ಇಸ್ರೇಲ್ ಜೊತೆ ಕೈಜೋಡಿಸಿಸಿದ್ದರೇ ಇರಾನ್ ಮಾಜಿ ಅಧ್ಯಕ್ಷ ಅಹಮದಿ ನೆಜಾದ್? ಬೆಚ್ಚಿ ಬೆಳಿಸುವ ನ್ಯೂಯಾರ್ಕ್ ಟೈಮ್ಸ್ ವರದಿ

0
577

ಸನ್ಮಾರ್ಗ ವಾರ್ತೆ

ಇರಾನ್ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದೀ ನೆಜಾದ್ ಅವರನ್ನು ಗೂಢಚರರನ್ನಾಗಿ ನೇಮಿಸಿಕೊಳ್ಳಲು ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ವರ್ಷಗಳ ಕಾಲ ಅತ್ಯಂತ ರಹಸ್ಯ ಕಾರ್ಯಾಚರಣೆ ನಡೆಸಿದೆ ಎಂದು ವರದಿಯಾಗಿದೆ. ಇರಾನ್ ನಲ್ಲಿ ಸರ್ಕಾರವನ್ನು ಉರುಳಿಸಿ ಹೊಸ ಆಡಳಿತಗಾರನನ್ನು ಸ್ಥಾಪಿಸಲು ಅವರನ್ನು ಬಳಸುವುದು ಇಸ್ರೇಲ್ ನ ಯೋಜನೆಯಾಗಿತ್ತು. ಅಮೆರಿಕಾದ ಮಾಜಿ ಅಧಿಕಾರಿಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ಈ ಆಘಾತಕಾರಿ ಮಾಹಿತಿಯನ್ನು ಬಿಡುಗಡೆ ಮಾಡಿದೆ.

ಆದರೆ ಈ ಕಾರ್ಯಾಚರಣೆ ಸಂಪೂರ್ಣ ವಿಫಲವಾಗಿದೆ. ಮೊಸಾದ್ ಹಲವು ವರ್ಷಗಳಿಂದ ಅಹ್ಮದಿ ನೆಜಾದ್ ಜೊತೆ ರಹಸ್ಯ ಸಂಬಂಧ ಹೊಂದಿತ್ತು ಎಂದು ವರದಿ ಹೇಳುತ್ತದೆ. ನೆಜಾದ್ ವಿದೇಶಿ ಪ್ರಯಾಣ ಮತ್ತು ವಸತಿಗಾಗಿ ಮೊಸಾದ್ ಹಣಕಾಸಿನ ನೆರವು ನೀಡಿತ್ತು ಮತ್ತು ಬುಡಾಫೆಸ್ಟಿನಲ್ಲಿ ಹಲವಾರು ರಹಸ್ಯ ಸಭೆಗಳು ನಡೆದಿದೆ ಎಂದು ಹೇಳಲಾಗಿದೆ.

