ಯುರೇನಿಯಂ ಪುಷ್ಟೀಕರಿಸಲು ಅಮೆರಿಕಾದ ಜೊತೆ ಸೌದಿ ಅರೇಬಿಯಾ ಒಪ್ಪಂದ

0
323

ಸನ್ಮಾರ್ಗ ವಾರ್ತೆ

ಪರಮಾಣು ಉದ್ದೇಶಗಳಿಗಾಗಿ ಸೌದಿ ಅರೇಬಿಯಾ ಯುರೇನಿಯಂ ಪುಷ್ಟೀಕರಣ ಗೊಳಿಸಲು ಅವಕಾಶ ನೀಡುವ ಒಪ್ಪಂದಕ್ಕೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದನೆ ನೀಡಿದ್ದಾರೆ. ಈ ಒಪ್ಪಂದವು ಶಾಂತಿಯುತ ಉದ್ದೇಶಗಳಿಗಾಗಿ ಮಾಡಲಾಗಿದೆ ಎಂದು ಶ್ವೇತ ಭವನದ ಮೂಲಗಳನ್ನು ಉಲ್ಲೇಖಿಸಿ ವಾಲ್‌ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಅಮೆರಿಕ ಮತ್ತು ಸೌದಿ ಅರೇಬಿಯಾ 30 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕುತ್ತಿವೆ ಎಂದು ವರದಿಯಾಗಿದೆ.

ಸೌದಿ ಅರೇಬಿಯಾದಲ್ಲಿ ಶಾಂತಿಯುತ ಉದ್ದೇಶಗಳಿಗಾಗಿ ಪರಮಾಣು ಪುಷ್ಠಿಕರಣ ಸೌಲಭ್ಯವನ್ನು ಸ್ಥಾಪಿಸುವಲ್ಲಿ ಅಮೆರಿಕ ಸಹಕರಿಸಲಿದೆ. ಈ ಪರಮಾಣು ಸ್ಥಾವರವನ್ನು ಎಲ್ಲಿ ಸ್ಥಾಪಿಸಬೇಕು ಎಂಬುದನ್ನು ಎರಡು ರಾಷ್ಟ್ರಗಳು ಜಂಟಿಯಾಗಿ ನಿರ್ಧರಿಸಲಿವೆ.

ಪರಮಾಣು ರಿಯಾಕ್ಟರ್ ನಿರ್ಮಾಣ ಸೇರಿದಂತೆ ಈ ವಿಷಯಗಳಲ್ಲಿ ಅಮೆರಿಕಾದ ಸಂಸ್ಥೆಗಳು ಸಹಕರಿಸಲಿವೆ. ಸೌದಿ ಅರೇಬಿಯಾದ ವಿಷನ್ 2030 ಭಾಗವಾಗಿ ಇಂಧನ ಅಗತ್ಯಗಳಿಗಾಗಿ ಪರಮಾಣು ಶಕ್ತಿಯನ್ನು ಬಳಸುವ ಗುರಿಯನ್ನು ಹೊಂದಲಾಗಿದೆ ಎಂದು ಸರಕಾರ ತಿಳಿಸಿದೆ.