅವು ರಾಷ್ಟ್ರೀಯ ಏಕತೆ, ಆರ್ಥಿಕ ಸ್ಥಿರತೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ನೇರವಾಗಿ ಹಾಳು ಮಾಡುತ್ತವೆ. ಈ ಬಹಿಷ್ಕಾರಗಳು ಸಾಮಾಜಿಕ ಸ್ವರೂಪದ್ದಾಗಿ ಕಂಡು ಬಂದರೂ, ಅವುಗಳ ಪರಿಣಾಮಗಳು ರಾಜಕೀಯ, ಆರ್ಥಿಕ ಮತ್ತು ಸಾಮೂಹಿಕ ಮನಸ್ಸನ್ನು ಆಳವಾಗಿ ಗಾಯಗೊಳಿಸುತ್ತವೆ. ಆದ್ದರಿಂದ ಈ ಸಮಸ್ಯೆಯನ್ನು ಭಾವನಾತ್ಮಕ ಕನ್ನಡಿಯ ಮೂಲಕ ಮಾತ್ರವಲ್ಲದೆ ಚಿಂತನಶೀಲ ಮತ್ತು ಸೂಕ್ಷ್ಮ ನಾಗರಿಕನ ದೃಷ್ಟಿಯಿಂದ ನೋಡಬೇಕು. ಈ ಸಾಮಾಜಿಕ ಬಹಿಷ್ಕಾರ ಅಭಿಯಾನಗಳು ಕೋಮು ದ್ವೇಷವನ್ನು ಬೆಳೆಸುವುದಲ್ಲದೆ, ಮಾನವ ಹಕ್ಕುಗಳು, ರಾಷ್ಟ್ರೀಯ ಸಮಗ್ರತೆ ಮತ್ತು ಸ್ಥಳೀಯ ಕಾನೂನುಗಳನ್ನು ಸಹ ಪ್ರಶ್ನಿಸುತ್ತವೆ.
ಸಾಮಾನ್ಯ ನಾಗರಿಕರ ಮೇಲೆ ಪರಿಣಾಮ
ಇಂತಹ ಬಹಿಷ್ಕಾರಗಳ ಮೊದಲ ಮತ್ತು ಅತ್ಯಂತ ತೀವ್ರವಾದ ಪರಿಣಾಮವನ್ನು ಅನುಭವಿಸುವುದು ಕೈ-ಕೈ ಮಿಲಾಯಿಸುವ ನಾಗರಿಕರು. ಮುಂಬಯಿ, ಪುಣೆ, ಇಂದೋರ್, ಪ್ರಯಾಗ್ರಾಜ್, ವಾರಣಾಸಿ, ಬುಲ್ದಾನಾ, ಮಂಗಳೂರು ಮತ್ತು ಬೆಳಗಾವಿಯಂತಹ ನಗರಗಳಲ್ಲಿ ಮುಸ್ಲಿಮ್ ಮಾರಾಟಗಾರರು ತಮ್ಮ ಹೆಸರಿನ ಕಾರಣದಿಂದಾಗಿ ಗ್ರಾಹಕರನ್ನು ಕಳೆದುಕೊಳ್ಳುವ ಬಗ್ಗೆ ಅನೇಕ ನೈಜ ಕಥೆಗಳು ಮಾಧ್ಯಮಗಳಲ್ಲಿ ಹೊರ ಹೊಮ್ಮಿವೆ.
