ದಿಲ್ಲಿಯ ಪೊಲೀಸ್ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪೊಲೀಸರು

0
223

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ವರ್ಗಾವಣೆಯನ್ನು ವಿರೋಧಿಸಿ ದಿಲ್ಲಿ ಪೊಲೀಸರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಬಹಿರಂಗವಾಗಿ ಪ್ರತಿಭಟಿಸಿದ್ದು ಅಚ್ಚರಿಗೆ ಕಾರಣವಾಯಿತು. ಇಬ್ಬರು ಪೊಲೀಸರ ವರ್ಗಾವಣೆಯನ್ನು ವಿರೋಧಿಸಿ ಸೋಮವಾರ ಬೆಳಗ್ಗೆ ದಿಲ್ಲಿ ಪೊಲೀಸ್ ಕೇಂದ್ರ ಕಚೇರಿಯ ಮುಂದೆ 80 ರಷ್ಟು ಪೊಲೀಸರಿಂದ ಪ್ರತಿಭಟನೆ ನಡೆಯಿತು. ಗೇಟ್ ನಂಬರ್ ಒಂದರ ಮುಂಭಾಗದಲ್ಲಿ ನಾಟಕೀಯ ಘಟನೆ ನಡೆಯಿತು. 80 ರಷ್ಟು ಪೊಲೀಸರು ಅಲ್ಲಿನ ಫೂಟ್‌ಪಾತ್‌ನಲ್ಲಿ ನೆರೆದರು. ಹಿರಿಯ ಪೊಲೀಸರು ಪ್ರತಿಭಟನೆ ನಿಲ್ಲಿಸಲು ಹೇಳಿದರು. ಪ್ರತಿಭಟನಾನಿರತ ಪೊಲೀಸರು ಅದಕ್ಕೆ ಕಿವಿಕೊಡಲಿಲ್ಲ.

ಪ್ರತಿಭಟನೆ ಶುರುವಾದ ಕೂಡಲೇ ದಿಲ್ಲಿ ಡೆಪ್ಯುಟಿ ಪೊಲೀಸ್ ಕಮಿಶನರ್ ಸಚಿನ್ ಶರ್ಮ ಸ್ಥಳಕ್ಕಾಗಮಿಸಿದರು. ವರ್ಗಾವಣೆಗೊಂಡ ಅಧಿಕಾರಿಗಳಲ್ಲಿ ಒಬ್ಬರಾದ ಎಸಿಪಿ ಮಾನಸಿ ವಸಿಷ್ಠರೊಡನೆ ಅವರು ಚರ್ಚಿಸಿದರು. ಸಚಿನ್ ಶರ್ಮ ಪ್ರತಿಭಟನೆ ನಿಲ್ಲಿಸಬೇಕು. ಪೊಲೀಸ್ ಇಲಾಖೆಯ ಶಿಸ್ತನ್ನು ಪಾಲಿಸಬೇಕು. ಸಾಮಾನ್ಯ ಪ್ರತಿಭಟನಾಕಾರರಂತೆ ವರ್ತಿಸಬಾರದೆಂದು ಹೇಳಿದರು.

ನಂತರ ಚರ್ಚಿಸಲು ಕಚೇರಿಯ ಒಳಗೆ ಬರಬೇಕೆಂದು ಕೆಲವು ಪೊಲೀಸರನ್ನು ಕರೆದರು. ಆದರೆ ಪ್ರತಿಭಟನಾಕಾರರಲ್ಲಿ ಯಾರೂ ಹೋಗಲಿಲ್ಲ. ಪೊಲೀಸ್ ಕಮಿಶನರ್ ನಮ್ಮ ದೂರನ್ನು ನೇರವಾಗಿ ಆಲಿಸಬೇಕು ಮತ್ತು ಅಧಿಕಾರಿಗಳೊಂದಿಗೆ ಮಾತುಕತೆಗೆ ಅವಕಾಶ ಮಾಡಿಕೊಡಬೇಕೆಂದು ಪೊಲೀಸರು ಹೇಳಿದರು. ಆದರೆ ಪ್ರತಿಭಟಿಸುವ ಪೊಲೀಸರೊಂದಿಗೆ ಮಾತುಕತೆಗೆ ಅವರ ದೂರುಗಳಿಗೆ ಪ್ರತಿಕ್ರಿಯಿಸಲು ಯಾವುದೇ ಹಿರಿಯ ಅಧಿಕಾರಿಗಳು ಪೊಲೀಸ್ ಮುಖ್ಯಾಲಯದಿಂದ ಹೊರಗೆ ಬರಲಿಲ್ಲ.

ಅಕ್ಟೋಬರ್ 23 ರಂದು ಶಾಹ್ದಾರ ಪೊಲೀಸ್ ಠಾಣೆಯಲ್ಲಿ ವಕೀಲರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿತ್ತು. ಘಟನೆಯಲ್ಲಿ ವಕೀಲರೊಬ್ಬರ ತಲೆಗೆ ಗಂಭೀರ ಪೆಟ್ಟಾಗಿತ್ತು ಎನ್ನಲಾಗಿದೆ. ನಂತರ ಗಾಂಧಿ ನಗರ ಸಬ್ ಡಿವಿಷನಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಎಸಿಪಿ ಮಾನಸಿ ವಸಿಷ್ಠ ಮತ್ತು ಶಹ್ದಾರ ಪೊಲೀಸ್ ಠಾಣೆಯ ಹೌಸ್ ಆಫಿಸರ್ ಇನ್ಸ್‌ಪೆಕ್ಟರ್ ಅರುಣ್ ಕುಮಾರ್‌ರ ವರ್ಗಾವಣೆ ನಡೆದಿತ್ತು. ಇದನ್ನು ವಿರೋಧಿಸಿ ಪೊಲೀಸರು ಪೊಲೀಸ್ ಕೇಂದ್ರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು.