✍️ ಲಾರನ್ ಬೂತ್
ಬ್ರಿಟಿಷ್ ಪತ್ರಕರ್ತೆ
ಜೆರುಸಲೇಮ್ನ ಪುನರೇಕೀಕರಣಕ್ಕಾಗಿ ಪ್ರಪಂಚದಾದ್ಯಂತ ನಡೆದ ಅತಿದೊಡ್ಡ ಪ್ರತಿಭಟನೆಯನ್ನು ‘ಪ್ರೆಸ್ ಟಿವಿ’ಗಾಗಿ ವರದಿ ಮಾಡಲು ನಾನು ಟೆಹ್ರಾನ್ಗೆ ತೆರಳಿದ್ದೆ. ವರದಿಗಳನ್ನು ಸಲ್ಲಿಸಿದ ನಂತರ, ನಾನು ನನ್ನ ಸಹೋದ್ಯೋಗಿ ನರ್ಗಿಸ್ ಳೊಂದಿಗೆ ಟೆಹ್ರಾನ್ನಿಂದ ಇಸ್ಫಹಾನ್ಗೆ ರಸ್ತೆಯ ಮೂಲಕ ಪ್ರಯಾಣಿಸಿದೆ. ಪ್ರೆಸ್ ಟಿವಿಯ ನನ್ನ ಸಹೋದ್ಯೋಗಿಗಳು ರಮಝಾನ್ನ ಉಪವಾಸ ಮತ್ತು ಇತರ ಧಾರ್ಮಿಕ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಅವರ ನಡವಳಿಕೆಯಲ್ಲಿ ದಯೆ, ಸಹಾನುಭೂತಿ ಮತ್ತು ವಿನಯ ಎದ್ದು ಕಾಣುತ್ತಿತ್ತು. ಪಾಶ್ಚಿಮಾತ್ಯ ಮಾಧ್ಯಮ ಕಚೇರಿಗಳಲ್ಲಿ ಸಾಮಾನ್ಯವಾಗಿ ಕೇಳಿಬರುವ ಅಸಭ್ಯ ಮಾತುಗಳು ಅಲ್ಲಿರಲಿಲ್ಲ.
ಬೇಸಿಗೆಯ ಕೊನೆಯ ದಿನಗಳಾಗಿದ್ದರಿಂದ ಬಿಸಿಲು ಹೆಚ್ಚಾಗಿತ್ತು. ಆದ್ದರಿಂದ ನನಗೆ ಉಪವಾಸ ಆಚರಿಸಲು ಸಾಧ್ಯವಾಗಲಿಲ್ಲ. ಮುಂಜಾನೆ ಐದು ಗಂಟೆ ಸುಮಾರಿಗೆ ಪ್ರಾರ್ಥನೆಗಾಗಿ ಬಾಂಗ್ ಕೇಳಿಸುತ್ತಿತ್ತು. ಸಂಜೆ ಏಳು ಗಂಟೆಯ ವೇಳೆಗೆ ಉಪವಾಸ ಮುರಿಯುವ ಸಮಯವಾಗುತ್ತಿತ್ತು. ಕೆನಡಾದಲ್ಲಿರಲಿ, ನೊವಾ ಸ್ಕೋಶಿಯಾದಲ್ಲಿರಲಿ ಅಥವಾ ಆಸ್ಟ್ರೇಲಿಯಾದಲ್ಲಿರಲಿ, ಮುಸ್ಲಿಮರು ಹಗಲಿಡೀ ಆಹಾರ ಮತ್ತು ಪಾನೀಯಗಳನ್ನು ತ್ಯಜಿಸಿ ರಮಝಾನ್ ಉಪವಾಸ ಆಚರಿಸುತ್ತಾರೆ. ಆ ಸಮಯದಲ್ಲಿ ಅಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ಪ್ರಯತ್ನಿಸುತ್ತಾರೆ. ಪರದೂಷಣೆ ಮತ್ತು ವ್ಯರ್ಥ ಮಾತುಗಳಿಂದ ದೂರವಿರುತ್ತಾರೆ. ನಮ್ಮ ಕಚೇರಿ ಶಾಂತವಾಗಿರಲು ಇದೂ ಒಂದು ಕಾರಣವಾಗಿತ್ತು.