ಯಾವುದೇ ಆರ್ಥಿಕ ಬಹಿಷ್ಕಾರದ ಮೊದಲ ಹೊಡೆತ ಸಮಾಜದ ಕೆಳಮಟ್ಟದಲ್ಲಿರುವ ವ್ಯಕ್ತಿಗೆ ತಟ್ಟುತ್ತದೆ. ಬೀದಿ ವ್ಯಾಪಾರಿ, ರಿಕ್ಷಾ ಚಾಲಕ, ಗಾಡಿ ಎಳೆಯುವವನು, ಹಣ್ಣು ಮಾರಾಟಗಾರ, ಚಹಾ ಮಾರಾಟಗಾರರಿಗೆ ಇದರ ಪರಿಣಾಮ ತಟ್ಟುತ್ತದೆ. ಈ ಬಹಿಷ್ಕಾರವನ್ನು `ಮುಸ್ಲಿಮ್’ ಎಂಬರ್ಹ ಪಟ್ಟಿಯಡಿಯಲ್ಲಿ ವಿಧಿಸಲಾಗುತ್ತಿದ್ದು, ಎಲ್ಲ ಸ್ತರದ ಜನರ ಮೇಲೆ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಎರಡು ಪರಿಣಾಮಗಳನ್ನು ಪಟ್ಟಿ ಮಾಡಬಹುದು. 1) ಹೆಚ್ಚಿದ ಸಾಮಾಜಿಕ ವಿಭಜನೆ ಮತ್ತು 2) ತೀವ್ರಗೊಂಡ ಆರ್ಥಿಕ ಅಸಮಾನತೆ.
Oxfum India ಮತ್ತು NCDHR 2022ರ ವರದಿಯ ಪ್ರಕಾರ, ಬಹಿಷ್ಕಾರದಿಂದ ಪ್ರಭಾವಿತರಾದ ವ್ಯಕ್ತಿಗಳು ಸರಾಸರಿ 30 ರಿಂದ 70% ಆರ್ಥಿಕ ನಷ್ಟವನ್ನು ಅನುಭವಿಸುತ್ತಾರೆ. “ಸಾಮಾಜಿಕ ಒತ್ತಡ”ದಿಂದಾಗಿ ಮುಸ್ಲಿಮರ ಅಂಗಡಿಯ ವ್ಯವಹಾರಗಳು ಮುಚ್ಚಲ್ಪಟ್ಟಿವೆ ಮತ್ತು ಕೆಲವು ಸ್ಥಳಗಳಲ್ಲಿ ಪೊಲೀಸರು ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಿದ್ದಾರೆ.
ದ್ವೇಷ
ಉದಾಹರಣೆಗೆ 2023ರಲ್ಲಿ ಉತ್ತರ ಭಾರತದ ಒಂದು ಹಳ್ಳಿಯಲ್ಲಿ ವಾಟ್ಸಾಪ್ ಗುಂಪೊಂದು ಹಿಂದುಗಳು ಮುಸ್ಲಿಮರಿಂದ ಖರೀದಿಸದಂತೆ ಒತ್ತಾಯಿಸುವ ಸಂದೇಶವನ್ನು ಪ್ರಸಾರ ಮಾಡಿತು. ಇದರ ಪರಿಣಾಮವಾಗಿ, ಆ ಹಳ್ಳಿಯ 18 ಮುಸ್ಲಿಮ್ ಅಂಗಡಿಯವರ ಆದಾಯವು ಒಂದು ವಾರದೊಳಗೆ 80% ಕಡಿಮೆಯಾಯಿತು. ಅವರಲ್ಲಿ ಕೆಲವರು ಗ್ರಾಮವನ್ನು ತೊರೆಯಬೇಕಾಯಿತು. CSDS- ಲೋಕ ನೀತಿ ವರದಿಯ ಪ್ರಕಾರ 2022 ರಲ್ಲಿ ಸಮೀಕ್ಷೆಗೊಳಗಾದ ಮುಸ್ಲಿಮ್ ನಾಗರಿಕರಲ್ಲಿ 52% ರಷ್ಟು ಜನರು ಸಾಮಾಜಿಕ ವಹಿವಾಟುಗಳಲ್ಲಿ ಅಘೋಷಿತ ತಾರತಮ್ಯವನ್ನು ಎದುರಿಸುತ್ತಿದ್ದಾರೆಂದು ಹೇಳಲಾಗಿದೆ.
ಭಾರತದ ಮಾಹಿತಿ ಕ್ಷೇತ್ರಕ್ಕೆ ಮುಸ್ಲಿಮರ ಕೊಡುಗೆ
ಭಾರತದ ಆರ್ಥಿಕತೆಯು ಶೇ. 90ಕ್ಕಿಂತ ಅಧಿಕ ಅನೌಪಚಾರಿಕ ವಲಯದ ಮೇಲೆ ಅವಲಂಬಿಸಲಾಗಿದೆ. 2022-23ರ SBI ವರದಿಯ ಪ್ರಕಾರ, ಅನೌಪಚಾರಿಕ ವಲಯವು ದೇಶದ ಒಟ್ಟು ಮೌಲ್ಯವರ್ಧನೆಗೆ (GVA) 11.25% ರಷ್ಟು ಕೊಡುಗೆ ನೀಡುತ್ತದೆ ಮತ್ತು ದುಡಿಯುವ ಜನಸಂಖ್ಯೆಯ 74.3% ರಷ್ಟು ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ. ಮುಸ್ಲಿಮ್ ಸಮುದಾಯವು ಈ ವಲಯಕ್ಕೆ ಗಮನಾರ್ಹ ಕೊಡುಗೆಯನ್ನು ನೀಡಿದೆ.
ಅನೌಪಚಾರಿಕ ವಲಯದ ಪ್ರಾಮುಖ್ಯತೆ
- ಆದಾಯಕ್ಕೆ ಕೊಡುಗೆ: 2022-23ರಲ್ಲಿ ಭಾರತದ ಒಟ್ಟು GVA ಗೆ ಅನೌಪಚಾರಿಕ ವಲಯವು ಸುಮಾರು 44% ಕೊಡುಗೆ ನೀಡಿದೆ.
- ಉದ್ಯೋಗ: ದೇಶದ ಸುಮಾರು 74.3% ರಷ್ಟು ಕಾರ್ಮಿಕ ಬಲವು ಈ ವಲಯದಲ್ಲಿದ್ದು, ಅಲ್ಪಸಂಖ್ಯಾತ ಸಮುದಾಯಗಳಿಂದ ಹೆಚ್ಚಿನವರು ಈ ಉದ್ಯೋಗದಲ್ಲಿದ್ದಾರೆ.
ಮುಸ್ಲಿಮ್ ಸಮುದಾಯದ ಭಾಗವಹಿಸುವಿಕೆ
- ಮುಸ್ಲಿಮ್ ಸಮುದಾಯವು ಅನೌಪಚಾರಿಕ ವಲಯದ ವಿವಿಧ ವ್ಯವಹಾರಗಳಲ್ಲಿ ಭಾಗವಹಿಸುತ್ತದೆ.
- ವ್ಯಾಪಾರ ಮತ್ತು ಸೇವೆಗಳು: ಹಣ್ಣು ಮಾರಾಟಗಾರರು, ರಿಕ್ಷಾ ಚಾಲ ಕರು, ಟ್ಯಾಕ್ಸಿ ಚಾಲಕರು, ಸಣ್ಣ ಅಂಗಡಿಯವರು, ಕುಶಲಕರ್ಮಿಗಳು ಮತ್ತು ಗೃಹೋಪಯೋಗಿ ಕೈಗಾರಿಕೆಗಳು ಮುಸ್ಲಿಮರನ್ನು ದೊಡ್ಡ ಪ್ರಮಾಣದಲ್ಲಿ ನೇಮಿಸಿಕೊಳ್ಳುತ್ತವೆ.
- ಕೈಗಾರಿಕೆ: ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ಮುಸ್ಲಿಮರು ಗಮನಾರ್ಹ ಭಾಗವಹಿಸುವಿಕೆಯನ್ನು ಹೊಂದಿದ್ದಾರೆ.
- ಜವಳಿ ಉತ್ಪಾದನೆ ಮತ್ತು ಮಾರಾಟ: ಮುಸ್ಲಿಮ್ ಸಮುದಾಯವು ಜವಳಿ ಉದ್ಯಮಕ್ಕೆ ಗಣನೀಯ ಕೊಡುಗೆ ನೀಡುತ್ತಿದೆ.
