ಜಿಎಸ್‌ಟಿ: ಬಂಧನ ಅಧಿಕಾರ ರದ್ದು

0
156

ಸನ್ಮಾರ್ಗ ವಾರ್ತೆ

ವ್ಯವಹಾರಗಳಿಗೆ ಪ್ರಮುಖ ಪರಿಹಾರ, ಬಂಧನ ನಿಯಮಗಳಲ್ಲಿನ ಬದಲಾವಣೆಗಳ ಕುರಿತು ನಿರ್ಧಾರ
ಹೊಸದಿಲ್ಲಿ: ಜಿಎಸ್ಟಿ ಕೌನ್ಸಿಲ್‌ನ  57 ನೇ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತಳೆಯಲಾಗಿದೆ. ಜಿಎಸ್ಟಿ  ವ್ಯವಸ್ಥೆಯನ್ನು ಸರಳೀಕರಿಸಲು ಮತ್ತು ತೆರಿಗೆದಾರರಿಗೆ ಪರಿಹಾರ ನೀಡಲು ಮರುಪಾವತಿ ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ತೆರಿಗೆ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಮತ್ತು ಅರ್ಥವಾಗುವಂತೆ ಮಾಡಲು ಹಲವಾರು ಪ್ರಮುಖ ನಿರ್ಧಾರಗಳನ್ನು ಸಭೆ ಅನುಮೋದಿಸಿದೆ. ಈವರೆಗೂ ಜಿಎಸ್‌ಟಿ  ಅಧಿಕಾರಿಗಳಿಗಿದ್ದ ಬಂಧನದ ಅಧಿಕಾರವನ್ನು ರದ್ದುಗೊಳಿಸುವುದು ಇನ್ನೊಂದು ಪ್ರಮುಖ ನಿರ್ಧಾರವಾಗಿದೆ.  

ವಿತರಣಾ ಸೇವೆಗಳು, ರಿಟ್ರೆಡ್ ಮಾಡಿದ ಟ್ರ‍್ಯಾಕ್ಟರ್ ಟೈರ್‌ಗಳು ಮತ್ತು ಸಣ್ಣ ತೆರಿಗೆ ವಿಷಯಗಳಿಗೆ ಸಂಬ0ಧಿಸಿದ0ತೆಯೂ ಪ್ರಮುಖ ನಿರ್ಧಾರಗಳು ಆಗಿವೆ. . ಈ ಬದಲಾವಣೆಗಳು ಟೆಲಿಕಾಂ, ಮೂಲಸೌಕರ್ಯ, ವಿತರಣೆ ಮತ್ತು ಕಾರ್ಪೊರೇಟ್ ವಲಯಗಳಿಗೆ ವರದಾನವಾಗುವ  ನಿರೀಕ್ಷೆಯಿದೆ.

ತೆರಿಗೆ ಅಧಿಕಾರಿಗಳ ಬಂಧನ ಅಧಿಕಾರವನ್ನು ಮಂಡಳಿಯು ರದ್ದುಗೊಳಿಸಿದ ಜಿಎಸ್‌ಟಿ ಕೌನ್ಸಿಲ್ ವಿಚಾರಣೆಯ ಮಿತಿಯನ್ನು 1 ಕೋಟಿಯಿಂದ 5 ಕೋಟಿಗೆ ಹೆಚ್ಚಿಸಿದೆ. ಮರುಪಾವತಿ ಪ್ರಕ್ರಿಯೆಯನ್ನು ಸಹ ತ್ವರಿತಗೊಳಿಸಲಾಗಿದೆ. ಮರುಪಾವತಿ ಹಕ್ಕುಗಳನ್ನು ಸ್ವೀಕರಿಸುವ ಕಾಲಮಿತಿಯನ್ನು 15 ದಿನಗಳಿಂದ 10 ದಿನಗಳಿಗೆ ಇಳಿಸಲಾಗಿದೆ.

ಜಿಎಸ್‌ಟಿ ದರಗಳನ್ನು ಪರಿಶೀಲಿಸಲು ವಾರ್ಷಿಕವಾಗಿ ಪ್ರತ್ಯೇಕ  ಸಭೆ ನಡೆಸಲಾಗುವುದು ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ನೋಟೀಸ್ ಮತ್ತು ವಿಚಾರಣೆಗಳಿಗೆ ಜಿಎಸ್‌ಟಿ ಮಂಡಳಿಯು ಏಕರೂಪದ ಮಾನದಂಡಗಳನ್ನು ಶಿಫಾರಸು ಮಾಡಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.