‘ನನಗೆ ಹೆರಿಗೆ ನೋವು ಬರುತ್ತಿದೆ. ಈಗಲೇ ಹೆತ್ತು ಬಿಡುವ ಸ್ಥಿತಿ ಇದೆ. ಒಂದು ಹೆಜ್ಜೆ ಮುಂದಿಡಲು ನನ್ನಿಂದ ಆಗುವುದಿಲ್ಲ ಎಂದು ಹೇಳಿಯೂ ಅವರು ನನ್ನನ್ನು ಆ ಆಟೋದಲ್ಲಿ ಹೋಗಲು ಬಿಡಲಿಲ್ಲ…’ ಎಂದು ಇನ್ಶಾ ಅಶ್ರಫ್ ಎಂಬ 26 ವರ್ಷದ ಮಹಿಳೆ ಹೇಳುವ ಮಾತುಗಳು ಕಾಶ್ಮೀರದ ಇಂದಿನ ಚಿತ್ರಣವನ್ನು ತೋರಿಸಿಕೊಡುತ್ತಿದೆ. ಬೆಳಗ್ಗೆ ಐದೂವರೆ ಗಂಟೆ ಆಗಿರಬೇಕು. ಹೆರಿಗೆಯ ಎಲ್ಲ ಲಕ್ಷಣಗಳು ಇನ್ಶಾರಿಗೆ ಅನುಭವವಾಗತೊಡಗಿತು. ಇನ್ನು ಹೆಚ್ಚು ಸಮಯವಿಲ್ಲ. ಹೆರಿಗೆಯಾಗಿಯೇ ಬಿಡುವುದು…
ಶ್ರೀನಗರದಿಂದ ಹೊರಗಿನ ಬೇಮಿನಯದಲ್ಲಿ ಇನ್ಶಾರ ಮನೆಯಿದೆ. ಏಳು ಕಿಲೋ ಮೀಟರ್ ದೂರದಲ್ಲಿ ಲಾಲ್ ಡೇಡ್ ಆಸ್ಪತ್ರೆಯಿತ್ತು. ಇನ್ಶಾ ತನ್ನ ತಾಯಿ ಮುಬೀನಾ, ತಂಗಿ ನಿಶಾರೊಂದಿಗೆ ನೆರೆಮನೆಯ ಆಟೊ ರಿಕ್ಷಾವನ್ನು ಕರೆದರು. ಬೀದಿಯಲ್ಲಿ ಸೈನಿಕರು ಗಸ್ತು ತಿರುಗುತ್ತಿದ್ದರು. ಇತರೆ ಯಾವುದೇ ವಾಹನಗಳು ಹೋಗುತ್ತಿಲ್ಲ. ಆದರೂ ಚಾಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಒಪ್ಪಿದ್ದನು.
ಕೆಲವು ಮೀಟರ್ ಮುಂದೆ ಹೋದಾಗ ಸೈನಿಕರ ವಾಹನ ಆಟೋವನ್ನು ತಡೆಯಿತು. ಯಾವ ವಾಹನಕ್ಕೂ ಹೋಗಗೊಡಬಾರದೆಂದು ಮೇಲಿನಿಂದ ಆಜ್ಞೆ ಇದೆ ಎಂದು ಅವರು ಹೇಳಿದರು. ” ನಾನೋರ್ವ ಗರ್ಭಿಣಿಮಹಿಳೆ . ಯಾವ ಕ್ಷಣವೂ ಹೆರಿಗೆಯಾಗಬಹುದು. ದಯವಿಟ್ಟು ಆಸ್ಪತ್ರೆಗೆ ಹೋಗಲು ಅವಕಾಶ ಕೊಡಿ. ..” ಇನ್ಶಾ ಅವರೊಡನೆ ಬಗೆಬಗೆಯಾಗಿ ವಿನಂತಿಸಿದರು. ಆದರೆ ಸೈನಿಕರಿಗೆ ಅವರ ಮೇಲಿನ ನಿಬಂಧನೆಗಳು ಕಟ್ಟಿಹಾಕಿದ್ದವು. ಅವರು ಯಾವ ದಯೆಯನ್ನು ಅವರು ತೋರಿಸಲಿಲ್ಲ. ಬೇಕಿದ್ದರೆ ಆಸ್ಪತ್ರೆಗೆ ನಡೆದು ಹೋಗಬಹುದು….”ಎಂದರು.