- ಕೃಷಿ ಮತ್ತು ಸಂಬಂಧಿತ ವ್ಯವಹಾರಗಳು: ಮುಸ್ಲಿಮರು ಕೃಷಿ ಉತ್ಪನ್ನಗಳ ಮಾರಾಟ, ಪಶುಸಂಗೋ ಪನೆ ಮತ್ತು ಸಂಬಂಧಿತ ವ್ಯವಹಾರಗಳಲ್ಲಿ ಸಕ್ರಿಯರಾಗಿದ್ದಾರೆ.
- ಚಿಲ್ಲರೆ ವ್ಯಾಪಾರ: ಅನೇಕ ಮುಸ್ಲಿಮರು ಹಣ್ಣು ಮಾರಾಟಗಾರರು, ಗಾಡಿ ಎಳೆಯುವವರು, ಚಹಾ ಮಾರಾಟಗಾರರು ಮತ್ತು ಸಣ್ಣ ಅಂಗಡಿಯವರಾಗಿ ಕೆಲಸ ಮಾಡುತ್ತಾರೆ.
- ಹೊಲಿಗೆ, ಕರಕುಶಲ ವಸ್ತುಗಳು ಮತ್ತು ಕರಕುಶಲತೆ: ಮುಸ್ಲಿಮ್ ಕುಶಲಕರ್ಮಿಗಳು ವಿವಿಧ ಕರಕುಶಲ ಉತ್ಪನ್ನಗಳಲ್ಲಿ ನುರಿತವರು.
- ರಿಕ್ಷಾ, ಟ್ಯಾಕ್ಸಿ ಮತ್ತು ಟ್ರಕ್ ಚಾಲಕರು: ಸಾರ್ವಜನಿಕ ಸಾರಿಗೆ ಸೇವೆಗಳಲ್ಲಿ ಮುಸ್ಲಿಮ್ ಚಾಲಕರ ಸಂಖ್ಯೆ ಗಣನೀಯವಾಗಿದೆ.
- ಚಿಲ್ಲರೆ ಮಾರಾಟ, ಮಾಂಸ ಮತ್ತು ಕೋಳಿ ವ್ಯಾಪಾರಗಳು, ಬೇಕರಿಗಳು ಮತ್ತು ತಿನಿಸುಗಳು: ಮುಸ್ಲಿಮರು ಈ ಕ್ಷೇತ್ರಗಳಿಗೂ ಗಣನೀಯ ಕೊಡುಗೆ ನೀಡುತ್ತಾರೆ.
ಈ ಕ್ಷೇತ್ರಗಳಲ್ಲಿ ಮುಸ್ಲಿಮ್ ಸಮುದಾಯದ ಭಾಗವಹಿಸುವಿಕೆಯು ದೇಶದ ಆರ್ಥಿಕ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುತ್ತದೆ.
ರಾಷ್ಟ್ರೀಯ ಆರ್ಥಿಕತೆಯ ಮೇಲೆ ಪರಿಣಾಮ
ಭಾರತದ ಆರ್ಥಿಕತೆಯು ಮಾರಾಟ ಗಾರರು ಮತ್ತು ಖರೀದಿದಾರರ ನಡುವಿನ ಆಡು ಭಾಷೆಯ ಸಂಬಂಧವನ್ನು ಆಧರಿಸಿದೆ. ಧರ್ಮ, ಜಾತಿ ಅಥವಾ ಭಾಷೆಯನ್ನು ಮೀರಿ, ಪ್ರತಿಯೊಬ್ಬ ಭಾರತೀಯ ನಾಗರಿಕನು ಉತ್ಪಾದಿಸುತ್ತಾನೆ ಮತ್ತು ಬಳಸುತ್ತಾನೆ. ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯವು ಭಾರತದ ಒಟ್ಟು ಜಿಡಿಪಿಗೆ ಸರಿ ಸುಮಾರು 11-12% ರಷ್ಟು ಕೊಡುಗೆ ನೀಡುತ್ತದೆ.
