3 ವರ್ಷದ ಮಗುವಿನ ಅತ್ಯಾಚಾರ: ತಲೆ ಕತ್ತರಿಸಿ ಕೊಲೆ; ಮೂವರ ಬಂಧನ

0
1675

ಜೆಮ್ಶಡ್ ಪುರ, ಆ. 1: ಝಾರ್ಕಂಡಿನ ಜೆಮ್ಶಡ್ ಪುರದಲ್ಲಿ ಮೂರು ವರ್ಷದ ಹೆಣ್ಣುಮಗುವನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿ ತಲೆಕಡಿದು ಕೊಲೆ ಮಾಡಲಾಗಿದೆ. ತೆಲ್ಕೊ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರೆ ತಲೆಕಡಿಯಲ್ಪಟ್ಟಿದ್ದ ಹೆಣ್ಣುಮಗುವಿನ ಮೃತದೇಹ ಪತ್ತೆಯಾಗಿತ್ತು. ಘಟನೆಯಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜಮ್ಶೆಡ್ ಪುರ ರೈಲ್ವೆ ಫ್ಲಾಟ್‍ಫಾರ್ಮ್‍ನಲ್ಲಿ ಹೆತ್ತವರ ಜೊತೆಯಲ್ಲಿ ಮಲಗಿದ್ದ ಹೆಣ್ಣುಮಗವನ್ನು ಇಬ್ಬರು ಕದ್ದುಕೊಂಡು ಹೋಗಿದ್ದರು. ಜುಲೈ 26ರಂದು ರಾತ್ರೆ ಮಗುವು ಕಾಣೆಯಾಗಿತ್ತು. ನಂತರ ಪೊಲೀಸರು ತನಿಖೆ ನಡೆಸಿದರೂ ಮಗು ಪತ್ತೆಯಾಗಿರಲಿಲ್ಲ. ಹುಡುಕಾಟ ಮುಂದುವರಿಸಿದಾಗ ಮಂಗಳವಾರ ರಾತ್ರೆ ತಲೆ ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಘಟನೆಯಲ್ಲಿ ಇನ್ನಷ್ಟು ಮಂದಿ ಶಾಮೀಲಾಗಿರಬೇಕೆಂದು ಪೊಲೀಸರು ಶಂಕಿಸಿದ್ದು ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸ್ ಸುಪರಿಡೆಂಟ್ ಇಹ್ತಿಶಾಂ ವಗ್ವಾರಿಬ್ ತಿಳಿಸಿದರು.