ನನ್ನ ಪ್ರಯಾಣದ ವೇಳೆ ನಾನು ಮೊದಲ ಬಾರಿಗೆ ಒಬ್ಬ ವೃದ್ಧೆಯನ್ನು ಭೇಟಿಯಾದೆ. ‘ಸಲಾಂ’ (ಶಾಂತಿ) ಎಂಬ ಇಸ್ಲಾಮಿಕ್ ಶುಭಾಶಯ ನನ್ನ ನಾಲಿಗೆಯ ಮೇಲೆ ಬಂತು. ಅವರು ಕಪ್ಪು ಸ್ಕಾರ್ಫ್ ಧರಿಸಿದ್ದರು ಮತ್ತು ಕೈಯಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಹಿಡಿದು ನಡೆಯುತ್ತಿದ್ದರು. ನಾನು ‘ಸಲಾಂ’ ಎಂದಾಗ ಅವರು ಕೂಡಲೇ ನಗುತ್ತಾ ಪ್ರತಿಕ್ರಿಯಿಸಿದರು. ನಾನು ಭೇಟಿಯಾದ ಮುಸ್ಲಿಮರೆಲ್ಲರೂ ಸುಂದರವಾದ ಮುಖಭಾವದಿಂದ ನನಗೆ ಶುಭ ಹಾರೈಸುತ್ತಿದ್ದರು.
ಮುಸ್ಲಿಮರು ಒಳ್ಳೆಯವರು ಎಂಬುದು ಕೇವಲ ಮಾತಲ್ಲ; ಅದು ಅವರ ದಿನ ನಿತ್ಯದ ನಡವಳಿಕೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ರಮಝಾನ್ ತಿಂಗಳಲ್ಲಿ ದೈಹಿಕವಾಗಿ ಕಷ್ಟಪಟ್ಟರೂ, ಅವರಲ್ಲಿದ್ದ ಶಾಂತಿ, ದಯೆ ಮತ್ತು ಸಹಾನುಭೂತಿ ನನ್ನನ್ನು ಆಶ್ಚರ್ಯಗೊಳಿಸಿತು. ಪ್ರಾರ್ಥನೆಯ ಸಮಯದಲ್ಲಿ ಅವರು ತಲ್ಲೀನರಾಗುವ ರೀತಿ, ಅತಿಥಿಗಳಿಗೆ ನೀಡುವ ಗೌರವ ಮತ್ತು ತಮ್ಮ ಧರ್ಮದ ಬಗ್ಗೆ ಹೊಂದಿದ್ದ ಹೆಮ್ಮೆ ಅವರ ಒಳ್ಳೆಯತನಕ್ಕೆ ಸಾಕ್ಷಿಯಾಗಿತ್ತು.
ನರ್ಗಿಸ್ಳ ತಾಯಿಯ ಬಳಿ “ಮುಸ್ಲಿಮರು ಕಡ್ಡಾಯವಾಗಿ ಈ ವಸ್ತ್ರಗಳನ್ನು ಧರಿಸಬೇಕೇ?” ಎಂದು ಕೇಳಿದಾಗ, ಅವರು ನಗುತ್ತಾ, “ನಮಗೆ ಇಸ್ಲಾಂ ಇಷ್ಟ. ಅದಕ್ಕಾಗಿ ನಾವು ಈ ವಸ್ತ್ರಗಳನ್ನು ಧರಿಸುತ್ತೇವೆ” ಎಂದು ಉತ್ತರಿಸಿದರು. ಅವರಲ್ಲಿದ್ದ ಆ ಬದ್ಧತೆ ನನಗೆ ಇಷ್ಟವಾಯಿತು.
