ಒಡಿಸ್ಸಾ: ಬಾಂಗ್ಲಾದೇಶದ ನುಸುಳುಕೋರ ಎಂದು ಜುವೆಲ್ ಶೇಕ್ ರನ್ನು ಥಳಿಸಿ ಹತ್ಯೆ ಮಾಡಿದ ದುಷ್ಕರ್ಮಿಗಳು

0
378

ಸನ್ಮಾರ್ಗ ವಾರ್ತೆ

ಒಡಿಸ್ಸಾದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂಸಾ ಕೃತ್ಯಗಳಲ್ಲಿ ಹೆಚ್ಚಳವಾಗಿದೆ.

ದಿನಗಳ ಹಿಂದೆ ಕ್ರಿಸ್ಮಸ್ ಆಚರಿಸುತ್ತಿದ್ದವರ ಮೇಲೆ ಒಡಿಶಾದಲ್ಲಿ ಸರಣಿ ದಾಳಿಗಳು ನಡೆದ ಬಗ್ಗೆ ವಿಡಿಯೋ ಸಹಿತ ವರದಿಯಾಗಿತ್ತು.

ಇದೀಗ ಬಾಂಗ್ಲಾದೇಶದ ನುಸುಳುಕೋರ ಎಂದು ಹೇಳಿ ಪಶ್ಚಿಮ ಬಂಗಾಳದಿಂದ ಬಂದ ವ್ಯಕ್ತಿಯನ್ನು ಥಳಿಸಿ ಹತ್ಯೆ ಮಾಡಲಾಗಿದೆ.

ಒಡಿಶಾದ ಸಂಬಲ್ಪುರದಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಜುವೆಲ್ ಶೇಕ್ ಎಂಬವರನ್ನು ಥಳಿಸಿ ಹತ್ಯೆ ಮಾಡಲಾಗಿದೆ. ನಗರದ ಶಾಂತಿನಗರ ಪ್ರದೇಶದ ಒಂದು ಚಹಾದಂಗಡಿಯಲ್ಲಿ ಈ ಕ್ರೌರ್ಯ ನಡೆದಿದೆ.

ಕೆಲಸ ಮುಗಿದ ಬಳಿಕ ಇತರ ಮೂವರು ಕೆಲಸಗಾರರೊಂದಿಗೆ ಶೇಕ್ ಒಂದು ಚಹಾದಂಗಡಿ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಐದು ಮಂದಿ ಅಲ್ಲಿಗೆ ಪ್ರವೇಶಿಸಿದರು. ನಿಮ್ಮ ಗುರುತನ್ನು ಹೇಳುವ ದಾಖಲೆ ಪತ್ರವನ್ನು ಕೊಡಿ ಎಂದು ಆಗ್ರಹಿಸಿದರು. ಮಾತ್ರ ಅಲ್ಲ ನೀವು ಬಾಂಗ್ಲಾದೇಶದಿಂದ ಬಂದ ನುಸುಳುಕೋರರು ಎಂದು ಹೇಳಿ ದೌರ್ಜನ್ಯ ನಡೆಸಲು ಪ್ರಾರಂಭಿಸಿದರು. ಇವರು ಅಧಿಕೃತ ಗುರುತು ಚೀಟಿಯನ್ನು ತೋರಿಸಿದರೂ ಅವರು ದೌರ್ಜನ್ಯವನ್ನು ನಿಲ್ಲಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಉಳಿದವರು ಅಲ್ಲಿಂದ ಓಡಿ ತಪ್ಪಿಸಿಕೊಂಡರು. ಶೇಕ್ ಅವರನ್ನು ಥಳಿಸಿ ಹತ್ಯೆ ಮಾಡಿದ್ರು. ಇವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಶೇಕ್ ಅವರ ಹತ್ಯೆಯನ್ನು ಅವರ ಪಶ್ಚಿಮ ಬಂಗಾಳದಲ್ಲಿರುವ ಕುಟುಂಬಕ್ಕೆ ತಿಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.