ಇಸ್ರೇಲ್ ಚುನಾವಣೆ: ಭಾರತಕ್ಕೆ ಜೈ ಎಂದ ನೆತನ್ಯಾಹು

0
202

ಸನ್ಮಾರ್ಗ ವಾರ್ತೆ

ಜೆರುಸಲೇಂ: ಭವಿಷ್ಯದಲ್ಲಿ ಅಮೆರಿಕ ಅಧ್ಯಕ್ಷರಾಗಿ ಬರುವವರು ಇಸ್ರೇಲಿನೊಂದಿಗೆ ವೈರತ್ವದೊಂದಿಗೆ ವರ್ತಿಸುವ ಸಾಧ್ಯತೆಗಳಿವೆ. ಆ ಸವಾಲನ್ನು ಎದುರಿಸು ಭಾರತದಂತ ದೇಶಗಳೊಂದಿಗೆ ಹೊಸ ಸಖ್ಯ ಮಾಡಿಕೊಳ್ಳುವುದು ಅಗತ್ಯ ಎಂದು ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಅಕ್ಟೋಬರ್ 27ಕ್ಕೆ ಇಸ್ರೇಲಿನಲ್ಲಿ ಚುನಾವಣೆ ಇದ್ದು ಅದಕ್ಕಿಂತ ಮುಂಚೆ ಇಂತಹದೊಂದು ಹೇಳಿಕೆ ನೆತನ್ಯಾಹು ನೀಡಿದರು.

ನೆತನ್ಯಾಹು ಹೇಳಿರುವ ಪ್ರಕಾರ ಎರಡು ಅಥವಾ ನಾಲ್ಕು ವರ್ಷಗಳಲ್ಲಿ ಇಸ್ರೇಲ್ ವಿರುದ್ಧ ಶತ್ರುತ್ವ ಹೊಂದಿರುವ ಯು.ಎಸ್. ಅಧ್ಯಕ್ಷರು ಅಧಿಕಾರಕ್ಕೆ ಬರಬಹುದು ಅಮೆರಿಕದ ನೀತಿಗಳಲ್ಲಿ ಮುಂದೆ ದೊಡ್ಡ ಬದಲಾವಣೆ ಆದರೆ ಅದನ್ನು ಎದುರಿಸಲು ದೇಶ ಸಜ್ಜುಗೊಳ್ಳಬೇಕು. ಟ್ರಂಪ್ ಅಧಿಕಾರದ ಉಳಿದ ಅವಧಿಯನ್ನು ಇಸ್ರೇಲಿನ ಸ್ಥಿತಿ ಉತ್ತಮ ಪಡಿಸಲು ಉಪಯೋಗಿಸಬೇಕೆಂದು ಅವರು ಆಗ್ರಹಿಸಿದರು.

ಉತ್ತಮ ಕಾಲ ಇರಲಿ ಅಥವಾ ಕೆಟ್ಟಕಾಲ ಬರಲಿ ಈ ಎರಡು ವರ್ಷಗಳಲ್ಲಿ ಅಮೆರಿಕ ಮಟ್ಟದಲ್ಲಿ ನಾವು ಮಾಡಬೇಕಾಗಿರುವುದನ್ನೆಲ್ಲ ಮಾಡಬೇಕಾಗಿದೆ. ಅಲ್ಲದೇ, ಇತರ ದೇಶಗಳೊಂದಿಗೆ ಸಖ್ಯ ಮಾಡಿಕೊಳ್ಳಬೇಕು. ನಮ್ಮ ಪ್ರಾದೇಶಿಕ ಮತ್ತು ಹೊರಗಿನ ದೇಶಗಳೊಂದಿಗೆ ಇದನ್ನೇ ತಾನು ಮಾಡುತ್ತಿದ್ದೇನೆ. ಭಾರತ ಸಣ್ಣ ದೇಶವಲ್ಲ. ಇಂತಹ ಇತರ ಅನೇಕ ದೇಶಗಳಿವೆ ಎಂದು ನೆತನ್ಯಾಹು ಹೇಳಿದ್ದಾರೆ.

ಇಸ್ರೇಲ್ ಚುನಾವಣೆಗೆ ಮುನ್ನ ನೆತನ್ಯಾಹು ಮಂಡಿಸಿದ ಈ ಭದ್ರತಾ ನೀತಿಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿದ್ದು, ಇದೊಂದು ರಾಜಕೀಯ ತಂತ್ರವೆಂದು ಆರೋಪಿಸಿವೆ.