ನಾನು ಇರಾನ್ನ ಒಂದು ಪವಿತ್ರ ಸ್ಥಳಕ್ಕೆ ತಲುಪಿದೆ. ಮಸೀದಿಯ ನೆಲದ ಮೇಲೆ ಕುಳಿತು ಜೀವನದ ಅತ್ಯಂತ ಆಳ ವಾದ ಧ್ಯಾನದಲ್ಲಿ ಮುಳುಗಿದ್ದೆ. ತಲೆಯ ಮೇಲಿದ್ದ ಚಾದರ ನನಗೆ ಅಡಚಣೆಯಾಗಲಿಲ್ಲ. ಎಲ್ಲವೂ ಅತ್ಯಂತ ಸುಂದರವಾಗಿತ್ತು. “ಇದು ಎಷ್ಟು ಸುಂದರವಾಗಿದೆ! ಅಲ್ಲಾಹ್, ನಿನಗೆ ಧನ್ಯವಾದಗಳು… ಅಲ್ಲಾಹು ಅಕ್ಬರ್…” ಎಂದು ನಾನು ನಿಧಾನವಾಗಿ ಪುನರಾವರ್ತಿಸಿದೆ. ನಾನು ಮಸೀದಿಯಲ್ಲೇ ರಾತ್ರಿ ಕಳೆಯಲು ಬಯಸಿದೆ. ಅಲ್ಲಿನ ಆಳವಾದ ಶಾಂತಿ ಮತ್ತು ಧ್ಯಾನ ನನ್ನ ಮನಸ್ಸಿನಲ್ಲಿದ್ದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿತು.
ನಾನು ಬಹಳ ಕಾಲದಿಂದ ಮದ್ಯಪಾನವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೆ. ನಾನು ಇಸ್ಲಾಂನತ್ತ ಆಕರ್ಷಿತಳಾಗಿದ್ದೆ. ಯಾರೂ ನನ್ನನ್ನು ಬಲವಂತಪಡಿಸಲಿಲ್ಲ. ಬ್ಲಾಗ್ಗಳು ಅಥವಾ ಹೊಸ ಟ್ರೆಂಡ್ಗಳು ನನ್ನನ್ನು ಪ್ರೇರೇಪಿಸಿರಲಿಲ್ಲ. ಆದರೆ ನಾನು ಅವರಲ್ಲಿ ಒಬ್ಬಳಾಗಿ ಮುಖ್ಯವಾಹಿನಿಯ ಸಮಾಜದಲ್ಲಿ ಬದುಕಲು ಸಾಧ್ಯವೇ? ಎಂಬ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಮೂಡುತ್ತಿದ್ದವು.
ಒಂದು ದಿನ ಸಾಯಂಕಾಲ ಮಕ್ಕಳಿಗೆ ಚಹಾ ಮತ್ತು ಪ್ಯಾನ್ಕೇಕ್ಗಳನ್ನು ಮಾಡಿಕೊಟ್ಟೆ. ನಂತರ ಸ್ನಾನ ಮಾಡಿ ಪೈಜಾಮ ಧರಿಸಿ ಇಬ್ಬರನ್ನೂ ಸ್ವೀಕೃತಿಯ ಕೋಣೆಯಲ್ಲಿದ್ದ ಸೋಫಾದಲ್ಲಿ ಕೂರಿಸಿದೆ.
ಅಮ್ಮ ಮುಸ್ಲಿಂ ಆಗಲು ಹೋಗುತ್ತಿದ್ದಾರೆ, ಇದು ನಿಮ್ಮನ್ನೂ ಬಾಧಿಸುತ್ತದೆ. ನಿಮಗೆ ಏನು ಅನಿಸುತ್ತದೆ ನನ್ನ ಮಕ್ಕಳೇ?' ಫೆಲಸ್ತೀನ್ ಕಡೆಗಿನ ನನ್ನ ಮೊದಲ ಪ್ರಯಾಣದಿಂದ,ಇಸ್ಲಾಂ ಚಾನೆಲ್’ನಲ್ಲಿ ಕೆಲಸ ಮಾಡುವಾಗ ನಾನು ಯಾವಾಗಲೂ ಕೇಳುತ್ತಿದ್ದ ಒಂದು ವಾಕ್ಯ ನನ್ನ ಮಕ್ಕಳಿಗೆ ಪರಿಚಿತವಾಗಿತ್ತು: ಮುಸ್ಲಿಮರು ಒಳ್ಳೆಯವರು, ನಿಜವಾಗಿಯೂ ಒಳ್ಳೆಯವರು!' ಅವರಿಗೆ ಮುಸ್ಲಿಮರ ಬಗ್ಗೆ ಒಳ್ಳೆಯ ಅನುಭವಗಳಿದ್ದವು.ಫ್ರೀ ಗಾಝಾ’ ಆಂದೋಲನದ ಒಸಾಮಾ, ಮಕ್ಕಳಿಗೆ ಉಸಾಮಾ ಅಂಕಲ್' ಆಗಿ ಬದಲಾಗಿದ್ದರು. ಅವರಿಗೆ ಇಸ್ಲಾಂ’ ಎಂಬ ಪದದ ಬಗ್ಗೆ ಭಯವಿರಲಿಲ್ಲ.
