ಸನ್ಮಾರ್ಗ ವಾರ್ತೆ
ಲಕ್ನೋದ ಇಟೌಂಜಾ ಪ್ರದೇಶದಲ್ಲಿ 40 ವರ್ಷದ ಮುಸ್ಲಿಂ ಬಿರಿಯಾನಿ ಸ್ಟಾಲ್ ಮಾಲೀಕ ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಮೂವರು ಯುವಕರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಮತ್ತೊಂದೆಡೆ ಪ್ರಯಾಗ್‌ರಾಜ್‌ನ ಫುಲ್‌ಪುರ್‌ನಲ್ಲಿ ವಿಎಚ್‌ಪಿ-ಬಜರಂಗದಳದ ಸದಸ್ಯರು ಸ್ಥಳೀಯ ಮುಸ್ಲಿಂ ಮಾಂಸ ಮಾರಾಟಗಾರರು ಗೋಮಾಂಸ ಮಾರಾಟ ಮಾಡುತ್ತಿದ್ದಾರೆಂದು ಆರೋಪಿಸಿ ಹಿಂಸಾತ್ಮಕ ಗಲಾಟೆ ಸೃಷ್ಟಿಸಿದ್ದಾರೆ.
ಕಸಾಯಿ ಮೊಹಲ್ಲಾದ ನಿವಾಸಿ ರಿಝ್ವಾನ್, ಭಾನುವಾರ ಮತ್ತು ಗುರುವಾರಗಳಂದು ಮಹೋನಾದ ಬಡಿ ಮಸೀದಿ ಬಳಿ ಬಿರಿಯಾನಿ ಸ್ಟಾಲ್ ನಡೆಸುತ್ತಿದ್ದರು.
ಪೊಲೀಸರ ಪ್ರಕಾರ, ರಿಝ್ವಾನ್ ತಮ್ಮ ಅಂಗಡಿಗೆ ಮಾಂಸವನ್ನು ತೆಗೆದುಕೊಂಡು ಹೋಗುತ್ತಿದ್ದಾಗ, 20 ರ ಹರೆಯದ ಮೂವರು ವ್ಯಕ್ತಿಗಳು ಅವರ ಮೇಲೆ ಹಲ್ಲೆ ನಡೆಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ಥಳೀಯ ನಿವಾಸಿಗಳು ಮಧ್ಯಪ್ರವೇಶಿಸಿದ ನಂತರ ಪರಿಸ್ಥಿತಿಯು ಹಿಂಸಾತ್ಮಕವಾಯಿತು. ಹಲ್ಲೆ ನಡೆಸುತ್ತಿರುವ ದೃಶ್ಯವಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಕೇಸರಿ ತಲೆಪಟ್ಟಿ ಧರಿಸಿರುವ ವ್ಯಕ್ತಿ ಸೇರಿದಂತೆ ಗುಂಪಿನ ಸದಸ್ಯರು ರಿಝ್ವಾನ್ ಅವರನ್ನು ತಳ್ಳುವುದು, ಹಿಡಿಯುವುದು ಮತ್ತು ನೆಲಕ್ಕೆ ತಳ್ಳುವುದು, ಒದೆಯುವುದು ಹಾಗೂ ಹೊಡೆಯುವುದನ್ನು ವೀಡಿಯೊ ತೋರಿಸುತ್ತದೆ. ತಲೆ ಮತ್ತು ಮುಖಕ್ಕೆ ಗಾಯ ಆಗಿದ್ದು, ಚಿಕಿತ್ಸೆ ಪಡೆದ ನಂತರ ಭಾನುವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾದರು.
ರಿಝ್ವಾನ್ ಅವರ ದೂರಿನ ಆಧಾರದ ಮೇಲೆ, ಪೊಲೀಸರು ರಾಣಾ ಯಾದವ್, ಶಾನು ಮತ್ತು ಸೂರಜ್ ಎಂದು ಗುರುತಿಸಲಾದ ಮೂವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ರಿಝ್ವಾನ್ ಮೇಲೆ ಹಲ್ಲೆ ನಡೆಸಿದ, ನಿಷೇಧಿತ ಮಾಂಸವನ್ನು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿದ ಮತ್ತು ಕೊಲ್ಲುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕ್ರಿಮಿನಲ್ ಬೆದರಿಕೆ, ಶಾಂತಿಭಂಗ ಉಂಟುಮಾಡುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ, ಸ್ವೇಚ್ಛೆಯಿಂದ ಗಾಯಗೊಳಿಸುವುದು ಮತ್ತು ಮನುಷ್ಯವಧೆಗೆ ಯತ್ನಿಸುವುದಕ್ಕೆ ಸಂಬಂಧಿಸಿದ ನಿಬಂಧನೆಗಳಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಮಾದರಿಗಳನ್ನು ಸಂಗ್ರಹಿಸಲಾಗಿದೆ ಹಾಗೂ ಪರೀಕ್ಷೆಗಾಗಿ ಪಶುವೈದ್ಯಾಧಿಕಾರಿಗೆ ವರದಿಯನ್ನು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಟೌಂಜಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿನೋದ್ ಕುಮಾರ್ ಮಾತನಾಡಿ, ಸ್ಥಳದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣದಲ್ಲಿದೆ ಎಂದಿದ್ದಾರೆ.
