ಪ್ರಬೋಧನಂ ಪತ್ರಿಕೆಯ ಮೇಲೆ ಕೇಂದ್ರ ಸರಕಾರ ಕೆಂಗಣ್ಣು: ತನಿಖೆಗೆ ಸಿದ್ಧತೆ?

0
426

ಸನ್ಮಾರ್ಗ ವಾರ್ತೆ

ಕೇರಳದ ಪ್ರಬೋಧನಂ ವಾರಪತ್ರಿಕೆಯ ಮೇಲೆ ಕೇಂದ್ರೀಯ ಏಜೆನ್ಸಿಗಳು ನಿಗಾ ಇಟ್ಟಿದ್ದು ದೇಶ ವಿರೋಧಿ ವಿಚಾರಗಳನ್ನು ಪ್ರಕಟಿಸಿದ ಆರೋಪದ ಮೇಲೆ ತನಿಖೆ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ಆರ್‌ಎಸ್‌ಎಸ್‌ ಮುಖವಾಣಿ ಆರ್ಗನೈಸರ್ ಪತ್ರಿಕೆ ಬರೆದಿದೆ. ಈ ಪತ್ರಿಕೆಯು ನಿರಂತರವಾಗಿ ಬಾಂಗ್ಲಾದೇಶದ ಪರವಾಗಿ ಬರಹಗಳನ್ನು ಪ್ರಕಟಿಸುತ್ತಿದೆ ಮತ್ತು ಭಾರತ ವಿರೋಧಿ ಸಂದರ್ಶನಗಳನ್ನು ನಡೆಸುತ್ತಿದೆ ಎಂದು ಪತ್ರಿಕೆ ಆರೋಪಿಸಿದೆ.

ಪ್ರಬೋಧನ ಪತ್ರಿಕೆಯು ಭಾರತ ವಿರೋಧಿ ನಿಲುವುಗಳು ಮತ್ತು ದೃಷ್ಟಿಕೋನವುಳ್ಳ ಬಾಂಗ್ಲಾದೇಶದ ಜಮಾಅತೆ ಇಸ್ಲಾಮಿಯ ನಾಯಕರಾದ ಡಾ. ಶಫೀಕು ರೆಹಮಾನ್ ಮತ್ತು ಇನ್ನೊಬ್ಬ ಹಿರಿಯ ನಾಯಕ ನಜೀಬು ರ್ರಹ್ಮಾನ್ ಅವರ ಸಂದರ್ಶನಗಳನ್ನು ಪ್ರಕಟಿಸಿದೆ ಎಂದು ಪತ್ರಿಕೆ ಆರೋಪಿಸಿದೆ.

ಜನವರಿ 30ರ ಸಂಚಿಕೆಯಲ್ಲಿ ಪ್ರಬೋಧ ನಮ್ ಪತ್ರಿಕೆ ಡಾ.ಶಫೀಕು ರಹಮಾನ್ ಅವರ ಜೊತೆಗಿನ ಸಂದರ್ಶನವನ್ನು ಪ್ರಕಟಿಸಿದೆ. ಇದನ್ನು ಅಲ್ ಜಝೀರ ಪ್ರಕಟಿಸಿತ್ತು. ಅದರಿಂದ ಪ್ರಬೋಧ ನಮ್ ಅನುವಾದ ಮಾಡಿದೆ ಎಂದು ಆರ್ಗನೈಸರ್ ಪತ್ರಿಕೆ ಬರೆದಿದೆ.

ಹಾಗೆಯೇ 2024 ಸೆಪ್ಟೆಂಬರ್ ಆರರಂದು ಶಫೀಕು ರಹಮಾನ್ ಅವರ ಸಂದರ್ಶನ ಪ್ರಕಟಿಸಲಾಗಿದ್ದು ಅದರಲ್ಲಿ ಶೇಕ್ ಹಸೀನಾ ಅವರನ್ನು ಗಡಿಪಾರು ಮಾಡುವಂತೆ ಅವರು ಆಗ್ರಹಿಸಿದ್ದಾರೆ ಎಂದು ಪತ್ರಿಕೆ ಬರೆದಿದೆ. ಈ ಸಂದರ್ಶನವನ್ನು ತುರ್ಕಿಯ ಇಸ್ಲಾಮಿಕ್ ಮೀಡಿಯಾ ನೆಟ್ವರ್ಕ್ ನಡೆಸಿದ್ದು ಅದರ ಅನುವಾದ ಇದಾಗಿದೆ ಎಂದು ಆರ್ಗನೈಸರ್ ಬರೆದಿದೆ.

ಬಾಂಗ್ಲಾದೇಶದಲ್ಲಿ ನೇಣು ಶಿಕ್ಷೆಗೆ ಒಳಗಾದ ಮುತೀವು ರೆಹಮಾನ್ ನಿಜಾಮಿ ಅವರ ಮಗ ನಜೀಬ್ ರೆಹಮಾನ್ ನಿಜಾಮಿ ಅವರ ಸಂದರ್ಶನವನ್ನು ಕೂಡ ಪ್ರಬೋಧ ನಮ್ ಪತ್ರಿಕೆ ಪ್ರಕಟಿಸಿದೆ. ಈ ಸಂದರ್ಶನವನ್ನು ಅಲ್ ಜಝೀರಾ ನಡೆಸಿತ್ತು ಎಂದು ಆರ್ಗನೈಸರ್ ಪತ್ರಿಕೆ ಬರೆದಿದೆ.