ನನ್ನ ಆಲೋಚನೆಗಳನ್ನು ನನಗೆ ಸಾಧ್ಯವಾದಷ್ಟು ಚೆನ್ನಾಗಿ ಅವರಿಗೆ ವಿವರಿಸಿದೆ. ಅವರು ಗಮನವಿಟ್ಟು ಕೇಳಿದರು. ಹೇಳಿ ಮುಗಿಸಿದಾಗ ನಾನು ಕೇಳಿದೆ: ಮಕ್ಕಳೇ, ನಿಮಗೆ ಈಗ ಏನು ಅನಿಸುತ್ತಿದೆ?' ಹೋಲಿ, ಎಂಟು ವರ್ಷದವಳು. ಗಂಭೀರವಾಗಿ ಹೇಳಿದಳು:ನಾವು ಸ್ವಲ್ಪ ಸಮಯದ ನಂತರ ಮಾತನಾಡೋಣ. ಅಮ್ಮನಿಗೆ ಕೆಲವು ಪ್ರಶ್ನೆಗಳಿವೆ’.
ಸ್ವಲ್ಪ ಸಮಯದ ನಂತರ ನಾನು ರಾತ್ರಿಯ ಅಡುಗೆ ಮಾಡುತ್ತಿದ್ದಾಗ ಹೋಲಿ ನನ್ನ ಏಪ್ರನ್ ಹಿಡಿದು ಎಳೆದಳು: ಅಮ್ಮಾ, ನೀವು ಮುಸ್ಲಿಂ ಆಗುವ ಮುನ್ನ ನಮಗೆ ಮೂರು ಪ್ರಶ್ನೆಗಳಿವೆ'. ನಾನು ಒದ್ದೆ ಕೈಗಳನ್ನು ಟವೆಲ್ನಲ್ಲಿ ಒರೆಸಿದೆ. ಮಕ್ಕಳು ಅಷ್ಟು ಗಂಭೀರವಾಗಿ ನನ್ನ ಬಳಿ ಬಂದಾಗ ನನಗೆ ನಗು ಬಂತು. ಪ್ರಶ್ನೆ ಕೇಳಲು ನಾನು ಅವರಿಗೆ ಅವಕಾಶ ನೀಡಿದೆ. ಅಲೆಕ್ಸಾಂಡ್ರಾ ಕೇಳಿದಳು:ಅಮ್ಮಾ, ನೀವು ಮುಸ್ಲಿಂ ಆದರೂ ನಮ್ಮ ಅಮ್ಮನಾಗಿರುತ್ತೀರಾ?’ ಆ ಮಾತುಗಳ ಆಳ ನನ್ನನ್ನು ತಲ್ಲಣಗೊಳಿಸಿತು. ನಾನು ಎಂದಿಗೂ ಅವರೊಂದಿಗೆ ಇರುತ್ತೇನೆಯೇ ಅಥವಾ ಈ ಹೊಸ ವಿಶ್ವಾಸ ಅವರ ನಡುವೆ ಅಂತರ ಸೃಷ್ಟಿಸುತ್ತದೆಯೇ ಎನ್ನುವುದು ನನ್ನ ಅತಿದೊಡ್ಡ ಭಯವಾಗಿತ್ತು. ಒಬ್ಬ ಏಕ ಪೋಷಕಳಾಗಿ ಕುಟುಂಬ ಜೀವನವನ್ನು ನಡೆಸಲು ನಾನು ಗರಿಷ್ಠ ಪ್ರಯತ್ನಿಸುತ್ತಿದ್ದೆ. ಅಷ್ಟು ದಿನ ನನ್ನ ರಜಾದಿನಗಳನ್ನು ಬೇಬಿ ಸಿಟ್ಟರ್ ನಿಯೋಜಿಸಿ ಪಾರ್ಟಿಗಳಿಗೆ ಹೋಗುವ ಬಗ್ಗೆ ಯೋಚಿಸುತ್ತಿದ್ದೆ. ಅದನ್ನು ತ್ಯಜಿಸಿ ರಾತ್ರಿ ಪ್ರಾರ್ಥನೆ ಮತ್ತು ಮನೆಯಲ್ಲೇ ಸಮಯ ಕಳೆಯುವುದರಿಂದ ಕುಟುಂಬ ಜೀವನದಲ್ಲಿ ದೊಡ್ಡ ಬದಲಾವಣೆ ಉಂಟಾಗಬಹುದು. ಜೊತೆಗೆ, ಮದ್ಯಪಾನದಂತಹ ಪದ್ಧತಿಗಳು ಅದರಿಂದ ಕೊನೆಗೊಳ್ಳಬಹುದು.
ನಾನು ಖಂಡಿತವಾಗಿಯೂ ನಿಮ್ಮ ಅಮ್ಮನಾಗಿರುತ್ತೇನೆ' ಎಂದು ನಾನು ಹೇಳಿದೆ. ಇಬ್ಬರೂ ಅವರ ಹಾಸಿಗೆಯ ಕಡೆಗೆ ತೆರಳಿದರು. ಅಲೆಕ್ಸಾಂಡ್ರಾ ಮುಂದುವರಿಸಿದಳು:ಅಮ್ಮಾ, ನೀವು ಮುಸ್ಲಿಂ ಆದರೂ ಮದ್ಯಪಾನ ಮಾಡುತ್ತೀರಾ?’ ಕೇವಲ ಹತ್ತು ನಿಮಿಷಗಳಲ್ಲಿ ಇಂತಹ ಪ್ರಶ್ನೆಗಳು ಅವರಿಗೆ ಎಲ್ಲಿಂದ ಬಂತು? ಪತ್ರಿಕೆ ಮತ್ತು ಟಿವಿ ವರದಿಗಾರರು ನನ್ನನ್ನು ಹತ್ತಾರು ಬಾರಿ ಪ್ರಶ್ನಿಸಿದ್ದಾರೆ. ಅಷ್ಟು ಆಳವಾದ ಪ್ರಶ್ನೆಯನ್ನು ಯಾರೂ ನನ್ನನ್ನು ಕೇಳಿರಲಿಲ್ಲ. ಕಳೆದ ಕೆಲವು ವರ್ಷಗಳಿಂದ ನಾನು ಮದ್ಯಪಾನವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೆ. ವಾರದಲ್ಲಿ ಒಂದು ರಾತ್ರಿ ಮಾತ್ರ ಮಧ್ಯಪಾನ ಮಾಡುತ್ತಿದ್ದೆ.. ಬ್ರಿಟಿಷ್ ಸಮಾಜದಲ್ಲಿ ಮದ್ಯಪಾನ ಸಂಪೂರ್ಣವಾಗಿ ನಿಲ್ಲಿಸುವುದು ಸಾಧ್ಯವೇ? ಮುಸ್ಲಿಂ ಆದ ನಂತರ ಇನ್ನು ಮದ್ಯಪಾನ ಮಾಡುವುದಿಲ್ಲ ಎಂದು ಶಪಥ ಮಾಡಿದಾಗ ನನಗೆ ನನ್ನನ್ನೇ ನಂಬಲು ಸಾಧ್ಯವಾಗಲಿಲ್ಲ.