ಲಕ್ನೋ ಘಟನೆಯ ನಂತರ ಪ್ರಯಾಗ್‌ರಾಜ್‌ನ ಫುಲ್‌ಪುರ್ ಪ್ರದೇಶದಲ್ಲಿ ಪ್ರತ್ಯೇಕ “ಗೋಮಾಂಸ” ದ್ವೇಷದ ಅಭಿಯಾನ ನಡೆಯಿತು. ಬಜರಂಗದಳದ ಕಾರ್ಯಕರ್ತರು ಸ್ಥಳೀಯ ಪೊಲೀಸ್ ಠಾಣೆಯ ಮುಂದೆ ಪ್ರತಿಭಟಿಸಿ, ಮಾಂಸದಂಗಡಿಗಳನ್ನು ನಡೆಸುತ್ತಿರುವ 12 ಜನರನ್ನು ಬಂಧಿಸುವಂತೆ ಒತ್ತಾಯಿಸಿದರು.
ಮಾಂಸದಂಗಡಿಗಳ ಮಾಲೀಕರು ಗೋಮಾಂಸವನ್ನು ಸಾಗಿಸುತ್ತಿದ್ದಾರೆ ಅಥವಾ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಗಲಾಟೆ ಸೃಷ್ಟಿಸಿದ ನಂತರ ಈ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಹಿಂದೂ ಸಂಘಟನೆಯ ಕಾರ್ಯಕರ್ತರು ಮಾಂಸ ಮಾರಾಟಗಾರರು ಗೋಮಾಂಸ ಮಾರಾಟ ಮಾರುತ್ತಿದ್ದಾರೆ ಎಂದು ಆರೋಪಿಸಿದ ನಂತರ ಶನಿವಾರ ಹಳೆಯ ಮುಖ್ಯ ರೈಲ್ವೆ ಗೇಟ್ ಬಳಿ ಈ ಘಟನೆ ಸಂಭವಿಸಿದೆ. ಆದರೆ ಅಂಗಡಿದಾರರು ಈ ಆರೋಪವನ್ನು ನಿರಾಕರಿಸಿ, ತಮಗೆ ಮಾನ್ಯ ಪರವಾನಗಿ ಇದೆ ಮತ್ತು ಗೋಮಾಂಸ ಮಾರಾಟ ಮಾಡುತ್ತಿಲ್ಲ ಎಂದು ಹೇಳಿದರು.
ಪೊಲೀಸರು 12 ಜನರ ವಿರುದ್ಧ ಪ್ರಕರಣ ದಾಖಲಿಸಿ, ಪರೀಕ್ಷೆಗಾಗಿ ಮಾಂಸದ ಮಾದರಿಯನ್ನು ಸಂಗ್ರಹಿಸಿ ತನಿಖೆ ಆರಂಭಿಸಿದ್ದಾರೆ.
ಮರುದಿನ ಬೆಳಿಗ್ಗೆ, ಬಜರಂಗದಳದ ಕಾರ್ಯಕರ್ತರು ಫುಲ್‌ಪುರ್ ಪೊಲೀಸ್ ಠಾಣೆಯನ್ನು ಸುತ್ತುವರೆದು, ಘೋಷಣೆಗಳನ್ನು ಕೂಗಿ ಧರಣಿ ನಡೆಸಿದರು. 24 ಗಂಟೆಗಳಲ್ಲಿ ಮಾಂಸದಂಗಡಿ ಮಾಲೀಕರನ್ನು ಬಂಧಿಸುವುದಾಗಿ ಇನ್ಸ್‌ಪೆಕ್ಟರ್ ಭರವಸೆ ನೀಡಿದ ನಂತರ ಧರಣಿ ಕೊನೆಗೊಂಡಿತು.
https://x.com/Benarasiyaa/status/2101614687129596213?ref_src=twsrc%5Etfw%7Ctwcamp%5Etweetembed%7Ctwterm%5E2101614687129596213%7Ctwgr%5E7d6953f64bf82e1cead3454b69d6ad1003070492%7Ctwcon%5Es1_c10&ref_url=https%3A%2F%2Fmaktoobmedia.com%2Fpost%3Fid%3D116498slug%3Dmuslim-biryani-seller-brutally-assaulted-in-lucknow-bajrang-dal-creates-hate-campaign-over-meat-shops-in-prayagraj












