ಅಶ್ಲೀಲ ವೀಡಿಯೊ: ಹಿಮಾಚಲ ಪ್ರದೇಶದಲ್ಲಿ ಪಾರ್ಟಿ ನಾಯಕರನ್ನು ಅಮಾನತುಗೊಳಿಸಿದ ಬಿಜೆಪಿ

0
570

ಶಿಮ್ಲಾ,ಜು. 29: ಅಶ್ಲೀಲ ವೀಡಿಯೊವನ್ನು ಸಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಿದಕ್ಕಾಗಿ ಇಬ್ಬರು ನಾಯಕರನ್ನು ಬಿಜೆಪಿ ಪಕ್ಷದಿಂದ ಅಮಾನುಗೊಳಿಸಿದೆ. ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಬಿಜೆಪಿ ಯುವ ಮೋರ್ಚದ ನಾಯಕರಾಗಿದ್ದು, ಐಟಿ ಕಾನೂನು ಪ್ರಕಾರ ಇವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರಲ್ಲದೇ, ವೀಡಿಯೊ ಪ್ರಚಾರ ಮಾಡುವವರಿಗೆ ಮುನ್ನೆಚ್ಚರಿಕೆಯನ್ನು ನೀಡಿದೆ.

12.35 ನಿಮಿಷ ಅವಧಿಯ ವೀಡಿಯೊವನ್ನು ಕೆಲವು ತಿಂಗಳ ಹಿಂದೆ ಚಿತ್ರೀಕರಿಸಿಲಾಗಿತ್ತು. ಘಟನೆಯಲ್ಲಿ ಒಳಗೊಂಡ ಮಹಿಳೆಯೊಡನೆ ಅವಳ ಪತಿ ಸಂಬಂಧ ಮುಂದುವರಿಸಬಾರದೆಂದು ಬಿಜೆಪಿ ನಾಯಕನ ಪತ್ನಿ ಹೇಳುತ್ತಿರುವ ಆಡಿಯೊ ಕೂಡ ಹೊರಬಂದಿತ್ತು. ವೀಡಿಯೊ ಪ್ರಚಾರ ಮಾಡಿದ್ದರಲ್ಲಿ ಈಕೆಯೂ ಶಾಮೀಲಾಗಿದ್ದಾಳೆ ಎನ್ನಲಾಗಿದೆ. ಇದರಲ್ಲಿ ಒಳಗೊಂಡ ಮಹಿಳೆ ಕುಲು ಪೊಲೀಸ್ ಸುಪರಿಡೆಂಟ್‍ಗೆ ದೂರು ನೀಡಿದ ಬಳಿಕ ಕೇಸು ದಾಖಲಿಸಿಕೊಳ್ಳಲಾಗಿದೆ.