ತಂದೆಯ ಮೇಲೆ ಒತ್ತಡ ಹೇರುವುದಕ್ಕಾಗಿ ಒಂದೂವರೆ ವರ್ಷದ ಮಗುವಿಗೆ ಸಿಗರೇಟಿನಿಂದ ಸುಟ್ಟ ಇಸ್ರೇಲಿ ಸೈನಿಕರು

0
1026

ಸನ್ಮಾರ್ಗ ವಾರ್ತೆ

ಗಾಝಾದ ಅಲ್ ಮಸಾಸಿ ನಿರಾಶ್ರಿತ ಶಿಬಿರದ ಹತ್ತಿರ ಒಂದೂವರೆ ವಯಸ್ಸಿನ ಮಗುವಿಗೆ ಇಸ್ರೇಲಿ ಸೇನೆ ಚಿತ್ರಹಿಂಸೆ ನೀಡಿರುವ ಆಘಾತಕಾರಿ ಘಟನೆ ವರದಿಯಾಗಿದೆ ಈ ಮಗುವಿನ ತಂದೆ ಉಸಾಮ ನಾಸಿರ್ ತಪೊಪ್ಪಿಕೊಳ್ಳುವಂತೆ ಮಾಡುವುದಕ್ಕಾಗಿ ಈ ಮಗುವಿನ ಮೇಲೆ ಸೇನೆ ಕ್ರೌರ್ಯ ಎಸಗಿದೆ ಎಂದು ಫೆಲೆಸ್ತೀನಿ ಚಾನೆಲ್ ವರದಿ ಮಾಡಿದೆ.

ತನ್ನ ಒಂದೂವರೆ ವರ್ಷದ ಮಗ ಕರೀಂನ ಜೊತೆ ಪಡಿತರ ಖರೀದಿಸಲು ಹೋಗುತ್ತಿದ್ದಾಗ ಉಸಾಮ ಅಬು ನಾಸಿರ್ ಅವರನ್ನು ಇಸ್ರೇಲ್ ಸೇನೆ ತಡೆದಿರಿಸಿದೆ. ಮಗುವನ್ನು ನೆಲದಲ್ಲಿ ಮಲಗಿಸಲು ಆಗ್ರಹಿಸಿದ ಸೇನೆಯು , ಉಸಾಮ ಅವರನ್ನು ಬೆತ್ತಲೆ ಗೊಳಿಸಿ ಪ್ರಶ್ನಿಸಲು ಪ್ರಾರಂಭಿಸಿದೆ. ಅದೇ ವೇಳೆ ಈ ಮಗುವಿನ ಮೇಲೆ ಚಿತ್ರಹಿಂಸೆ ನೀಡಲು ಸೈನಿಕರು ಪ್ರಾರಂಭಿಸಿದ್ದಾರೆ.

ಮೆಡಿಕಲ್ ರಿಪೋರ್ಟ್ ಪ್ರಕಾರ ಮಗುವಿನ ಕಾಲಿಗೆ ಸಿಗರೇಟಿನಿಂದ ಸುಟ್ಟ ಗಾಯ ಇದೆ. ಹಾಗೆಯೇ ಕಾಲಿಗೆ ಆಣಿಯಂತಹ ಚೂಪಾದ ವಸ್ತುವಿನಿಂದ ಚುಚ್ಚಿದ ಗಾಯವಿದೆ. 10 ಗಂಟೆಗಳ ಕಾಲ ಈ ತಂದೆ ಮತ್ತು ಮಗುವನ್ನು ಇಸ್ರೇಲಿ ಸೈನಿಕರು ತಡೆದಿರಿಸಿದ್ದಾರೆ. ಆ ಬಳಿಕ ಈ ಮಗುವನ್ನು ರೆಡ್ ಕ್ರಾಸ್ ಮೂಲಕ ಕುಟುಂಬಕ್ಕೆ ಹಸ್ತರಿಸಲಾಗಿದೆ. ತಂದೆ ಈಗಲೂ ಇಸ್ರೇಲಿ ಸೇನೆಯ ಕಷ್ಟಡಿಯಲ್ಲಿದ್ದಾರೆ.