ಅಂತರ್ಜಾತಿ ಮದುವೆ: ವರನ ಕುಟುಂಬದ ಎಂಟು ಮಂದಿಯನ್ನು ನಗ್ನಗೊಳಿಸಿ ಥಳಿಸಿದರು

0
1341

ಚೆನ್ನೈ, ಜು. 30: ಧರ್ಮಪುರಿಯ ಸಮೀಪ ಅನ್ಯಜಾತಿಯ ಮದುವೆಯಾಗಿದ್ದಕ್ಕಾಗಿ ವರನ ಕುಟುಂಬದ ಎಂಟು ಮಂದಿಯನ್ನು ನಗ್ನಗೊಳಿಸಿ ಮರಕ್ಕೆ ಕಟ್ಟಿಹಾಕಿ ವಧುವಿನ ಸಂಬಂಧಿಕರು ಕ್ರೂರವಾಗಿ ಹೊಡೆದಿದ್ದಾರೆ. ಇದರ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಆದರೂ ಪೊಲೀಸರು ಈವರೆಗೆ ಕೇಸು ದಾಖಲಿಸಿಕೊಂಡಿಲ್ಲ. ಪೆಟ್ಟು ತಿಂದವರು ಕೇಸು ಕೊಡಲು ಸಿದ್ಧರಾಗಿಲ್ಲ. ಸಮಸ್ಯೆ ಮತ್ತೆ ಬಿಗಾಡಾಯಿಸಬಹುದೆಂದು ಇವರು ಹೆದರಿದ್ದಾರೆ.

ಧರ್ಮಪುರಿ ಪೆನ್ನಾಕರ ನವಿತರ್ ಸಮುದಾಯದ ವಿವೇಕ್ ಮತ್ತು ವಣ್ಣಿಯಾ ಜಾತಿಯ ಪ್ರಿಯಾ ಒಂದು ತಿಂಗಳ ಹಿಂದೆ ಓಡಿ ಹೋಗಿ ಮದುವೆಯಾಗಿದ್ದರು. ಯುವತಿ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಣ್ಣಿಯಾರ್ ಜಾತಿಗೆ ಹೆದರಿ ವಿವೇಕ್‍ನ ಕುಟುಂಬ ಬೇರೆ ಬೇರೆ ಕಡೆ ವಾಸಿಸುತ್ತಿತ್ತು. ಕಳೆದ ದಿವಸ ಇವರನ್ನು ಕಂಡು ಹಿಡಿದು ಗ್ರಾಮಕ್ಕೆ ಕರೆತಂದು ಶಿಕ್ಷೆ ಜಾರಿಗೊಳಿಸಲಾಗಿದೆ. ಎರಡು ಜಾತಿಗಳು ಹಿಂದುಳಿದ ಸಮುದಾಯಕ್ಕೆ ಸೇರಿವೆ.