ನಿಬಂಧನೆಗಳಿಲ್ಲ, ನಾನು ಯಾವಾಗ ಬರಬೇಕು ಹೇಳಿ- ಜಮ್ಮುಕಾಶ್ಮೀರ ರಾಜ್ಯಪಾಲರಿಗೆ ರಾಹುಲ್ ಗಾಂಧಿ ಟ್ವೀಟ್

0
999

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.14: ಜಮ್ಮು-ಕಾಶ್ಮೀರ ಸಂದರ್ಶಿಸಲು ಕಾಂಗ್ರೆಸ್ ನಾಯಕರು ನಿಬಂಧನೆಗಳನ್ನು ಇಟ್ಟಿದ್ದಾರೆ ಎಂದು ಅಲ್ಲಿನ ರಾಜ್ಯಪಾಲರ ಆರೋಪಕ್ಕೆ ಉತ್ತರಿಸಿದ ರಾಹುಲ್ ಗಾಂಧಿ “ನಿಬಂಧನೆ ರಹಿತವಾಗಿ ಜಮ್ಮು-ಕಾಶ್ಮೀರದ ಜನರ ಭೇಟಿಗೆ ತಾನು ಬರುವೆ” ಎಂದು ಟ್ವೀಟ್ ಮಾಡಿದ್ದಾರೆ.

ಕಾಶ್ಮೀರಿಗಳನ್ನು ಅಲ್ಲಿನ ನಾಯಕರನ್ನು ಮತ್ತು ಸೈನಿಕರನ್ನು ಭೇಟಿಯಾಗಲು ಸಂಚರಿಸುವ ಸ್ವಾತಂತ್ರ್ಯ ಕೊಟ್ಟರೆ ಸಾಕು ಎಂದು ರಾಹುಲ್ ಟ್ವೀಟ್ ಮಾಡಿದ್ದಕ್ಕೆ ಒಂದಷ್ಟು ನಿಬಂಧನೆಗಳೊಂದಿಗೆ ಕಾಂಗ್ರೆಸ್ ನಾಯಕರನ್ನು ಆಮಂತ್ರಿಸಲು ಸಾಧ್ಯವಿಲ್ಲ ಎಂದು ರಾಜ್ಯಪಾಲ ಮಲಿಕ್ ಹೇಳಿದ್ದರು.

ಇದಕ್ಕೆ ಉತ್ತರವಾಗಿ ನಮ್ಮಲ್ಲಿ ನಿಬಂಧನೆಗಳಿಲ್ಲ, ಯಾವಾಗ ಬರಬೇಕೆಂದು ಹೇಳಿ ಎಂದು ರಾಜ್ಯಪಾಲರನ್ನು ಯಜಮಾನ ಎಂಬ ಅರ್ಥಬರುವ ಹಿಂದಿ ಪದ ಬಳಸಿ ಪುನಃ ಟ್ವೀಟ್ ಮಾಡಿದ್ದಾರೆ. “ಮಾಲಿಕ್ ಜಿ, ನನ್ನ ಟೀಟ್‍ಗೆ ನಿಮ್ಮ ಪ್ರತಿಕ್ರಿಯೆ ನೋಡಿದೆ. ಕಾಶ್ಮೀರದ ಜನರನ್ನು ಭೇಟಿಯಾಗು ನಿಮ್ಮ ಆಹ್ವಾನವನ್ನು ಸ್ವೀಕರಿಸಿದ್ದೇನೆ. ಯಾವಾಗ ಬರಬೇಕು ಹೇಳಿ” ಎಂದು ರಾಹುಲ್ ಟ್ವೀಟಿಸಿದ್ದಾರೆ.