ಅಯೋಧ್ಯೆ ಪ್ರಕರಣ: ಆಗಸ್ಟ್ ಎರಡರಂದು ತೆರೆದ ಕೋರ್ಟಿನಲ್ಲಿ ವಾದ

0
454

ಹೊಸದಿಲ್ಲಿ, ಜು. 18: ಅಯೋಧ್ಯೆ-ಬಾಬರಿ ಮಸೀದಿ ಜಮೀನಿಗೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ಆಗಸ್ಟ್ ಎರಡರಂದು ತೆರೆದ ಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ. ಮಧ್ಯಸ್ತಿತಿಕೆ ಪ್ರಯತ್ನಗಳ ಕುರಿತ ಅಂತಿಮ ವರದಿ ಜುಲೈ 31ಕ್ಕೆ ಸಲ್ಲಿಕೆಯಾಗಲಿದೆ. ಅದುವರೆಗೆ ಸಮನ್ವಯ ಪ್ರಯತ್ನ ಮುಂದುವರಿಯಲಿದೆ ಎಂದು ಕೋರ್ಟು ಸೂಚಿಸಿದೆ.

ಸುಪ್ರೀಂಕೋರ್ಟು ಮಧ್ಯಸ್ಥಿಕೆ ಸಮಿತಿ ಮುಖ್ಯಸ್ಥ ಜಸ್ಟಿಸ್ ಎಫ್.ಎಂ.ಖಲೀಫುಲ್ಲರ ನೇತೃತ್ವದಲ್ಲಿ ನಡೆದಿರುವ ಮಧ್ಯಸ್ಥಿಕೆ ಶ್ರಮದ ಕುರಿತ ವರದಿಯನ್ನು ಕೋರ್ಟಿಗೆ ಸಲ್ಲಿಸಿದ್ದಾರೆ. ಕಳೆದವಾರ ಪ್ರಕರಣ ಪರಿಗಣಿಸಿದ ಸುಪ್ರೀಂಕೋರ್ಟು ರಾಜಿ ಯತ್ನದ ಯಥಾಸ್ಥಿತಿ ವರದಿಯನ್ನು ಸಲ್ಲಿಸಲು ಸೂಚಿಸಿತ್ತು. 2.77 ಎಕರೆ ಜಮೀನಿಗೆ ಸಂಬಂಧಿಸಿದ ವಿವಾದ ಪರಿಹರಿಸಲು ಸಾಧ್ಯವಿಲ್ಲ ಎಂದು ಮಧ್ಯಸ್ಥಿಕೆ ಸಮಿತಿ ತಿಳಿಸಿದರೆ ಜುಲೈ 25ರಿಂದ ಮೇಲ್ಮನವಿಯಲ್ಲಿ ದಿನಾಲು ವಾದ ಆಲಿಸಲು ಆರಂಭಿಸಲಾಗುವುದು ಎಂದು ಚೀಫ್ ಜಸ್ಟಿಸ್ ಅಧ್ಯಕ್ಷರಾಗಿರುವ ಪೀಠ ಈ ತಿಂಗಳು ಹನ್ನೊಂದಕ್ಕೆ ತಿಳಿಸಿತ್ತು. ಜಸ್ಟಿಸ್ ಎಫ್‍ಎಂ ಕಲೀಫುಲ್ಲ ಅಧ್ಯಕ್ಷತೆಯ ಮಧ್ಯಸ್ಥಿಕೆ ಸಮಿತಿಯಲ್ಲಿ ಶ್ರೀ ಶ್ರೀ ರವಿಶಂಕರ್, ಹಿರಿಯ ವಕೀಲ ಶ್ರೀರಾಂ ಪಂಜು ಇತರ ಸದಸ್ಯರಾಗಿದ್ದಾರೆ.