ಬೀಫ್ ಔತಣಕ್ಕೆ ಆಹ್ವಾನ; ಯುವಕನ ಬಂಧನ

0
681

ಚೆನ್ನೈ,ಜು. 18: ಬೀಫ್ ಔತಣಕ್ಕೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಕ್ಕಾಗಿ ತಮಿಳ್ನಾಡು ರಿಪಬ್ಲಿಕ್ ಪಾರ್ಟಿ ಸ್ಥಾಪಕ ನಾಯಕ ಸುಂದರಂರ ಪುತ್ರ ಎಯಿಲನ್ (32) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ತಂಜಾವೂರು ಕುಂಭಕೋಣಂ ಕೊರನಾಡ್ ನಿವಾಸಿಯಾಗಿರುವ ಇವರು ಬೀಫ್ ಔತಣಕೂಟ ಆಯೋಜಿಸಲಾಗುತ್ತಿದ್ದು ಎಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡಿದ್ದರು. ಸಂಘಪರಿವಾರ ಸಂಘಟನೆಗೆ ಸೇರಿದವರಿಗೆ ವಿಶೇಷ ಆಹ್ವಾನವನ್ನೂ ನೀಡಿದ್ದರು. ಆದರೆ ಔತಣದ ದಿನಾಂಕ ಹೇಳಿರಲಿಲ್ಲ.

ಶಾಂತಿಯ ವಾತಾವರಣಕ್ಕೆ ಹಾನಿ ಮಾಡಲು, ಸಾಮುದಾಯಿಕ ಅಸಹಿಷ್ಣುತೆ ಸೃಷ್ಟಿಸಿದ ಆರೋಪ ಹೊರಿಸಿ ಕುಂಭಕೋಣಂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವಿಲೇಜ್ ಎಕ್ಸ್ ಟೆನ್ಸನ್ ಅಧಿಕಾರಿ ಸುರೇಂದ್ರನ್‍ರ ದೂರಿನಲ್ಲಿ ಕ್ರಮ ಜರಗಿಸಲಾಗಿದೆ. ಎಯಿಲನ್‍ ರನ್ನು ಬುಧವಾರ ಕೋರ್ಟಿಗೆ ಹಾಜರು ಪಡಿಸಿ ಜೈಲಿಗೆ ಹಾಕಲಾಗಿದೆ. ಇತ್ತೀಚೆಗೆ ನಾಗಪಟ್ಟಣಂನಲ್ಲಿ ಗೋಮಾಂಸ ತಿನ್ನುವ ಚಿತ್ರವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಮುಸ್ಲಿಂ ಯುವಕನಿಗೆ ನಾಲ್ವರು ಹಲ್ಲೆ ನಡೆಸಿದ್ದರು.