ಮಕ್ಕಳು ಪರಸ್ಪರ ನೋಡಿಕೊಂಡರು. ಹೋಲಿ ಸ್ಪಷ್ಟವಾದ ಧ್ವನಿಯಲ್ಲಿ ಅಂತಿಮ ಪ್ರಶ್ನೆಯನ್ನು ಕೇಳಿದಳು: ಅಮ್ಮಾ, ನೀವು ಮುಸ್ಲಿಂ ಆದ ಮೇಲೆ ಸಾರ್ವಜನಿಕ ಸ್ಥಳಗಳಲ್ಲಿ ಪುರುಷರ ಮುಂದೆ ಎದೆ ತೋರಿಸುವಂತಹ ವಸ್ತ್ರ ಧರಿಸುತ್ತೀರಾ?'. ನನ್ನ ಇಪ್ಪತ್ತರ ಹರೆಯದಿಂದ ನಾನು ಆ ರೀತಿಯ ವಸ್ತ್ರ ಧಾರಣೆ ಮಾಡುತ್ತಿದ್ದರೂ ನನ್ನ ಮನಸ್ಸು ಅದನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ನಾವು. ಏನು ಧರಿಸಬೇಕು ಎಂಬುದು ಅವರ ಆಯ್ಕೆಯಾಗಿರಬೇಕು ಎಂಬುದೇ ಆಧುನಿಕ ಸಮಾಜದ ನಿಲುವಾಗಿದೆ. ಉನ್ನತ ವರ್ಗದ ಪುರುಷರೊಂದಿಗೆ ಇರುವಾಗ ದೇಹಕ್ಕೆ ಅಂಟಿಕೊಂಡಿರುವಂತಹ ವಸ್ತ್ರಗಳನ್ನು ಧರಿಸುವುದು ನನ್ನ ವೈಯಕ್ತಿಕ ಸಾಧನೆಗಳನ್ನು ಪಡೆಯಲು ಸಹಾಯಕವಾಗಿತ್ತು. ಯುವತಿಯರನ್ನು ಪುರುಷರು ಆಕರ್ಷಿತರಾಗುವ ರೀತಿಯಲ್ಲಿ ವಸ್ತ್ರ ಧರಿಸುವಂತೆ ಮಾಡುವುದು ಮತ್ತು ಅದೇ ಸಮಯದಲ್ಲಿ ಅದು ಅದೃಶ್ಯವಾಗಿನಮ್ಮ ಕೆಲಸಗಳನ್ನು ಸುಲಭಗೊಳಿಸುವುದು’ ಮುಖ್ಯವಾಗಿತ್ತು.
ಮುಸ್ಲಿಂ ಆದರೆ ಮನೆಯಿಂದ ಹೊರಗೆ ಹೋಗುವಾಗಲೆಲ್ಲಾ ಗೌರವಾನ್ವಿತವಾಗಿ ವಸ್ತ್ರ ಧರಿಸುತ್ತೇನೆ' ಎಂದು ನಾನು ಹೇಳಿದೆ. ಒಂದು ಕ್ಷಣದ ನಿಶ್ಯಬ್ದ. ಅವರು ಪರಸ್ಪರ ನೋಡಿಕೊಂಡರು. ನಂತರ ಚಪ್ಪಾಳೆ ತಟ್ಟಿ ಕುಣಿದು ಕುಪ್ಪಳಿಸಿದರು:ನಮಗೆ ಇಸ್ಲಾಂ ಇಷ್ಟ!’ ಎಂದು ಅವರು ಘೋಷಿಸಿದರು. ನನ್ನ ಮಕ್ಕಳು ಇಸ್ಲಾಂ ಅನ್ನು ಅಂಗೀಕರಿಸಿದ್ದರು. ನಾನು ನಿಜವಾಗಿಯೂ ಅದರ ಮೂಲಕ ಹಾದು ಹೋಗುತ್ತೇನೆಯೇ? ಪ್ರಶ್ನೆ ಕೇಳಿದ ನಂತರ, ಅದನ್ನು ಕಾರ್ಯರೂಪಕ್ಕೆ ತರಲು ಕೆಲವು ದಿನ ಸಮೀಪಿಸಿದೆ ಎಂದು ಅನ್ನಿಸಿತು. ಒಂದು ಶುಕ್ರವಾರ, ನನ್ನ ಸ್ನೇಹಿತೆ ಆನ್ಳ ಜೊತೆಗೆ ಮೈದಾ ವೇಲ್ನಲ್ಲಿರುವ ಇಸ್ಲಾಮಿಕ್ ಸೆಂಟರ್ ಆಫ್ ಇಂಗ್ಲೆಂಡ್ನ ಹೊರಗೆ ನಾನು ಭಯಭಕ್ತಿಯಿಂದ ನಿಂತಿದ್ದೆ. ಆ ಸೆಂಟರ್ನ ದೊಡ್ಡ ಇಮ್ಮಡಿ ಬಾಗಿಲುಗಳನ್ನು ದಾಟುವಾಗ, ಧರ್ಮ ಪರಿವರ್ತನೆಯ ಆಚರಣೆ ಹೇಗೆ ನಡೆಯುತ್ತದೆ ಎಂಬ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ.
ಇಂದು ಸಂಜೆಯ ಹೊತ್ತಿಗೆ ನಾನು ಕ್ರೈಸ್ತಳಾಗಿರುವುದಿಲ್ಲ, ಬದಲಿಗೆ ಮುಸ್ಲಿಂ ಆಗಿರುತ್ತೇನೆ ಎಂಬ ವಾಸ್ತವದತ್ತ ನನ್ನ ಗಮನವಿತ್ತು. ಇಸ್ಲಾಂ ಎಂಬುದು ಆಧುನಿಕ ಕ್ರೈಸ್ತ ಧರ್ಮದಂತೆ ಏನು ಬೇಕಾದರೂ ಆಗಬಹುದು ಎಂದು ಹೇಳುವ ಧರ್ಮ ವಲ್ಲ. ದೇವನು ನನ್ನ ಮೇಲೆ ತೃಪ್ತನಾಗಿರಬೇಕೆಂದರೆ, ಇಸ್ಲಾಂ ಜೀವನದಲ್ಲಿ ಅಳವಡಿಸಿಕೊಳ್ಳಲು ಸೂಚಿಸುವ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಇಸ್ಲಾಮಿಕ್ ಸೆಂಟರ್ ಕಟ್ಟಡದ ದೊಡ್ಡ ಮೆಟ್ಟಿಲುಗಳನ್ನು ಹತ್ತುವಾಗ ನಾನು ಆನ್ಳ ಕೈಗಳನ್ನು ಹಿಡಿದಿದ್ದೆ. ಆ ಕ್ಷಣದಲ್ಲಿ ನನಗೆ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಚಿಂತೆಯಿರಲಿಲ್ಲ, ಬದಲಾಗಿ ನಾನು ಏನು ಕಳೆದುಕೊಳ್ಳಲಿದ್ದೇನೆ ಎಂಬ ಯೋಚನೆಯೇ ಕಾಡುತ್ತಿತ್ತು! ಬೇಕನ್ ಸ್ಯಾಂಡ್ವಿಚ್ಗಳು ಮತ್ತು ರೆಡ್ ವೈನ್ ಅನ್ನು ನಾನು ಸಂಪೂರ್ಣವಾಗಿ ತ್ಯಜಿಸ ಬೇಕಲ್ಲವೇ?
[ಲಾರೆನ್ ಬೂತ್ ಅವರು ಬ್ರಿಟಿಷ್ ಪತ್ರಕರ್ತೆ ಮತ್ತು ಆ್ಯಕ್ಟಿವಿಸ್ಟ್ ಆಗಿದ್ದು, 2010 ರಲ್ಲಿ ಇರಾನ್ಗೆ ಭೇಟಿ ನೀಡಿದ ಕೆಲ ಸಮಯದಲ್ಲೇ ಇಸ್ಲಾಮ್ ಸ್ವೀಕರಿಸಿದರು. ಇವರ IN SEARCH OF A HOLY LAND ಎಂಬ ಆತ್ಮಕತೆಯಿಂದ ಈ ಬರಹವನ್ನು ಪಡೆಯಲಾಗಿದೆ.]