ಒಂದು ಹೆಜ್ಜೆ ಮುಂದಿಡಲು ಸಾಧ್ಯವಾಗದ ಸ್ಥಿತಿಯಲ್ಲಿಯೂ ಮಿನ್ಶಾರಿಗೆ ನಡೆದು ಹೋಗುವುದೊಂದೇ ಉಳಿದಿದ್ದ ಉಪಾಯವಾಗಿತ್ತು. ಆಸ್ಪತ್ರೆಗೆ ನಡೆದು ಹೋಗಲು ಆಕೆ ತೀರ್ಮಾನಿಸಿದರು. ಪ್ರತಿ 500 ಮೀಟರ್ ಗಳಲ್ಲಿ ಸ್ಥಾಪಿಸಿದ್ದ ಚೆಕ್ಕ ಪೋಸ್ಟ್ಗಳಲ್ಲಿ ಅವರು ವಾಹನದಲ್ಲಿ ಹೋಗಲು ವಿನಂತಿಸುತ್ತಲೇ ಇದ್ದರು. ಆದರೆ ಯಾರೂ ಅವರ ಬಗ್ಗೆ ಕರುಣೆ ತೋರಿಸಲಿಲ್ಲ.
ಕೊನೆಗೆ ಆಸ್ಪತ್ರೆಗೆ ಅರ್ಧ ಕಿಲೊಮೀಟರ್ ದೂರದಲ್ಲಿ ಇನ್ನು ಒಂದು ಹೆಜ್ಜೆ ಮುಂದಿಡಲು ಸಾಧ್ಯವಿಲ್ಲವೆಂದಾಗ ಮಿನ್ಶಾ ಕುಸಿದು ನಿಂತರು. ಹೆರಿಗೆಯಾಗುವುದು ಖಚಿತವಾಯಿತು. ಹತ್ತಿರದಲ್ಲಿಯೇ ಒಂದು ಖಾಸಗಿ ಆಸ್ಪತ್ರೆ ಇದ್ದು ಮಿನ್ಶಾರ ಭಾಗ್ಯವೆನ್ನಬಹುದು. ಇನ್ಶಾ ಅಲ್ಲಿ ದಾಖಲಾದರು. ಕೂಡಲೇ ಹೆರಿಗೆಯೂ ಆಯಿತು. ಒಂದು ಹೆಣ್ಣುಮಗು. ಆದರೆ. ಆ ಮಗುವಿಗೆ ಹೊದೆಯಲು ಒಂದು ತುಂಡು ಬಟ್ಟೆಯೂ ಇಲ್ಲದ ಸ್ಥಿತಿಯಾಯಿತು. ಆಸ್ಪತ್ರೆಯಲ್ಲಿದ್ದ ಎಲ್ಲ ವಸ್ತುಗಳು ಮುಗಿದುಹೋಗಿದ್ದವು. ಹೊರಗಿನಿಂದ ತರುವಂತೆಯೂ ಇಲ್ಲ. ಸೈನಿಕರು ಹೋಗಲು ಬಿಡುತ್ತಿಲ್ಲ. ಒಂದು ತುಂಡು ಬಟ್ಟೆಯೂ ಇಲ್ಲದೆ ಅವರು ಮೊಮ್ಮಗು ಎಳೆಗೂಸನ್ನು ನನ್ನ ಕೈಗೆಕೊಟ್ಟರು. ನನ್ನ ಸ್ಕಾರ್ಪ್ನಿಂದ ಅವಳನ್ನು ಎದೆಗಪ್ಪಿಕೊಂಡೆ… ಎಂದು ಇನ್ಶಾರ ತಾಯಿ ಮುಬೀನ ಹೇಳಿದರು.
ಮಗು ಜನಿಸಿದ ಸುದ್ದಿ ಇನ್ಶಾರ ಪತಿ ಇರ್ಫಾನ್ ಅಹ್ಮದ್ ಎನ್ನುವ ಆಟೊ ಚಾಲಕನಿಗೆ ತಿಳಿಸಲು ಆಗಲಿಲ್ಲ. ಕೆಲವು ದಿವಸ ಮೊದಲು ಎಂದಿನಂತೆ ಆಟೊ ತೆಗೆದುಕೊಂಡು ಹೋಗಿರುವ ಇರ್ಫಾನ್ ಎಲ್ಲಿಯೋ ಸಿಕ್ಕಿಹಾಕಿಕೊಂಡಿರಬಹುದು. ಅವರಿಗೆ ಮಗು ಜನಿಸಿದ ಸುದ್ದಿ ತಿಳಿಸಲು ಫೋನ್ ಇಂಟರ್ನೆಟ್ಗಳಿಲ್ಲ. ಪರಸ್ಪರ ಮಾತಾಡಿಕೊಳ್ಳುವುದಕ್ಕೆ ಸಂಪರ್ಕಕ್ಕೆ ಯಾವ ದಾರಿಯೂ ಇಲ್ಲ….
