ಸನ್ಮಾರ್ಗ ವಾರ್ತೆ
ಒಬ್ಬರು ಐ ಲವ್ ಯು ಎಂದು ಹೇಳುವುದು ಭಾವನಾತ್ಮಕ ವ್ಯಕ್ತಗೊಳಿಸುವಿಕೆ ಮಾತ್ರವೇ ಹೊರತು ಅದಕ್ಕೆ ಲೈಂಗಿಕ ಉದ್ದೇಶ ಇಲ್ಲ ಎಂದು ಬಾಂಬೆ ಹೈಕೋರ್ಟ್ ನ ನಾಗಪುರ್ ಪೀಠ ಹೇಳಿದೆ. 2015ರಲ್ಲಿ ಅಪ್ರಾಪ್ತೆಯನ್ನು ಪೀಡಿಸಿದ ಪ್ರಕರಣದಲ್ಲಿ 35 ವರ್ಷದ ಆರೋಪಿಯನ್ನು ದೋಷ ಮುಕ್ತಗೊಳಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅನುಚಿತವಾದ ಸ್ಪರ್ಶ, ಉದ್ದೇಶಪೂರ್ವಕವಾಗಿ ವಸ್ತ್ರವನ್ನು ಸ್ಪರ್ಶಿಸುವುದು, ಅಸಭ್ಯ ಅಂಗೀಕ ಅಭಿನಯ, ಮಹಿಳೆಯ ಗೌರವವನ್ನು ಅಪಮಾನಿಸುವುದು ಇತ್ಯಾದಿ ಉದ್ದೇಶಗಳುಳ್ಳ ಅಭಿಪ್ರಾಯಗಳನ್ನು ಮಾತ್ರ ಲೈಂಗಿಕ ಪೀಡನೆಯ ವ್ಯಾಪ್ತಿಯೊಳಗೆ ನೋಡಬಹುದಾಗಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ನಾಗಪುರದ 17 ವರ್ಷದ ಯುವತಿಯ ಕೈಹಿಡಿದು ಐ ಲವ್ ಯು ಎಂದು ಹೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2017ರಲ್ಲಿ ನಾಗಪುರದ ಸೆಶನ್ಸ್ ನ್ಯಾಯಾಲಯವು ಪೋಕ್ಸೋ ಕಾಯ್ದೆಯ ಅನ್ವಯ ಈ ವ್ಯಕ್ತಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆದರೆ ಲೈಂಗಿಕವಾಗಿ ಪೀಡಿಸಿದ ಯಾವುದಕ್ಕೂ ಆಧಾರ ಇಲ್ಲ ಎಂದು ಇದೀಗ ಹೈಕೋರ್ಟ್ ತೀರ್ಪು ನೀಡಿ ಶಿಕ್ಷೆಯನ್ನು ರದ್ದುಪಡಿಸಿದೆ.












