ಸನ್ಮಾರ್ಗ ವಾರ್ತೆ
ಭೂ ದಾಖಲೆಗಳು ಭಾರತೀಯ ಪೌರತ್ವಕ್ಕೆ ಪುರಾವೆ ಅಲ್ಲ ಎಂದು ಕೊಲ್ಕತ್ತಾ ಹೈಕೋರ್ಟ್ ಹೇಳಿದೆ. ಬಾಂಗ್ಲಾದೇಶದ ನುಸುಳುಕೋರ ಎಂಬ ಆರೋಪದಲ್ಲಿ ಬಂಧಿತನಾಗಿದ್ದ ನಾಸಿರ್ ಮುಲ್ಲಾ ಅವರ ಅರ್ಜಿಯನ್ನು ಆಲಿಸಿದ ನ್ಯಾಯಾಲಯವು ಭೂ ದಾಖಲೆಗಳು ಭಾರತೀಯ ಪೌರತ್ವಕ್ಕೆ ಪುರಾವೆ ಅಲ್ಲ ಎಂದು ಹೇಳಿದೆ.
ವಿದೇಶಿ ಪ್ರಜೆಯೊಬ್ಬ ಭಾರತದಲ್ಲಿ ಆಸ್ತಿಯನ್ನು ಖರೀದಿಸಬಹುದು.. ಈ ಕಾರಣಕ್ಕಾಗಿ ಅಂತಹ ಖರೀದಿದಾರರನ್ನು ಭಾರತೀಯ ಪ್ರಜೆ ಎಂದು ಹೇಳಲಾಗದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ನಾಸಿರ್ ಮುಲ್ಲಾ ಪ್ರಸ್ತುತ ಗೃಹಬಂಧನದಲ್ಲಿದ್ದಾರೆ. ಬಾಂಗ್ಲಾದೇಶದ ನುಸುಳುಕೋರ ಎಂಬ ಆರೋಪದ ಮೇಲೆ ಜೂನ್ ನಲ್ಲಿ ಇವರ ಬಂಧನವಾಗಿದೆ. ಇವರ ಪರವಾಗಿ ಇವರ ಸಂಬಂಧಿ ಅರ್ಜಿ ಸಲ್ಲಿಸಿದ್ದಾರೆ. ಬಂದಿತ ವ್ಯಕ್ತಿ ತಾನು ವಿದೇಶಿ ಎಂದು ಒಪ್ಪಿಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರದ ಹೈಕೋರ್ಟ್ ನಲ್ಲಿ ವಾದಿಸಿದೆ.
ಭಾರತೀಯ ಪೌರರೆಂದು ಸಾಬೀತುಪಡಿಸುವ ದಾಖಲೆಯನ್ನು ಸಲ್ಲಿಸುವಂತೆ ನ್ಯಾಯಾಲಯ ನಾಸಿರ್ ಮುಲ್ಲಾ ಅವರಲ್ಲಿ ಕೇಳಿತ್ತು. ಜುಲೈ 20 ರವರೆಗೆ ಈ ದಾಖಲೆಯನ್ನು ಸಲ್ಲಿಸಲು ನ್ಯಾಯಾಲಯ ಅವಕಾಶವನ್ನು ಒದಗಿಸಿದೆ.












