‘ರಾಜೀನಾಮೆ ನೀಡಿ ಹೊರಡಿ, ದೇಶಕ್ಕಾಗಿ ನೀವು ಮಾಡುವ ಒಳ್ಳೆಯ ಕೆಲಸ ಅದೇ’; ಜ್ಞಾನೇಶ್ ಕುಮಾರ್‌ಗೆ ರಾಹುಲ್ ಗಾಂಧಿ

0
154

ಸನ್ಮಾರ್ಗ ವಾರ್ತೆ

ದೆಹಲಿ: ಆರೋಪ ಹೊತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ದೇಶಕ್ಕಾಗಿ ಮಾಡಬಹುದಾದ ಅತ್ಯುತ್ತಮ ಕೆಲಸ ರಾಜೀನಾಮೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್‌ನ ‘ಚಲೋ ದೆಹಲಿ’ ಮೆರವಣಿಗೆಯ ಮುನ್ನ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಜನರನ್ನು ದೆಹಲಿಗೆ ತಲುಪದಂತೆ ತಡೆಯಲಾಗುತ್ತಿದೆ. ರೈಲುಗಳು ಮತ್ತು ಬಸ್‌ಗಳನ್ನು ತಡೆಯಲಾಗುತ್ತಿದೆ. ದೆಹಲಿಯನ್ನು ಕೋಟೆಯನ್ನಾಗಿ ಬದಲಾಯಿಸಲಾಗಿದೆ. ಭಾರತದ ರಾಜಧಾನಿಯಾದ ದೆಹಲಿಯನ್ನು ಏಕೆ ಲಾಕ್ ಮಾಡಲಾಗುತ್ತಿದೆ? “ನೀವು ತಪ್ಪು ಮಾಡಿರಬಹುದು, ಆದರೆ ಆ ತಪ್ದಿನ ಮಾಸ್ಟರ್‌ಮೈಂಡ್ ನೀವಲ್ಲ” ಎಂದು ರಾಹುಲ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಭಟನಾ ನಿರತ ಯುವಕರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯದ ವೀಡಿಯೊಗಳನ್ನೂ ರಾಹುಲ್ ಪ್ರದರ್ಶಿಸಿದರು.

“ಜ್ಞಾನೇಶ್ ಕುಮಾರ್ ಯಾಕೆ ರಾಜೀನಾಮೆ ನೀಡಿಲ್ಲ? ವಿರೋಧ ಪಕ್ಷದ ನಾಯಕರನ್ನು ಬಂಧಿಸಲಾಗಿದೆ. ಇತರ ಇಬ್ಬರು ಚುನಾವಣಾ ಆಯುಕ್ತರು ಕೇಳಿರುವ ಅದೇ ಪ್ರಶ್ನೆಗಳನ್ನು ನಾವು ಕೇಳುತ್ತಿರುವುದರಿಂದ ಇದೆಲ್ಲವೂ ನಡೆಯುತ್ತಿದೆ. ಜ್ಞಾನೇಶ್ ಅವರಿಗೆ ರಾತ್ರಿ ನಿದ್ರೆ ಬರುತ್ತಿಲ್ಲ ಎಂಬುದು ನಮಗೆ ತಿಳಿದಿದೆ. ನೀವು ಮುಖ್ಯ ಚುನಾವಣಾ ಆಯುಕ್ತರಾಗಿರುವವರೆಗೆ, ಇದರಿಂದ ತಪ್ಪಿಸಿಕೊಳ್ಳಲು ನಿಮಗೆ ಸಾಧ್ಯವಿಲ್ಲ. ಲಕ್ಷಾಂತರ ಜನರು ನಿಮಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಮತ್ತು ಅವರು ಸುಮ್ಮನಾಗುದಿಲ್ಲ” ಎಂದು ರಾಹುಲ್ ಹೇಳಿದರು.

ಸುಮಾರು 200 ಸರ್ಕಾರಿ ಅಧಿಕಾರಿಗಳು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು. “ಸಂವಿಧಾನವನ್ನು ರಕ್ಷಿಸುವ ಮತ್ತು ಚುನಾವಣಾ ವ್ಯವಸ್ಥೆಯನ್ನು ಸರಿಪಡಿಸುವವರೆಗೆ ದೇಶದ ಯುವಕರು ಹೋರಾಟವನ್ನು ನಿಲ್ಲಿಸುವುದಿಲ್ಲ. ನಾವು ಹಿಂದೆ ಸರಿಯುವುದಿಲ್ಲ. ಇದು ಸಂವಿಧಾನವನ್ನು ರಕ್ಷಿಸುವ ಹೋರಾಟವಾಗಿದೆ.”

ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಗಳ ಕುರಿತು ಮಾತನಾಡಿದ ರಾಹುಲ್, “ಎಲ್ಲಾ ಪ್ರತಿಭಟನೆಗಳು ಒಂದೇ ಹೋರಾಟದ ಭಾಗವಾಗಿವೆ. ನೀವು ಯಾವ ಪಕ್ಷ ಅಥವಾ ರಂಗದಿಂದ ಬಂದಿದ್ದೀರಿ ಎಂಬುದು ನಮಗೆ ಮುಖ್ಯವಲ್ಲ, ಇದು ಒಂದೇ ಹೋರಾಟ.” ಸಂವಿಧಾನವನ್ನು ರಕ್ಷಿಸಲು ಐಕ್ಯತೆಯಿಂದ ನಿಲ್ಲುವಂತೆ ರಾಹುಲ್ ಗಾಂಧಿ ಮನವಿ ಮಾಡಿದರು.

ಸುಪ್ರೀಂ ಕೋರ್ಟ್ ಕಡೆಗೆ ನಡೆಯುವ ಮೆರವಣಿಗೆಯೊಂದಿಗೆ ಐಕ್ಯತೆ ಪ್ರದರ್ಶಿಸುವಂತೆ ರಾಹುಲ್ ಗಾಂಧಿ ಸಾಮಾನ್ಯ ಜನರಿಗೆ ಮನವಿ ಮಾಡಿದರು. ಅವರು ಹೇಳಿದರು: “ಯಾವುದಾದರೂ ಕಾರಣಾಂತರದಿಂದ ನೀವು ನೇರವಾಗಿ ಬರಲು ಸಾಧ್ಯವಾಗದಿದ್ದರೆ, ನಾವು ಸುಪ್ರೀಂ ಕೋರ್ಟ್ ತಲುಪಿದಾಗ ನಿಮ್ಮ ಐಕ್ಯತೆಯನ್ನು ತೋರಿಸಿ. ನೀವು ಸಂವಿಧಾನದೊಂದಿಗೆ ನಿಂತಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಿ. ದೇಶದಲ್ಲಿ ನಡೆಯುತ್ತಿರುವುದು ತಪ್ಪು ಮತ್ತು ಸ್ವೀಕಾರಾರ್ಹವಲ್ಲ ಎಂದು ನೀವು ಬಹಿರಂಗವಾಗಿ ಹೇಳಬೇಕು… ನೀವು ಮುಚ್ಚಿದ ಕೋಣೆಯಲ್ಲಿದ್ದರೂ ಸಹ ಸಂವಿಧಾನವನ್ನು ರಕ್ಷಿಸುತ್ತೀರಿ ಎಂದು ಜೋರಾಗಿ ಹೇಳಬೇಕು” ಎಂದು ಅವರು ಹೇಳಿದರು.

ಪೋಷಕರು ತಮ್ಮ ಮಕ್ಕಳನ್ನು ಪ್ರತಿಭಟನೆಗಳಿಗೆ ಕಳುಹಿಸುವುದನ್ನು ತಡೆಯಲು ಪೊಲೀಸರು ಪ್ರತಿಭಟನಾ ನಿರತ ಯುವತಿಯರನ್ನು ಥಳಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು. ಭಾರತ ಮತ್ತು ಅದರ ಯುವಕರು ಮೋದಿಯವರ ಪೊಲೀಸರಿಗೆ ಹೆದರುತ್ತಾರೆ ಎಂಬ ಭಯ ಹುಟ್ಟಿಸುವ ಕಥೆಯನ್ನು ಅವರು ಸೃಷ್ಟಿಸುತ್ತಿದ್ದಾರೆ. ಬ್ಯಾರಿಕೇಡ್‌ಗಳನ್ನು ಹಾಕಿ ದೆಹಲಿಯ ಜನರ ಮನಸ್ಸನ್ನು ತಡೆಯಲು ಸಾಧ್ಯವಿಲ್ಲ ಎಂದು ರಾಹುಲ್ ಹೇಳಿದರು.

https://x.com/RahulGandhi/status/2109534328074203616?ref_src=twsrc%5Etfw%7Ctwcamp%5Etweetembed%7Ctwterm%5E2109534328074203616%7Ctwgr%5E437e1c29af2a94a761d5efd8242f337da0bf444a%7Ctwcon%5Es1_c10&ref_url=https%3A%2F%2Fadmin.mediaoneonline.com%2F