ಅನುಪಮ ಮಹಿಳಾ ಮಾಸಿಕದ ನೂತನ ಪ್ರಧಾನ ಸಂಪಾದಕಿಯಾಗಿ ಸಬೀಹ ಫಾತಿಮಾ ನೇಮಕ

0
1395

ಸನ್ಮಾರ್ಗ ವಾರ್ತೆ

ಮಂಗಳೂರು: ಅನುಪಮ ಮಹಿಳಾ ಮಾಸಿಕದ ನೂತನ ಪ್ರಧಾನ ಸಂಪಾದಕಿಯಾಗಿ ಸಬೀಹ ಫಾತಿಮಾ ನೇಮಕವಾಗಿದ್ದಾರೆ. ಈ ಬಗ್ಗೆ ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್ ಪ್ರಕಟಣೆಯನ್ನು ಹೊರಡಿಸಿದ್ದು, ಕಳೆದ 25 ವರ್ಷಗಳಿಂದ ಅನುಪಮದ ಪ್ರಧಾನ ಸಂಪಾದಕಿಯಾಗಿ ಕಾರ್ಯನಿರ್ವಹಿಸಿದ್ದ ಶಹನಾಝ್ ಎಂ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸಬೀಹ ಫಾತಿಮಾ ಅವರನ್ನು ನೇಮಕ ಮಾಡಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ. ಕಳೆದ 25 ವರ್ಷಗಳಲ್ಲಿ ಶಹನಾಝ್ ಎಂ ಅವರು ಅತ್ಯುತ್ತಮವಾಗಿ ಹೊಣೆಗಾರಿಕೆ ನಿರ್ವಹಿಸಿದ್ದಾರೆ ಎಂದು ಟ್ರಸ್ಟ್ ಸ್ಮರಿಸಿದೆ.

ಶಹನಾಝ್ ಎಂ ಅವರು ಅನುಪಮ ಮಾಸಿಕದ ಸ್ಥಾಪಕ ಸಂಪಾದಕಿಯಾಗಿ ಕಳೆದ 25 ವರ್ಷಗಳಿಂದ ಹೊಣೆಗಾರಿಕೆ ನಿರ್ವಹಿಸುತ್ತಾ ಬಂದಿದ್ದಾರೆ. ಇದೀಗ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು ಆ ಸ್ಥಾನಕ್ಕೆ ಸಬೀಹ ಫಾತಿಮಾ ಅವರ ನೇಮಕವಾಗಿದೆ.

ಸಬೀಹ ಫಾತಿಮಾ ಅವರು ಅನುಪಮ ಮಾಸಿಕದ ಸ್ಥಾಪಕ ಉಪಸಂಪಾದಕಿಯಾಗಿದ್ದು, ಲೇಖನಗಳು ಮತ್ತು ತಮ್ಮ ಭಾಷಣಗಳ ಮೂಲಕ ಗುರುತಿಸಿಕೊಂಡಿದ್ದಾರೆ ಎಂದು ಟ್ರಸ್ಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.