NSSEO, 2018 ವರದಿ ಪ್ರಕಾರ ಮುಸ್ಲಿಮರು ಸಣ್ಣ ಕೈಗಾರಿಕೆಗಳು, ಕರಕುಶಲ ವಸ್ತುಗಳು, ಜವಳಿ, ಬೇಕರಿಗಳು, ಹಣ್ಣಿನ ಮಾರುಕಟ್ಟೆಗಳು, ಟ್ಯಾಕ್ಸಿ ಸೇವೆಗಳು ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಬಲವಾದ ಉಪಸ್ಥಿತಿಯನ್ನು ಹೊಂದಿದ್ದಾರೆ.
ಭಯ ಅಥವಾ ನಿಜವಾದ ಬಹಿಷ್ಕಾರಗಳಿಂದಾಗಿ ಈ ಸಮುದಾಯವನ್ನು ಆರ್ಥಿಕ ವಾಹಿವಾಟಿನಿಂದ ಹೊರಗಿಟ್ಟರೆ, ಇಡೀ ಆರ್ಥಿಕ ಸರಪಳಿಯೇ ಅಸ್ತವ್ಯಸ್ತವಾಗುತ್ತದೆ. ಹಣ್ಣಿನ ವ್ಯಾಪಾರಿಗಳನ್ನು ಬಹಿಷ್ಕಾರಿಸುವುದರಿಂದ ರೈತನ ಉತ್ಪನ್ನಗಳಿಗೆ ಮಾರುಕಟ್ಟೆ ಸಿಗುವುದಿಲ್ಲ. ಟ್ಯಾಕ್ಸಿ ಚಾಲಕರನ್ನು ಬಹಿಷ್ಕರಿಸುವುದರಿಂದ ವಾಹನ ತಯಾರಕರ ಉತ್ಪನ್ನಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಮೇಕ್ ಇನ್ ಇಂಡಿಯಾ' ಮತ್ತುಸ್ಟಾರ್ಟ್ಅಪ್ ಇಂಡಿಯಾ’ ನಂತಹ ಸರಕಾರಿ ಉಪಕ್ರಮಗಳಿಗೆ ನೇರವಾಗಿ ಬೆದರಿಕೆ ಹಾಕುತ್ತದೆ.
ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ, ಆರ್ಥಿಕ ಸಾಮಾಜಿಕ ಬಹಿಷ್ಕಾರವು ಅ ನೌಪಚಾರಿಕ ನಿರ್ಬಂಧವಾಗಿರಬಹುದು. ಆದರೆ ಅದರ ಪರಿಣಾಮಗಳು ಔಪಚಾರಿಕ ಬಿಕ್ಕಟ್ಟಿನಷ್ಟೇ ತೀವ್ರವಾಗಿರುತ್ತದೆ. ಮಾರುಕಟ್ಟೆ ಅಸ್ಥಿರತೆ, ಉದ್ಯೋಗ ನಷ್ಟಗಳು ಮತ್ತು ನಂಬಿಕೆಯ ಕೊರತೆ.
ಭಾರತದ ಆರ್ಥಿಕತೆಯ 90% ಅನೌಪಚಾರಿಕ ವಲಯದ ಮೇಲೆ ಅವಲಂಬಿತವಾಗಿದೆ. ಅಲ್ಲಿ ಅಲ್ಪಸಂಖ್ಯಾ ತರು-ವಿಶೇಷವಾಗಿ ಮುಸ್ಲಿಮರು ಗಮ ನಾರ್ಹವಾಗಿ ಭಾಗವಹಿಸುತ್ತಾರೆ. ಉದಾಹರಣೆಗೆ:
- ಜವಳಿ ಉದ್ಯಮದಲ್ಲಿ ಮುಸ್ಲಿಮರ ಪಾಲು 36%.
