ಬಾಬಾ ರಾಮದೇವ್ ಆಪ್ತ ಬಾಲಕೃಷ್ಣ ಕಂಪನಿಗೆ 30,000 ಕೋಟಿ ಮೌಲ್ಯದ ಭೂಮಿ ‘ಕೇವಲ 1 ಕೋಟಿ ಬಾಡಿಗೆಗೆ’ – ಯಶ್ಪಾಲ್ ಆರ್ಯ ಆರೋಪ

0
453

ಸನ್ಮಾರ್ಗ ವಾರ್ತೆ

ಮಸ್ಸೂರಿ: ಉತ್ತರಾಖಂಡ ವಿರೋಧ ಪಕ್ಷದ ನಾಯಕ ಯಶ್ಪಾಲ್ ಆರ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ಭಾರೀ ಆರೋಪ ಮಾಡಿದ್ದಾರೆ. ಯೋಗಗುರು ಬಾಬಾ ರಾಮದೇವ್ ಅವರ ಆಪ್ತ ಬಾಲಕೃಷ್ಣ ಸಂಬಂಧಿತ ಕಂಪನಿಗೆ ಮಸ್ಸೂರಿಯ ಜಾರ್ಜ್ ಎವರೆಸ್ಟ್ ಎಸ್ಟೇಟ್‌ನ 30,000 ಕೋಟಿ ರೂ. ಮೌಲ್ಯದ 142 ಎಕರೆ ಭೂಮಿಯನ್ನು ಕೇವಲ 1 ಕೋಟಿ ರೂ. ವಾರ್ಷಿಕ ಬಾಡಿಗೆಗೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಸಿಬಿಐ ಅಥವಾ ನಿವೃತ್ತ ನ್ಯಾಯಾಧೀಶರ ಸಮಿತಿಯಿಂದ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಆರ್ಯ, ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು ಸರ್ಕಾರವು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ 23 ಕೋಟಿ ರೂ. ಸಾಲ ಪಡೆದಿದ್ದರೂ ಸಹ, ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕೇವಲ 15 ವರ್ಷಗಳ ಅವಧಿಗೆ ಖಾಸಗಿ ಕಂಪನಿಗೆ ನೀಡಿರುವುದು ಗಂಭೀರ ವಿಷಯ ಎಂದು ಟೀಕಿಸಿದ್ದಾರೆ.