ಹೊಸದಿಲ್ಲಿ, ಜು. 22: ವಿಶ್ವಾಸ ಮತಯಾಚನೆಯ ವಿಷಯದಲ್ಲಿ ತುರ್ತಾಗಿ ಮಧ್ಯಪ್ರವೇಸಿಸಲು ಸುಪ್ರೀಂಕೋರ್ಟು ನಿರಾಕರಿಸಿದೆ. ಕರ್ನಾಟಕ ವಿಧಾನಸಭಾ ಸ್ಪೀಕರ್ ಗೆ ಸೂಚನೆ ನೀಡಲು ಆಗುವುದಿಲ್ಲ. ಸರಕಾರಕ್ಕೆ ಬೆಂಬಲ ಹಿಂಪಡೆದ ಪಕ್ಷೇತರ ಶಾಸಕರ ಅರ್ಜಿಯನ್ನು ಪರಿಗಣಿಸಿಸಿ ಸುಪ್ರೀಂಕೋರ್ಟು ತನ್ನ ನಿಲುವನ್ನು ವ್ಯಕ್ತಪಡಿಸಿದೆ. ಅರ್ಜಿಯ ಮೇಲೆ ನಾಳೆ ವಿಚಾರಣೆ ನಡೆಯಲಿದೆ.
ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಅತೃಪ್ತರು ಮುಂಬೈಯಲ್ಲಿದ್ದರೆ, ಬಿ ಸಿ ಪಾಟೀಲ್ ನೇತೃತ್ವದ ಇನ್ನೊಂದು ತಂಡ ಪುಣೆಯಲ್ಲಿದ್ದಾರೆ. ಮತ್ತೆ ಕೆಲವರು ಎಸ್ ಟಿ ಸೋಮಶೇಖರ್ ನೇತೃತ್ವದಲ್ಲಿ ಲೋನಾವಾಲದ ಹೊಟೇಲ್ನಲ್ಲಿ ಉಳಿದು ಕೊಂಡಿದ್ದಾರೆ.. ಜೆಡಿಎಸ್ ಕಾಂಗ್ರೆಸ್ ಬಿಜೆಪಿ ಶಾಸಕರು ಬೆಂಗಳೂರಿನ ವಿವಿಧ ರೆಸಾರ್ಟಿನಿಂದ ವಿಧಾನಸಭೆಗೆ ಆಗಮಿಸುತ್ತಿದ್ದಾರೆ.