- ಚರ್ಮದ ಕರಕುಶಲ ವಸ್ತುಗಳು, ಹಣ್ಣಿನ ಮಾರುಕಟ್ಟೆಗಳು, ಟ್ಯಾಕ್ಸಿ ಸೇವೆಗಳು ಮತ್ತು ಚಿಲ್ಲರೆ ವ್ಯಾಪಾರದಲ್ಲಿ 25-30%.
- ಸಣ್ಣ ಮತ್ತು ಗುಡಿ ಕೈಗಾರಿಕೆ ಯಲ್ಲಿ 20% ರಷ್ಟು ಮುಸ್ಲಿಮ್ ಉದ್ಯಮಿಗಳಿದ್ದಾರೆ.
ಈ ವಲಯಗಳು ಸಾಮಾಜಿಕ ಮಾತ್ರವಲ್ಲದೆ ರಾಷ್ಟ್ರೀಯ ಉತ್ಪಾದನೆಯನ್ನು ಹೆಚ್ಚಿಸುತ್ತವೆ, ಉದ್ಯೋಗಗಳನ್ನು ಸೃಷ್ಟಿಸುತ್ತವೆ ಮತ್ತು ಸ್ಥಳೀಯ ಮಾರುಕಟ್ಟೆಗಳನ್ನು ಮುನ್ನಡೆಸುತ್ತವೆ. ಬಹಿಷ್ಕಾರಗಳು ಈ ಸರಪಳಿಯನ್ನು ಅಡ್ಡಿ ಪಡಿಸುತ್ತವೆ.
ಉದಾಹರಣೆಗೆ, ಒಂದು ನಗರದಲ್ಲಿ ಮುಸ್ಲಿಮ್ ಹಣ್ಣು ಮಾರಾಟಗಾರರನ್ನು ಬಹಿಷ್ಕರಿಸಿದರೆ ಅದು ಎಲ್ಲಾ ಹಂತಗಳ ರೈತರು, ಸಾಗಣೆದಾರರು ಮತ್ತು ವ್ಯಾಪಾರಿಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಒಟ್ಟಾರೆ ಆರ್ಥಿಕ ಚಟುವಟಿಕೆಗಳ ಮೇಲೆ ನಕಾರತ್ಮಕ ಪರಿಣಾಮ ಬೀರುತ್ತದೆ.
ಇದಲ್ಲದೆ, ಇಂತಹ ಘಟನೆಗಳು ಅಂತಾರಾಷ್ಟಿçÃಯವಾಗಿ ಭಾರತದ `ವ್ಯವ ಹಾರ ಮಾಡುವ ಸುಲಭತೆ’ ಮತ್ತು ಬೆಳವಣಿಗೆಯ ಇಮೇಜಿಗೆ ಮಸಿ ಬಳಿಯುತ್ತದೆ.
ಆರ್ಥಿಕ ಬಹಿಷ್ಕಾರಗಳ ಸಂಭಾವ್ಯ ಪರಿಣಾಮಗಳು
ಧರ್ಮ-ಆಧಾರಿತ ಆರ್ಥಿಕ ಬಹಿಷ್ಕಾರಗಳು ದೇಶದ ಆರ್ಥಿಕತೆಯ ಮೇಲೆ ಈ ಕೆಳಗಿನ ಪರಿಣಾಮಗಳನ್ನು ಬೀರಬಹುದು:
- ಬಳಕೆಯಲ್ಲಿನ ಕುಸಿತ: ಮುಸ್ಲಿಮ್ ಸಮುದಾಯದ ಆರ್ಥಿಕ ಚಟುವಟಿಕೆಗಳನ್ನು ಬಹಿಷ್ಕರಿಸುವುದರಿಂದ ಬಳಕೆ ಕಡಿಮೆಯಾಗಬಹುದು. ಇದು ಒಟ್ಟಾರೆ ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.
- ಆದಾಯ ಕಡಿತ: ಅನೌಪಚಾರಿಕ ವಲಯದ ವ್ಯವಹಾರಗಳನ್ನು ಬಹಿಷ್ಕರಿಸುವುದರಿಂದ ದೇಶದ ಒಟ್ಟು GVA ಗಣನೀಯವಾಗಿ ಕಡಿಮೆಯಾಗಬಹುದು.
