ಸನ್ಮಾರ್ಗ ವಾರ್ತೆ
14 ವರ್ಷಕ್ಕಿಂತ ಕೆಳಗಿನ ಹೆಣ್ಣು ಮಕ್ಕಳಿಗೆ ತರಗತಿಯಲ್ಲಿ ಶಿರವಸ್ತ್ರ ಧರಿಸುವುದಕ್ಕೆ ಆಸ್ಟ್ರೇಲಿಯಾ ನಿಷೇಧ ಹೇರಿದೆ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿ ಯಾರಾದರೂ ತರಗತಿಗೆ ಹಾಜರಾದರೆ ಭಾರಿ ಮೊತ್ತದ ದಂಡ ನೀಡಬೇಕಾದೀತು ಎಂದು ಎಚ್ಚರಿಸಲಾಗಿದೆ ಶಿರವಸ್ತ್ರವನ್ನು ನಿಷೇಧಿಸಿದ ಮಸೂದೆಯನ್ನು ಪಾರ್ಲಿಮೆಂಟಿನಲ್ಲಿ ಭಾರಿ ಬಹುಮತದಿಂದ ಅಂಗೀಕರಿಸಲಾಗಿದೆ.
ಈ ಹಿಂದೆ 2019 ರಲ್ಲಿ ಇಂಥದ್ದೇ ನಿಯಮವನ್ನು ಪಾರ್ಲಿಮೆಂಟ್ ಅಂಗೀಕರಿಸಿತ್ತು. ಆಗ ಹತ್ತು ವರ್ಷಕ್ಕಿಂತ ಕೆಳಗಿನ ಮಕ್ಕಳು ಶಿರವಸ್ತ್ರ ಧರಿಸುವುದನ್ನು ನಿಷೇಧಿಸಲಾಗಿತ್ತು. ಆದರೆ ಮುಂದಿನ ವರ್ಷ ಈ ನಿಯಮವನ್ನು ರದ್ದು ಮಾಡಲಾಯಿತು. ಈ ನಿಯಮವು ಸಂವಿಧಾನದ ವಿರೋಧಿ ಮತ್ತು ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ತೋರಿಸುವ ತಾರತಮ್ಯ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ನಿಯಮವನ್ನು ರದ್ದುಪಡಿಸಲಾಗಿತ್ತು. ಇದೀಗ ಈ ನಿಯಮವನ್ನು ಸಮರ್ಥಿಸುವುದಕ್ಕೆ ನ್ಯಾಯಾಲಯದಲ್ಲಿ ಸಂಪೂರ್ಣ ಪ್ರಯತ್ನ ನಡೆಸಲಾಗುವುದು ಎಂದು ಆಸ್ಟ್ರೇಲಿಯಾ ಸರ್ಕಾರ ಸ್ಪಷ್ಟಪಡಿಸಿದೆ.
ಈ ನಿಯಮವನ್ನು ಆಸ್ಟ್ರೇಲಿಯಾದ ಪ್ರಮುಖ ಪಕ್ಷಗಳು ಸ್ವಾಗತಿಸಿದ್ದು ಗ್ರೀನ್ಸ್ ಪಾರ್ಟಿ ಮಾತ್ರ ವಿರೋಧಿಸಿದೆ.












