ಮೈಸೂರು: HRS ವತಿಯಿಂದ ಎನ್‌ಜಿಓ ಮೀಟ್

0
316

ಸನ್ಮಾರ್ಗ ವಾರ್ತೆ

ನವೆಂಬರ್ 1 ರಂದು ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ (HRS) ವತಿಯಿಂದ ಮೈಸೂರಿನ ಮಸ್ಲಿಂ ಬಾಯ್ಸ್ ಆರ್ಫನೇಜ್ (ಅಪ್ನಾ ಘರ್) ನಲ್ಲಿ ಎನ್‌ಜಿಓ ಮೀಟ್‌ನ್ನು ಆಯೋಜಿಸಲಾಯಿತು. ನಗರದ ಹಲವು ಖ್ಯಾತ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ತಮ್ಮ ಸಂಸ್ಥೆಗಳ ಕಾರ್ಯವಿಧಾನಗಳ ಶಕ್ತಿಗಳು ಮತ್ತು ಸವಾಲುಗಳ ಕುರಿತು ವಿವರಿಸಿದರು.

ಸಭೆಯಲ್ಲಿ ಮಾತನಾಡುವ ವೇಳೆ ಸಮುದಾಯದ ನಿಧಿಗಳ ಒಂದು ದೊಡ್ಡ ಭಾಗವು ದಾನ ಧರ್ಮದ ಹೆಸರಿನಲ್ಲಿ ಅಸಮರ್ಪಕವಾಗಿ ಖರ್ಚಾಗುತ್ತಿರುವುದನ್ನು ವಿಷಾದ ವ್ಯಕ್ತಪಡಿಸಲಾಯಿತು. ಈ ಹಿನ್ನೆಲೆಯಲ್ಲಿ, ಇಂತಹ ದುರುಪಯೋಗವನ್ನು ತಡೆಗಟ್ಟುವಲ್ಲಿ ಎನ್‌ಜಿಓಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಲಾಯಿತು. ಮಸೀದಿಯ ಕೇಂದ್ರೀಕೃತ ಕಾರ್ಯಕ್ರಮಗಳ ಮೂಲಕ ಮತ್ತು ಅರ್ಹರಿಗೆ ಕ್ರಮಬದ್ಧವಾಗಿ ನೆರವು ನೀಡುವ ಮೂಲಕ ಈ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಬಹುದೆಂದು ಅಭಿಪ್ರಾಯ ವ್ಯಕ್ತವಾಯಿತು.

HRS ಉಪನಿರ್ದೇಶಕ ಜನಾಬ್ ಲಬೀದ್ ಶಫೀ ಅವರು ಮಾತನಾಡಿ, “ನಮ್ಮೊಳಗೆ ಅನೇಕ ಯುವಕರಿದ್ದಾರೆ. ಅವರ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ನಮ್ಮ ಸಮೂಹದ ಜವಾಬ್ದಾರಿ. ಬೇರೆ ಬೇರೆ ಕ್ಷೇತ್ರಗಳ ಎನ್‌ಜಿಓಗಳು ಪರಿಸ್ಥಿತಿಗೆ ಅನುಗುಣವಾಗಿ ಒಗ್ಗೂಡಿ, ಸಂಯೋಜಿತ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ತುರ್ತು ಸಂದರ್ಭಗಳಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಬಹುದು,” ಎಂದು ಹೇಳಿದರು.

ಕಾರ್ಯಕ್ರಮವು HRS ಗುಂಪಿನ ನಾಯಕ ಜನಾಬ್ ರಹ್ಮಾನ್ ಶರೀಫ್ ಅವರ ಸ್ವಾಗತ ಮತ್ತು ಪರಿಚಯ ಭಾಷಣದಿಂದ ಪ್ರಾರಂಭವಾಯಿತು. HRS ನ ಪರಿಚಯ ಹಾಗೂ ಕಾರ್ಯಕ್ರಮದ ವಿವರವನ್ನು HRS ಕಾರ್ಯದರ್ಶಿ ಮೊಹಮ್ಮದ್ ಹೈದರ ಅಲಿ ಅವರು ನೀಡಿದರು. ಕಾರ್ಯಕ್ರಮದ ಉದ್ದೇಶಗಳನ್ನು ಪ್ರಧಾನ ಕಾರ್ಯದರ್ಶಿ ಜನಾಬ್ ಮೊಹಮ್ಮದ್ ಮರಕಡಾ ಅವರು ವಿವರಿಸಿದರು.

ಸ್ಥಳೀಯ ಜಮಾಅತೆ ಇಸ್ಲಾಮಿ ಹಿಂದ್ (JIH) ಅಧ್ಯಕ್ಷ ಮೊಹಮ್ಮದ್ ಅಸ್ಲಂ ಅವರು ಶುಭಾಶಯಗಳನ್ನು ತಿಳಿಸಿ ಧನ್ಯವಾದ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು HRS ವಲಯದ ನಾಯಕ ಅಸದುಲ್ಲಾ ಅವರು ನಿರ್ವಹಿಸಿದರು.