ನಾಳೆ ವೈದ್ಯರ ರಾಷ್ಟ್ರವ್ಯಾಪಿ ಮುಷ್ಕರ

0
440

ಹೊಸದಿಲ್ಲಿ, ಜು. 30 : ಬುಧವಾರ ರಾಷ್ಟ್ರಾದ್ಯಂತ ವೈದ್ಯರ ಮುಷ್ಕರ ನಡೆಯಲಿದ್ದು, ತೀವ್ರ ಪರಿಚರಣಾ ವಿಭಾಗವನ್ನು ಮುಷ್ಕರದಿಂದ ಹೊರತುಪಡಿಸಲಾಗಿದೆ. ರಾಷ್ಟ್ರೀಯ ಮೆಡಿಕಲ್ ಕಮಿಶನ್ ಮಸೂದೆ ಲೋಕಸಭೆಯಲ್ಲಿ ಪಾಸು ಮಾಡಿದ್ದನ್ನು ಪ್ರತಿಭಟಿಸಿ ಭಾರತದ ಮೆಡಿಕಲ್ ಅಸೋಸಿಯೇಶನ್ ಮುಷ್ಕರಕ್ಕೆ ಕರೆ ನೀಡಿದೆ.

ಬುಧವಾರ ಬೆಳಗ್ಗೆ ಆರು ಗಂಟೆಯಿಂದ 24 ಗಂಟೆಗಳ ಕಾಲ ಮುಷ್ಕರ ನಡೆಯಲಿದ್ದು ಸರಕಾರ, ಖಾಸಗಿ ಕ್ಷೇತ್ರದ ವೈದ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.