ಕಲ್ಲಿನಿಂದ ಎಣ್ಣೆ ತೆಗೆಯುವ ಇಚ್ಛಾಶಕ್ತಿ ಮತ್ತು ಆತ್ಮವಿಶ್ವಾಸದ ಪ್ರತೀಕ ಅಮಿತ್ ಶಾ- ಚೌಹಾನ್

0
609

ಕೊಲ್ಲಂ, ಆ. 9: ಮುಂದಿನ ಚುನಾವಣೆಯಲ್ಲಿ ಕೇರಳದಲ್ಲಿ ಅಧಿಕಾರಕ್ಕೆ ಬರುವುದು ಬಿಜೆಪಿಯ ಗುರಿಯಾಗಿದೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಹೇಳಿದರು. ಬಿಜೆಪಿ ಸದಸ್ಯತ್ವ ಪ್ರಚಾರ ಸಮಿತಿಯ ರಾಷ್ಟ್ರೀಯ ಸಂಚಾಲಕ ಆಗಿರುವ ಅವರು ಇದು ಅಸಾಧ್ಯದ ವಿಷಯವೇ ಅಲ್ಲ. ತ್ರಿಪುರ, ಅಸ್ಸಾಂನಲ್ಲಿ ಅಧಿಕಾರಕ್ಕೆ ಬರಲಿದ್ದೇವೆ ಎಂದು ಅಮಿತ್ ಶಾ ಹೇಳಿದಾಗ ಎಲ್ಲರೂ ವ್ಯಂಗ್ಯವಾಡಿದ್ದರು ಎಂದರು. ಆದರೆ ಅಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿದೆ. ಅವರು ಬಿಜೆಪಿಯ ಸಕ್ರಿಯ ಸದಸ್ಯರ ಸಮ್ಮೇಳನವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.

ಕಲ್ಲಿನಿಂದ ಎಣ್ಣೆ ತೆಗೆಯುವ ಇಚ್ಛಾಶಕ್ತಿ ಮತ್ತು ಆತ್ಮವಿಶ್ವಾಸದ ಪ್ರತೀಕ ಅಮಿತ್ ಶಾ ಆಗಿದ್ದಾರೆ. ಕೇರಳದಲ್ಲಿ ಅಧಿಕಾರ ಹಿಡಿದರೆ ಮಾತ್ರ ಬಿಜೆಪಿಯ ಗೆಲುವು ಪರಿಪೂರ್ಣಗೊಳ್ಳಲಿದೆ ಎಂದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಹೇಳಿದ್ದಾರೆ. ಎಲ್‍ಡಿಎಫ್, ಯುಡಿಎಫ್ ಕೇರಳದಲ್ಲಿ ಒಂದರ ನಂತರ ಒಂದರಂತೆ ಅಧಿಕಾರಕ್ಕೆ ಬರುತ್ತಿದೆ. ಕೇಂದ್ರದ ಯೋಜನೆಗಳನ್ನು ಜಾರಿಗೆ ತರುವುದಿಲ್ಲ ಅಥವಾ ಬೇರೆ ಕಾರ್ಯಗಳಿಗೆ ಇಲ್ಲಿ ಖರ್ಚು ಮಾಡಲಾಗುತ್ತಿದೆ ಎಂದು ಶಿವರಾಜ್‍ಕುಮಾರ್ ಆರೋಪಿಸಿದರು.

ಕಾಂಗ್ರೆಸ್ ಈಗ ಇದೆಯೇ ಎಂದು ತಿಳಿಯಲು ಆಗದ ಅವಸ್ಥೆಯಿದೆ. ಮುಳುಗುವ ಹಡಗಿನಿಂದ ಪಾರಾದ ಕ್ಯಾಪ್ಟನ್ ಆಗಿದ್ದಾರೆ ರಾಹುಲ್ ಗಾಂಧಿ. ಕಾಶ್ಮೀರ ಚರ್ಚೆಯಲ್ಲಿ ಕಾಂಗ್ರೆಸ್ ಸಭಾನಾಯಕ ಕಾಶ್ಮೀರ ವಿಶ್ವಸಂಸ್ಥೆಯ ವಿಷಯ ಎಂದಿದ್ದಾರೆ. ಹೀಗೆ ಹೇಳುವವರ ಸ್ಥಾನ ದೇಶದ್ರೋಹಿಗಳ ಜೊತೆಗಿದೆ ಎಂದು ಹೇಳಿದರು.