ಸಿಜೆಪಿ ಪ್ರತಿಭಟನೆಯಲ್ಲಿ ವೈರಲ್ ಆದ ವಿದ್ಯಾರ್ಥಿಯ ಇನ್ಸ್ಟಾಗ್ರಾಮ್ ಖಾತೆ ಅಮಾನತು

0
569

ಸನ್ಮಾರ್ಗ ವಾರ್ತೆ

ದೆಹಲಿ ಕಾಕ್ರೋಚ್ ಪ್ರತಿಭಟನೆಯಲ್ಲಿ ವೈರಲ್ ಆಗಿದ್ದ ವಿದ್ಯಾರ್ಥಿ ಅಭಿನವ್ ಬಿಷ್ತ್ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ದೆಹಲಿ ಪೊಲೀಸರು ಅಮಾನತುಗೊಳಿಸಿದ್ದಾರೆ. ಅಭಿನವ್ ಅವರ ಪ್ರತಿಭಟನಾ ವೇದಿಕೆಯ ರೀಲ್ ಲ್ ಗಳು ಭಾರಿ ಜನಪ್ರಿಯತೆಯನ್ನು ಗಳಿಸಿದ್ದವು. ಮುಷ್ಕರ ಕೊನೆಗೊಳಿಸಿದ ನಂತರ ಅಭಿನವ್ ಹಿಂತಿರುಗುತ್ತಿರುವ ವಿಡಿಯೋ ಕೂಡ ಗಮನ ಸೆಳೆದಿತ್ತು.

ಈ ಹುಡುಗನ ಹೊಸ ವಿಧಾನದ ಪ್ರತಿಭಟನ ಶೈಲಿಗೆ ದೇಶಾದ್ಯಂತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಈತನ ಖಾತೆಯನ್ನು ಅಮಾನತುಗೊಳಿಸಲಾಗಿದೆ. ಮುಷ್ಕರ ಪ್ರಾರಂಭವಾಗುವ ಮೊದಲು ಅಭಿನವ್ ಗೆ ಕೇವಲ 5000 ಫಾಲೋವರ್ಸ್ ಗಳು ಇದ್ದರು. ನಂತರ ಅದು 5.7 ಲಕ್ಷ ತಲುಪಿತು. ಪ್ರತಿ ರೀಲ್ ಗಳನ್ನು ಲಕ್ಷಾಂತರ ಜನರು ವೀಕ್ಷಿಸಿದರು.

ಮೇರೆ ಮೆಹಬೂಬ್ ಖಯಾಮತ್ ಹೋಗಿ ಹಾಡಿನ ರೀಲನ್ನು ಹದಿನೈದು ಕೋಟಿಗಿಂತಲೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದಾದ ನಂತರ ಅಭಿನವ್ ತಮ್ಮ ಮುಂದಿನ ನ್ಯಾಷನಲ್ ಕ್ರಶ್ ಗಾಗಿಯೂ ಸುದ್ದಿಯಲ್ಲಿದ್ದರು. ಈಗ ಅವರ ಹಳೆಯ ಖಾತೆಯನ್ನು ಅಮಾನತುಗೊಳಿಸಲಾಗಿದ್ದರೂ ಅಭಿನವ್ ಹೊಸ ಖಾತೆಯೊಂದಿಗೆ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ.