ಎನ್ಐಏ, ಇಸ್ರೋ, ಏರ್ ಇಂಡಿಯ ವಿಮಾನಕ್ಕೆ ಬಾಂಬ್ ಬೆದರಿಕೆ: ಆರೋಪಿ ನಿಶಾಂತ್ ತ್ಯಾಗಿ ಬಂಧನ

0
321

ಸನ್ಮಾರ್ಗ ವಾರ್ತೆ

ದೇಶದ ಪ್ರಮುಖ ಸಂಸ್ಥೆಗಳಾದ ಎನ್ಐಎ ಇಸ್ರೋ ಡಿ ಆರ್ ಡಿ ಓ ಮತ್ತು ಏರ್ ಇಂಡಿಯಾ ವಿಮಾನಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಗಳನ್ನು ಕಳುಹಿಸಿದ. ಪ್ರಕರಣದಲ್ಲಿ 36 ವರ್ಷದ ನಿಶಾಂತ್ ತ್ಯಾಗಿ ಎಂಬವನನ್ನು ಬಂಧಿಸಲಾಗಿದೆ. ಈತ ಉತ್ತರಪ್ರದೇಶದ ಗಾಜಿಯಾಬಾದ ನವ. ಆರಂಭಿಕ ತನಿಖೆಯಲ್ಲಿ 2008ರಿಂದ ಈತ ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.

ಜೂನ್ 29ರಂದು ಇಮೇಲ್ ಮೂಲಕ ಈತ ಬಾಂಬ್ ಬೆದರಿಕೆ ಹಾಕಿದ್ದ. ನವದೆಹಲಿಯಿಂದ ನ್ಯೂ ಯಾರ್ಕ್ಗೆ ತೆರಳುತ್ತಿದ್ದ ಏರ್ ಇಂಡಿಯ ವಿಮಾನಕ್ಕೂ ಬಾಂಬು ಬೆದರಿಕೆಯನ್ನು ಹಾಕಿದ್ದ.

ಇ-ಮೇಲ್ಗಳನ್ನು ಸ್ವೀಕರಿಸಿದ ನಂತರ ಸಂಬಂಧಿತ ಎಲ್ಲಾ ಸಂಸ್ಥೆಗಳಲ್ಲಿ ತುರ್ತು ಭದ್ರತಾ ಪರಿಶೀಲನೆ ನಡೆಸಲಾಗಿದೆ. ಬಾಂಬ್ ನಿಷ್ಕ್ರಿಯದಳ ಮತ್ತು ಭದ್ರತಾ ಸಂಸ್ಥೆಗಳು ಪರಿಶೀಲನೆ ನಡೆಸಿವೆ. ಆದರೆ ಯಾವುದೇ ಸ್ಪೋಟಕ ವಸ್ತುಗಳು ಕಂಡುಬಂದಿಲ್ಲ. ನಂತರ ಬೆದರಿಕೆಯನ್ನು ಸುಳ್ಳು ಎಂದು ದೃಢೀಕರಿಸಲಾಗಿದೆ.

ಘಟನೆಯ ನಂತರ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎರಡು ಇಮೇಲ್ ಖಾತೆಗಳನ್ನು ಪರಿಶೀಲಿಸಿದ ನಂತರ ಆರೋಪಿಯನ್ನು ಬಂಧಿಸಲಾಗಿದೆ.