ಬಾಡಿ ಕ್ಯಾಮರಾ ಆಫ್ ಮಾಡಿ ಲಂಚ ವಸೂಲಿ: ಮೂವರು ಪೊಲೀಸ್ ಸಿಬಂದಿಗಳ ಅಮಾನತು

0
525

ಸನ್ಮಾರ್ಗ ವಾರ್ತೆ

ದೇಹಕ್ಕೆ ಧರಿಸಿರುವ ಬಾಡಿ ಕ್ಯಾಮರಾವನ್ನು ಆಫ್ ಮಾಡಿ ವಾಹನಗಳನ್ನು ತಡೆದು ಹಣವಸೂಲಿ ಮಾಡುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಬೆಂಗಳೂರಿನ ಹೈ ಗ್ರೌಂಡ್ ಸಂಚಾರಿ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ಬಾಡಿ ಕ್ಯಾಮರಾ ಆಫ್ ಮಾಡಿಕೊಂಡು ವಿನಾಕಾರಣ ಬೈಕ್ ನಿಲ್ಲಿಸಿ ಹಣವಸೂಲಿ ಮಾಡಿದ ಆರೋಪ ಕೇಳಿ ಬಂದಿದ್ದು ಈ ಸಂಬಂಧ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.

ಎ.ಎಸ್.ಐ ಸುರೇಶ್, ಕಾನ್ಸ್ಟೇಬಲ್ ಗಳಾದ ಪ್ರಶಾಂತ್ ಹಾಗೂ ಸಾದಿಕ್ ಅವರನ್ನು ಸಸ್ಪೆಂಡ್ ಮಾಡಿ ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಅನುಪ್ ಶೆಟ್ಟಿ ಆದೇಶ ಹೊರಡಿಸಿದ್ದಾರೆ.

ದೇಹಕ್ಕೆ ಧರಿಸಿರುವ ಕ್ಯಾಮರಾ ಗಳನ್ನು ಉದ್ದೇಶಪೂರ್ವಕವಾಗಿ ಬಳಸದೆ ಹಣವಸೂಲಿ ಮಾಡಿದ್ದಕ್ಕಾಗಿ ಮೂವರು ಸಂಚಾರಿ ಪೊಲೀಸ್ ಸಿಬಂದಿಯನ್ನು ಅಮಾನತುಗೊಳಿಸಲಾಗಿದೆ.