ಲಕ್ನೊ,ಜು.29: ಜೈ ಶ್ರೀರಾಮ್ ಹೇಳಲು ನಿರಾಕರಿಸಿದ ಹದಿನೈದು ವರ್ಷದ ಮುಸ್ಲಿಂ ಬಾಲಕನನ್ನು ಉತ್ತರ ಪ್ರದೇಶದ ಚಂದೌಲಿಯಲ್ಲಿ ಬೆಂಕಿಗಾಹುತಿ ಮಾಡಿ ಕೊಲೆ ಮಾಡಲಾಗಿದೆ. ಶೇ. 60ಕ್ಕೂ ಹೆಚ್ಚು ಸುಟ್ಟಗಾಯಗಳೊಂದಿಗೆ ಬಾಲಕನನ್ನು ಆಸ್ಪತ್ರೆಗೆ ಸೇರಿಸಿದರೂ ಆತ ಅಸುನೀಗಿದ್ದಾನೆ. ಜೈ ಶ್ರೀರಾಮ್ ಹೇಳದ್ದಕ್ಕಾಗಿ ನಾಲ್ಕು ಮಂದಿ ಸೇರಿ ಬಾಲಕನಿಗೆ ಬೆಂಕಿ ಕೊಟ್ಟರು ಎಂದು ಬಾಲಕ ಹೇಳುವ ದೃಶ್ಯ ಆಸ್ಪತ್ರೆಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಕಬೀರ್ ಚೌರ ಆಸ್ಪತ್ರೆಯಲ್ಲಿ ಬಾಲಕನ್ನು ದಾಖಲಿಸಲಾಗಿತ್ತು. ನಾಲ್ಕು ಮಂದಿ ತನ್ನನ್ನು ಅಪಹರಿಸಿಕೊಂಡು ಹೋದರು. ಇಬ್ಬರು ಕೈಗಳನ್ನು ಕಟ್ಟಿಹಾಕಿದರು. ಇನ್ನೊಬ್ಬ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಬಾಲಕ ಆಸ್ಪತ್ರೆಯಲ್ಲಿ ವೈದ್ಯರ ಮುಂದೆ ಹೇಳಿಕೆ ನೀಡಿದ್ದಾನೆಂದು ಆಜ್ತಕ್ ಟಿವಿ ವರದಿ ಮಾಡಿದೆ. ಇದೇ ವೇಳೆ, ಪೊಲೀಸರು ಬಾಲಕನ ಹೇಳಿಕೆಯಲ್ಲಿ ವೈರುಧ್ಯವಿದೆ ಎನ್ನತೊಡಗಿದ್ದಾರೆ. ಮಹಾರಾಜ್ಪುರ ಗ್ರಾಮದಲ್ಲಿ ಘಟನೆ ಮತ್ತು ಹುಟ್ಟಿದ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ಬಾಲಕ ಹೇಳಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.