- ಉದ್ಯೋಗದ ಮೇಲೆ ಪರಿಣಾಮ: ಬಹಿಷ್ಕಾರಗಳು ಅನೌಪಚಾರಿಕ ವಲಯದಲ್ಲಿ ಮುಸ್ಲಿಮರ ಉದ್ಯೋಗದ ಮೇಲೆ ಪರಿಣಾಮ ಬೀರಬಹುದು. ಇದು ನಿರುದ್ಯೋಗವ ನ್ನು ಹೆಚ್ಚಿಸುವ ಸಾಧ್ಯತೆ ಇದೆ.
- ಸಾಮಾಜಿಕ ಉದ್ವಿಗ್ನತೆ: ಆರ್ಥಿಕ ಬಹಿಷ್ಕಾರಗಳು ಸಾಮಾಜಿಕ ಉದ್ವಿಗ್ನತೆ ಯನ್ನು ಹೆಚ್ಚಿಸಬಹುದು. ಇದು ದೇಶದ ಸಾಮಾಜಿಕ ಸಾಮರಸ್ಯದ ಮೇಲೆ ಪರಿಣಾಮ ಬೀರುತ್ತದೆ.
- ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಪರಿಣಾಮ: ಮುಸ್ಲಿಮ್ ಸಮುದಾಯದ ಮೇಲೆ ಬಹಿಷ್ಕಾರಗಳು ಅವರ ಜೀವನ ಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
ಸಾಮಾಜಿಕ ದ್ವೇಷ ಮತ್ತು ರಾಷ್ಟ್ರೀಯ ಏಕತೆಗೆ ಬೆದರಿಕೆ
ಧರ್ಮ ಆಧಾರಿತ ಬಹಿಷ್ಕಾರಗಳು ಕೇವಲ ಆರ್ಥಿಕ ಸಮಸ್ಯೆಯಲ್ಲಿ ಬದಲಾಗಿ ಅವು ಸಾಮಾಜಿಕ ಅಸಮಾನತೆಯ ಆಳವಾಗಿ ಬೇರೂರಿರುವ ಮರವಾಗಿದೆ. ಬಹಿಷ್ಕಾರಕ್ಕೆ ಕರೆ ನೀಡುವುದರಿಂದ ಸಮಾಜದಲ್ಲಿ ದ್ವೇಷ, ಅನುಮಾನ ಮತ್ತು ಹಗೆತನದ ವಾತಾವರಣ ಸೃಷ್ಟಿಯಾಗುತ್ತದೆ. ಆಗಾಗ್ಗೆ, ಈ ವಾತಾವರಣವು ಹಿಂಸಾತ್ಮಕವಾಗುತ್ತದೆ. ಶಾಲಾ ಮಕ್ಕಳಿಗೆ ಅವಮಾನ, ಸಾರ್ವಜನಿಕ ಅವಮಾನ, ದೈಹಿಕ ಹಲ್ಲೆ ಇತ್ಯಾದಿ.
2022ರ ಸಿಡಿಎಸ್ ಸಮೀಕ್ಷೆಯ ಪ್ರಕಾರ 35% ಮುಸ್ಲಿಮ್ ನಾಗರಿಕರು ಭಾರತದಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿಲ್ಲ ಎಂದು ಭಾವಿಸುತ್ತಾರೆ.
ಬಹಿಷ್ಕಾರ ಅಭಿಯಾನಗಳು ಈ ಮನಸ್ಥಿತಿಯನ್ನು ಮತ್ತಷ್ಟು ಅಂಧಕಾರ ಗೊಳಿಸುತ್ತದೆ.
ಇಂತಹ ವಾತಾವರಣವು ನಾಗರಿಕರಲ್ಲಿ ಅಭದ್ರತೆಯನ್ನು ಹೆಚ್ಚಿಸುತ್ತದೆ. ಇದು ರಾಷ್ಟ್ರೀಯ ಏಕತೆಗೆ ಅತ್ಯಂತ ಹಾನಿಕರವಾಗಿದೆ.
