ಅಲ್ಲಾಹು ಅಕ್ಬರ್ ಎಂದು ಘೋಷಿಸಬಾರದು… ಮೇಘಾಲಯದಲ್ಲಿ ಗುಂಪಿನಿಂದ ಬೆದರಿಕೆ, ಮಸೀದಿ ದಾಳಿ

0
605

ಸನ್ಮಾರ್ಗ ವಾರ್ತೆ

ಮೇಘಾಲಯದಲ್ಲಿ ತುರಾ ಜಮಾ ಮಸೀದಿಯ ಮೇಲೆ ದಾಳಿ ನಡೆದಿರುವುದನ್ನು ಶಿಲ್ಲಾಂಗ್ ಮುಸ್ಲಿಂ ಫಾರಂ ತೀವ್ರವಾಗಿ ಖಂಡಿಸಿದೆ. ವೆಸ್ಟ್ ಗಾರೋ ಹಿಲ್ಸ್ ನಲ್ಲಿ ಈ ದಾಳಿ ನಡೆದಿದ್ದು ಧಾರ್ಮಿಕ ಸಂಸ್ಥೆಗಳು ಮತ್ತು ಅಲ್ಪಸಂಖ್ಯಾತರ ರಕ್ಷಣೆಗೆ ಮುಂದಾಗುವಂತೆ ಮುಖ್ಯಮಂತ್ರಿ ಕೊನಾರ್ಡ್ ಸಂಗ್ಮಾರಲ್ಲಿ ಫಾರಂ ಮನವಿ ಮಾಡಿದೆ.

ಮೇಘಾಲಯಕ್ಕೆ ಶಾಂತಿ ಮತ್ತು ಸಾಮರಸ್ಯದ ದೀರ್ಘ ಇತಿಹಾಸ ಇದ್ದು ಇತ್ತೀಚಿಗೆ ಅದನ್ನು ಕದಡಲಾಗುತ್ತಿದೆ. ಮಸೀದಿಯಲ್ಲಿ ನಾಶ ನಷ್ಟವನ್ನು ಉಂಟು ಮಾಡಲಾಗಿದೆ. ದೊಂಬಿಯ ಬೆದರಿಕೆ ಹಾಕಲಾಗಿದೆ. ಮುಖ್ಯಮಂತ್ರಿ ಅವರು ಈ ಬಗ್ಗೆ ಗಮನ ಹರಿಸಬೇಕು ಎಂದು ಫಾರಂ ಆಗ್ರಹಿಸಿದೆ.

ಮೇಘಾಲಯದಲ್ಲಿ ಅಲ್ಲಾಹು ಅಕ್ಬರ್ ಎಂದು ಘೋಷಿಸಬಾರದು ಎಂದು ಗುಂಪು ಘೋಷಿಸಿರುವುದನ್ನು ಶಿಲ್ಲಾಂಗ್ ಮುಸ್ಲಿಂ ಫಾರಂ ವಿಶೇಷವಾಗಿ ಪತ್ರದಲ್ಲಿ ಉಲ್ಲೇಖಿಸಿದೆ. ಇದು ಪರಿಸ್ಥಿತಿಯ ಗಂಭೀರತೆಯನ್ನು ಹೇಳುತ್ತದೆ. ದೇವನು ದೊಡ್ಡವನು ಎಂಬುದು ಅಲ್ಲಾಹು ಅಕ್ಬರ್ ಎಂಬ ಘೋಷಣೆಯ ಅರ್ಥವಾಗಿದ್ದು ಸಾರ್ವಜನಿಕರು ಈ ವಿಚಾರವನ್ನು ಎತ್ತಿಕೊಂಡು ಕೋಮು ಸಾಮರಸ್ಯವನ್ನು ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿದೆ.