ನಾಗರಿಕ ಸುರಕ್ಷಿತತೆಗೆ ತಕ್ಷಣ ಸುಧಾರಣಾ ಕ್ರಮಗಳನ್ನು ಕೈಗೊಳ್ಳಿ: ಜಮಾಅತೆ ಇಸ್ಲಾಮಿ ಹಿಂದ್ ಆಗ್ರಹ

0
503

ಸನ್ಮಾರ್ಗ ವಾರ್ತೆ

ಸಾರ್ವಜನಿಕ ಸುರಕ್ಷತೆಯ ವಿಷಯದಲ್ಲಿ ಗಂಭೀರ ಪ್ರಮಾದಗಳಾಗುತ್ತಿದ್ದು ತಕ್ಷಣ ರಾಷ್ಟ್ರೀಯ ಮಟ್ಟದಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ಆಗ್ರಹಿಸಿದೆ. ಇತ್ತೀಚೆಗೆ ತೆಲಂಗಾಣದ ಕಾರ್ಖಾನೆಯಲ್ಲಿ ನಡೆದ ಸ್ಫೋಟ ಪ್ರಕರಣ, ಪುರಿ ಜಗನ್ನಾಥ ದೇವಸ್ಥಾನದ ರಥಯಾತ್ರೆಯಲ್ಲಿ ನಡೆದ ಕಾಲ್ತುಳಿತ ಮತ್ತು ಅಹಮದಾಬಾದ್ ನಲ್ಲಿ ನಡೆದ ವಿಮಾನ ಅಪಘಾತದ ಹಿನ್ನೆಲೆಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಈ ಆಗ್ರಹವನ್ನು ವ್ಯಕ್ತಪಡಿಸಿದೆ.

ಕಳೆದ ಆರು ತಿಂಗಳಲ್ಲಿ ದೇಶ ಹಲವು ಬೆಂಕಿ ಅನಾಹುತಗಳು, ಕಟ್ಟಡಗಳ ಕುಸಿತ ಹಾಗೂ ಕಾಲ್ತುಳಿತಕ್ಕೆ ಸಾಕ್ಷಿಯಾಗಿದೆ. ಇದು ಸಾರ್ವಜನಿಕ ಸುರಕ್ಷಿತತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊಫೆಸರ್ ಸಲೀಂ ಇಂಜಿನಿಯರ್ ಹೇಳಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತಾಡುತ್ತಾ ಅವರು ಈ ಬಗ್ಗೆ ಆರು ಅಂಶಗಳ ಸಲಹೆಯನ್ನು ನೀಡಿದ್ದಾರೆ.

ಇದೆ ವೇಳೆ ಗಾಝಾ ಮತ್ತು ಇರಾನ್ ಕುರಿತಾಗಿ ಮಾತಾಡಿದ ಅವರು ಗಾಝಾದಲ್ಲಿ ಎಲ್ಲಾ ನೈತಿಕ ಮತ್ತು ಮಾನವೀಯ ಮೇರೆಯನ್ನು ಇಸ್ರೇಲ್ ಮೀರಿದೆ. ಹಸಿವಿನಿಂದ ಬಳಲುತ್ತಿರುವವರ ಮೇಲೆ ಇಸ್ರೇಲ್ ಬಾಂಬ್ ಹಾಕ್ತಾ ಇರುವುದು ಅದರ ಕ್ರೌರ್ಯದ ಪರಮಾವಧಿಯನ್ನು ತೋರಿಸುತ್ತದೆ ಎಂದವರು ಹೇಳಿದ್ದಾರೆ.

ಇದೇ ವೇಳೆ ಮಾತಾಡಿದ ರಾಷ್ಟ್ರೀಯ ಕಾರ್ಯದರ್ಶಿ ಶಫಿ ಮದನಿ ಅವರು ಮಣಿಪುರದ ಹಿಂಸಾಚಾರ ಮತ್ತು ವರ್ಷಗಳ ಬಳಿಕವೂ ಅದನ್ನು ತಹಬದಿಗೆ ತರಲು ಕೇಂದ್ರ ಸರಕಾರ ವಿಫಲವಾಗಿರುವುದಕ್ಕೆ ಟೀಕೆ ವ್ಯಕ್ತಪಡಿಸಿದ್ದಾರೆ.