ರಾಂಚಿ, ಜು. 27: ಝಾರ್ಖಂಡ್ ನ ವಿಧಾನಸಭೆಯಲ್ಲಿ ಮುಸ್ಲಿಂ ಶಾಸಕನಲ್ಲಿ ಜೈಶ್ರೀರಾಂ ಹೇಳಲು ರಾಜ್ಯದ ಸಚಿವ ಸಿ.ಪಿ. ಸಿಂಗ್ ಬಲವಂತಪಡಿಸಿದ ಘಟನೆ ನಿನ್ನೆ ನಡೆದಿದೆ. ವಿಧಾನಸಭೆಯ ಮುಂದೆ ಮಾಧ್ಯಮಗಳ ಮುಂದೆ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿಗೆ ಜೈಶ್ರೀಂ ಹೇಳಲು ಬಿಜೆಪಿ ನಾಯಕ ಸಿ ಪಿ ಸಿಂಗ್ ಬಲವಂತಪಡಿಸಿದರು.
ಇರ್ಫಾನ್ ಭಾಯ್ ನಾನು ನಿಮ್ಮಲ್ಲಿ ಜೈಶ್ರೀರಾಂ ಹೇಳಲು ಒತ್ತಾಯಿಸುತ್ತೇನೆ ಎಂದು ಸಚಿವರು ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿಸುತ್ತಿದೆ. ನಿಮ್ಮ ಪೂರ್ವಜರಿಗೆ ರಾಮನು ನಿಕಟನಾಗಿದ್ದ. ಬಾಬರ್ ಅಲ್ಲ ಎಂದು ಸಚಿವ ಸಿ ಪಿ ಸಿಂಗ್ ಹೇಳುತ್ತಿದ್ದಾರೆ. ಜೊತೆಗೆ ಶಾಸಕರ ಕೈಯನ್ನು ಬಲವಾಗಿ ಎತ್ತಲು ಸಚಿವರು ಶ್ರಮಿಸಿದ್ದಾರೆ. ರಾಮನ ಹೆಸರನ್ನು ನೀವು ಜನರನ್ನು ಹೆದರಿಸಲು ಬಳಸುತ್ತಿದ್ದೀರಿ ಎಂದು ಇರ್ಫಾನ್ ಅನ್ಸಾರಿ ಸಚಿವರಿಗೆ ಉತ್ತರಿಸಿದರು. ಜನರ ಮುಂದೆ ರಾಮನನ್ನು ನೀವು ಅವಮಾನಗೊಳಿಸುತ್ತಿದ್ದೀರಿ. ಉದ್ಯೋಗ, ವಿದ್ಯುತ್, ಕುಡಿಯುವ ನೀರು ಇವೆಲ್ಲ ಈಗಿನ ಅಗತ್ಯ ಎಂದು ಶಾಸಕರು ಹೇಳಿದರು. ನಿಮ್ಮನ್ನು ನಾನು ಹೆದರಿಸುವುದಿಲ್ಲ. ನಿಮ್ಮ ಹಿರಿಯರು ಹೇಳುತ್ತಿದ್ದುದು ಜೈಶ್ರೀರಾಂ ಆಗಿದೆ ಎನ್ನುವುದನ್ನು ಮರೆಯಬೇಡಿರಿ. ತೈಮೂರ್, ಬಾಬರ್, ಗಝ್ನಿ ನಿಮ್ಮ ಹಿರಿಯರಲ್ಲ. ನಿಮ್ಮ ಹಿರಿಯರು ಶ್ರೀರಾಮನನ್ನು ಅನುಸರಿಸುತ್ತಿದ್ದರು ಎಂದು ಸಚಿವರು ಹೇಳಿದರು. ಸಚಿವರ ವರ್ತನೆ ಕೇವಲ ಲೋಕಾಭಿರಾಮವಾಗಿತ್ತು. ಅದನ್ನು ಕೆಟ್ಟದಾಗಿ ವಿಶ್ಲೇಷಿಸಲಾಗುತ್ತಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಸಿಂಗ್ ಝಾರ್ಖಂಡ್ ಬಿಜೆಪಿ ಸರಕಾರದ ನಗರಾಭಿವೃದ್ಧಿ, ವಸತಿ, ಸಾರಿಗೆ ಸಚಿವರು ಆಗಿದ್ದಾರೆ. ಇರ್ಫಾನ್ ಅನ್ಸಾರಿ ಜಂತಾರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.