“ವೈವಿಧ್ಯತೆಯಲ್ಲಿ ಏಕತೆ” ಭಾರತದ ಆತ್ಮ. ಬಹಿಷ್ಕಾರಗಳು ಈ ಆತ್ಮವನ್ನು ಕೊಳೆಯುವಂತೆ ಮಾಡುತ್ತವೆ.
ಸಾಂವಿಧಾನಿಕ ಮತ್ತು ಕಾನೂನು ಚೌಕಟ್ಟಿನೊಳಗಿನ ಪರಿಹಾರಗಳು
ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ವೈಯಕ್ತಿಕ ಸ್ವಾತಂತ್ರ್ಯ, ಸಮಾನತೆ ಮತ್ತು ಅವರ ವೃತ್ತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯದ ಖಾತರಿ ನೀಡುತ್ತದೆ. ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದು ಆರ್ಟಿಕಲ್ 15 ಅನ್ನು ಉಲ್ಲಂಘಿಸುತ್ತದೆ. IPC ಸೆಕ್ಷನ್ 153A (ಧರ್ಮ, ಜನಾಂಗ, ಜನ್ಮಸ್ಥಳ ಇತ್ಯಾದಿಗಳ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 505(2) (ಸಮಾಜದಲ್ಲಿ ದ್ವೇಷವನ್ನು ಸೃಷ್ಟಿಸುವ ಹೇಳಿಕೆಗಳು) ಅಡಿಯಲ್ಲಿ ಬಹಿಷ್ಕಾರದ ಕರೆಗಳ ವಿರುದ್ಧ ಕಾ ನೂನು ಕ್ರಮ ತೆಗೆದುಕೊಳ್ಳಬಹುದು.
ಹೆಚ್ಚುವರಿಯಾಗಿ ವಿಧಿ 19(1) (g) ಪ್ರತಿಯೊಬ್ಬರಿಗೂ ತಮ್ಮ ವೃತ್ತಿ, ವ್ಯಾಪಾರ ಅಥವಾ ಕಾನೂನು ಬದ್ಧ ವ್ಯವಹಾರವನ್ನು ಮುಕ್ತವಾಗಿ ಆಯ್ಕೆ ಮಾಡುವ ಹಕ್ಕನ್ನು ನೀಡುತ್ತದೆ.
ಭಾರತೀಯ ನ್ಯಾಯಸಂಹಿತಾ (ಬಿಎನ್ಎಸ್) 2023ರ ಅಡಿಯಲ್ಲಿ ಧಾರ್ಮಿಕ ದ್ವೇಷವನ್ನು ಹರಡುವುದು, ದ್ವೇಷವನ್ನು ಸೃಷ್ಟಿಸುವುದು ಅಥವಾ ಆರ್ಥಿಕ ಬಹಿಷ್ಕಾರಗಳಂತಹ ಹಿಂಸಾತ್ಮಕ ಸವಾಲುಗಳನ್ನು ನೀಡುವುದು ಕ್ರಿಮಿನಲ್ ಕೃತ್ಯಗಳಾಗಿವೆ.
ಹೀಗಾಗಿ ಮುಸ್ಲಿಮ್ ಮಾರಾಟಗಾರರನ್ನು ಬಹಿಷ್ಕರಿಸುವುದು ಅಥವಾ ಅವರಿಂದ ಖರೀದಿಗಳನ್ನು ನಿಷೇಧಿಸುವುದು ಕೇವಲ ಅಘೋಷಿತ ಸಾಮಾಜಿಕ ಹಿಂಸೆಯಲ್ಲ, ಬದಲಾಗಿ ಸಾಂವಿಧಾನಿಕ ಅಪರಾಧವೂ ಆಗಿದೆ.
(ಕೃಪೆ: ರೇಡಿಯನ್ಸ್)












