ದುಬೈ, ಜು .22: ಅಮೆರಿಕದ ಬೇಹುಗಾರಿಕ ಸಂಘಟನೆ ಸಿಐಎಗಾಗಿ ಕೆಲಸ ಮಾಡುತ್ತಿದ್ದ 17 ಮಂದಿಯನ್ನು ಬಂಧಿಸಲಾಗಿದೆ ಎಂದು ಇರಾನ್ ತಿಳಿಸಿದೆ. ಇವರಲ್ಲಿ ಕೆಲವರಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಇರಾನ್ ಇಂಟಲಿಜೆನ್ಸ್ ಉದ್ಧರಿಸಿ ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ತಂತ್ರ ಪ್ರಧಾನವಾದ ಕ್ಷೇತ್ರದಲ್ಲಿ ಕೆಲಸ ಮಾಡಿ ಇವರು ರಹಸ್ಯ ಮಾಹಿತಿ ಸೋರಿಕೆ ಮಾಡುತ್ತಿದ್ದರು. ಆರ್ಥಿಕ, ಮೂಲಭೂತ ಸೌಕರ್ಯ, ಅಣುಕೇಂದ್ರ, ಸೇನೆ, ಸೈಬರ್ ಕ್ಷೇತ್ರ ಇತ್ಯಾದಿ ನಿರ್ಣಾಯಕ ಕೇಂದ್ರಗಳಲ್ಲಿದ್ದ ಇವರನ್ನು ಬಂಧಿಸಲಾಯಿತು. ಇವರು ರಹಸ್ಯ ಮಾಹಿತಿ ಹಸ್ತಾಂತರಿಸಿದ್ದು ಪತ್ತೆಯಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಜೂನ್ನಲ್ಲಿ ಇರಾನ್ನಲ್ಲಿ ಭಾರೀ ಸೈಬರ್ ಬೇಹುಗಾರಿಕೆ ನಡೆದಿದ್ದು ಪತ್ತೆಯಾಗಿತ್ತು. ಸಿಐಎ ಸಹಿತ ಹಲವು ಗುಪ್ತಚರ ಸಂಘಟನೆಗಳ ಹಲವಾರು ಮಂದಿ ವಿವಿಧ ದೇಶದಿಂದ ಬಂದವರನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಲಾಗಿತ್ತು. ಇರಾನ್ ವಿರುದ್ಧ ಅಮೆರಿಕ ಆರ್ಥಿಕ ದಿಗ್ಬಂಧನ ಬಿಗಿಗೊಳಿಸಿದ ಪರಿಸ್ಥಿತಿಯಲ್ಲಿ ಈ ವಿಷಯವನ್ನು ಇರಾನ್ ಬಹಿರಂಗಪಡಿಸಿದೆ. ಹುರ್ಮುಸ್ ಸಮುದ್ರದಲ್ಲಿ ಇರಾನ್ ಬ್ರಿಟಿಶ್ ತೈಲ ಹಡಗು ಸ್ಟೆನೊ ಎಂಪರೊ ವಶಪಡಿಸಿಟ್ಟು ಕೊಂಡಿದೆ.