ಇನ್ಶಾರಂತಹ ಕಾಶ್ಮೀರದ ಅನೇಕಯ ತಾಯಂದಿರ ದುಃಸ್ಥಿತಿಯನ್ನು ಕಾಶ್ಮೀರದ ಅಂತಾರಾಷ್ಟ್ರೀಯ ಪತ್ರಕರ್ತರ ಝುಬೈರ್ ಸೂಫಿಯವರನ್ನು ಉದ್ಧರಿಸಿ ದಿ ವಯರ್.ಇನ್ ವರದಿ ಮಾಡಿದೆ.
ಗರ್ಭಿಣಿಯಾದ ಮಹಿಳೆಯ ಅಸಹಾಯಕಳಾಗಿ ಬೀದಿಯಲ್ಲಿ ನಿಂತದ್ದು ಆಸ್ಪತ್ರೆಯ ವರಾಂಡದಲ್ಲಿ ಎತ್ತ ಹೋಗಬೇಕೆಂದು ತಿಳಿಯದೆ ಗರ್ಭಿಣಿಯರು ಮಲಗಿದ್ದು ಮುಂತಾದ ಚಿತ್ರಗಳನ್ನು ಝುಬೈರ್ ಸೋಫಿ ಹೊರ ಜಗತ್ತಿಗೆ ನೀಡಿದ್ದಾರೆ. ಲಾಲ್ ಡೇಡ್ ಆಸ್ಪತ್ರೆಯ ಪರಿಸ್ಥಿತಿ ತೀರ ಶೋಚನೀಯವಾಗಿತ್ತು. ಡಿಸ್ಚಾರ್ಜ್ ಮಾಡಿಯೂ ಗರ್ಭಿಣಿಯರು ಹೊರಟು ಹೋಗುವುದಿಲ್ಲ. ಎತ್ತ ಹೋಗದ ಸ್ಥಿತಿಯಲ್ಲಿ ಅವರು. ತಿನ್ನಲು ಕುಡಿಯಲು ಏನೂ ಇಲ್ಲದೆ ಆಸ್ಪತ್ರೆಯ ವರಾಂಡದಲ್ಲಿ ದಿಕ್ಕೆಟ್ಟು ನಿಂತ ಒಂದಷ್ಟು ಜನರು. ” ನನ್ ಕೈಯಲ್ಲಿ ಒಂದು ಪೈಸೆ ಇಲ್ಲ. ಆಗಸ್ಟ್ ಎಂಟರ ನಂತರ ಇಂಟರ್ನೆಟ್ ಫೋನ್ ಇಲ್ಲ. ಎಟಿಎಂಗಳು ಕೆಲಸ ಮಾಡುವುದಿಲ್ಲ. ಯಾರಲ್ಲಿ ಕೇಳಲು ಆಗದ ಅವಸ್ಥೆಯಿದೆ. ಆಹಾರ ಕೂಡ ಸೇವಿಸಿ ದಿವಸಗಳಾಗಿವೆ…” ಆಸ್ಪತ್ರೆಯ ಸಿಬ್ಬಂದಿ ರಾಶಿದ್ ಹೇಳುತ್ತಾರೆ.
ಆರ್ಟಿಕಲ್ 370 ರದ್ದು ಮಾಡುವುದಕ್ಕಿಂತ ಕೆಲವು ದಿವಸಗಳಿಂದ ಮೊದಲು ಇದೇ ಸ್ಥಿತಿಯಿತ್ತು ಎಂದು ಅವರು ಹೇಳಿದರು. ಸಾಮಾನ್ಯ ಮನುಷ್ಯರ ಸಂಚರಿಸುವ ಸ್ವಾತಂತ್ರ್ಯಕ್ಕೆ ನಿಷೇಧ ಹೇರಿದ ಕಾಶ್ಮೀರದ ಚಿತ್ರವನ್ನು ದ ವಯರ್.ಇನ್ ಹಂಚಿಕೊಂಡಿದೆ.