ಹಂಗೇರಿಯನ್ ಸರ್ಕಾರಿ ಅಧಿಕಾರಿಯೊಬ್ಬರು 2024ರ ಆರಂಭದಲ್ಲಿ ಬುಡಾಫೆಸ್ಟಿನಲ್ಲಿರುವ ಲೂಡೋವಿಕಾ ಸಾರ್ವಜನಿಕ ಸೇವಾ ವಿಶ್ವವಿದ್ಯಾಲಯದಲ್ಲಿ ಹವಾಮಾನ ಬದಲಾವಣೆಯ ಕುರಿತು ಸಮ್ಮೇಳನವನ್ನು ಆಯೋಜಿಸಲು ಮತ್ತು ಅಹಮದಿ ನೆಜಾದ್ ಅವರನ್ನು ಅದಕ್ಕೆ ಆಹ್ವಾನಿಸಲು ವಿಶ್ವವಿದ್ಯಾಲಯದ ರೆಕ್ಟರ್ ಡೆಲ್ಲಿ ಅವರನ್ನು ಕೇಳಿದ್ದರು. ಈ ಸಮ್ಮೇಳನವು ಅಹಮದಿ ನೆಜಾದ್ ಮತ್ತು ಇಸ್ರೇಲ್ ಗುಪ್ತಚರ ಸಂಸ್ಥೆಗಳ ನಡುವಿನ ರಹಸ್ಯ ಮಾತುಕತೆಗಳಿಗೆ ಒಂದು ವೇದಿಕೆಯಾಗಿತ್ತು. ಆಗ ಮೊಸಾದ್ ನ ಮುಖ್ಯಸ್ಥರಾಗಿದ್ದ ವಾರ್ನಿಯವರು ಅಹಮದಿ ನೆಜಾದ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಪ್ರಯಾಣಿಸಿದ್ದರು ಎಂದು ವರದಿ ಹೇಳಿದೆ. ಸಭೆಯ ನಂತರ ಅಹಮದಿ ನೆಜಾದ್ ಜೊತೆ ಮೊಸಾದ್ ಸಂವಹನ ಮಾರ್ಗವನ್ನು ಯಶಸ್ವಿಯಾಗಿ ಸ್ಥಾಪಿಸಿದೆ ಎಂದು ಮಾಹಿತಿ ನೀಡಿದೆ.

ಇರಾನ್ ಯುದ್ಧದ ಸಮಯದಲ್ಲಿ ಟೆಹರಾನ್ ನಲ್ಲಿರುವ ನೆಜಾದ್ ನಿವಾಸದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ಆದರೆ ಅವರ ಭದ್ರತಾ ಸಿಬ್ಬಂದಿಗಳು ಅದರಲ್ಲಿ ಹತರಾದರು. ದಾಳಿಯ ನಂತರ ಮೊಸಾದ್ ತಂಡವು ನೆಜಾದ್ ಅವರನ್ನು ಕಪ್ಪು ಕಾರಿನಲ್ಲಿ ಸುರಕ್ಷಿತ ಮನೆಗೆ ಕೊಂಡೊಯ್ದಿದೆ ಎಂದು ವರದಿಯಾಗಿದೆ. ಆದರೆ ಈ ಕಾರ್ಯಚರಣೆಯಿಂದ ನೆಜಾದ್ ಸಂತೋಷವಾಗಿರಲಿಲ್ಲ. ಆ ಬಳಿಕ ಅವರು ಇಸ್ರೇಲಿ ನೆಲೆಯನ್ನು ತೊರೆದರು. ಫೆಬ್ರವರಿ ಅಂತ್ಯದಲ್ಲಿ ಕಣ್ಮರೆಯಾದರು, ಕಳೆದ ವಾರ ಇರಾನ್ ಮಾಜಿ ಸರ್ವೋಚ್ಚ ನಾಯಕ ಖಾಮ್ನೆಯಿ ಅವರ ಅಂತ್ಯಕ್ರಿಯೆಯಲ್ಲಿ ಕೊನೆಯದಾಗಿ ಕಾಣಿಸಿಕೊಂಡರು.

ಪ್ರಸ್ತುತ ಅವರನ್ನು ಇರಾನ್ ಅಧಿಕಾರಿಗಳು ಬಂಧಿಸಿ ಇಟ್ಟಿದ್ದಾರೆ, ಇಸ್ರೇಲ್ ನೊಂದಿಗೆ ಸಂಬಂಧ ಬಹಿರಂಗಗೊಂಡ ನಂತರ ಗ್ರಹ ಬಂಧನದಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿದೆ.

ಆದರೆ ಈ ವರದಿಯನ್ನು ಕೆಲವರು ಅಲ್ಲಗಳೆದಿದ್ದಾರೆ. ಇದು ಸುಳ್ಳು ಪ್ರಚಾರ ಎಂದು ಹೇಳಿದವರಿದ್ದಾರೆ.