ಮಂಗಳೂರು: ನೀವು ಗ್ರಾಮೀಣ ಭಾಗದ ನಿವಾಸಿಯಾಗಿದ್ದು, ಕರೆಂಟ್ ಬಿಲ್ ಕಟ್ಟಲು ಲೈನ್ ನಿಂತು ನಿಂತು ಸಾಕಾಗಿದ್ದರೆ ಇನ್ನು ಚಿಂತಿಸಬೇಕಿಲ್ಲ. ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ(ಮೆಸ್ಕಾಂ) ಈಗ ಗ್ರಾಮಾಂತರ ಭಾಗದ ಗ್ರಾಹಕರಿಗೆ ಆನ್ ಲೈನ್ ಮೂಲಕ ಬಿಲ್ ಕಟ್ಟುವಂತಾಗಲು ವ್ಯವಸ್ಥೆ ಮಾಡಿದೆ. ಗ್ರಾಹಕರು ತಮ್ಮ ವಿದ್ಯುತ್ ಬಿಲ್ಲನ್ನು ONLINE ಮೂಲಕ ಪಾವತಿಸಬಹುದು. ಇನ್ನು ಮುಂದೆ ವಿದ್ಯುತ್ ಗ್ರಾಹಕರು ದೈನಂದಿನ ಕೆಲಸ ಬಿಟ್ಟು ವಿದ್ಯುತ್ ಬಿಲ್ ಪಾವತಿ ಮಾಡಲು ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾಗಿಲ್ಲ.
www.mescomtrm.com ಎಂಬ website ಗೆ ಹೋಗಿ ನಿಮ್ಮ ವಿದ್ಯುತ್ ಬಿಲ್ಲನ್ನು ಪಾವತಿಸಬಹುದಾಗಿದೆ.
ಪಾವತಿ ಮಾಡುವ ವಿಧಾನ:
1. MESCOM ವೆಬ್ ಸೈಟ್ www.mescomtrm.com ಕ್ಲಿಕ್ ಮಾಡಿ. ಅಲ್ಲಿ Quick Pay ಕ್ಲಿಕ್ ಮಾಡಿ.
2. ಮೊಬೈಲ್ ನಂಬರ್ & RR NUMBER ಎಂದು ಬರುತ್ತೆ.
ಅಲ್ಲಿ RR ನಂಬರ್ ಕ್ಲಿಕ್ ಮಾಡಿ.
3. ನಿಮ್ಮ ಬಿಲ್ ನಲ್ಲಿರುವ ಏರಿಯಾ ಕೋಡ್ + RR NUMBER ಹಾಕಿ.
ಉದಾಹರಣೆಗೆ ಉಳ್ಳಾಲ ಪ್ರದೇಶದ ಮೆಸ್ಕಾಂನ ವ್ಯಾಪ್ತಿಗೆ ಬರುವವರಾದರೆ ಏರಿಯಾ ಕೋಡ್ 2110103+ ನಿಮ್ಮ RR ನಂಬರ್ ಒಟ್ಟಿಗೆ ಹಾಕಬೇಕು. ನಿಮ್ಮ RR ನಂಬರ್ ವಿದ್ಯುತ್ ಬಿಲ್ ನ ಕ್ರಮಾಂಕ 3 ರಲ್ಲಿ ಇರುತ್ತದೆ. ಅದನ್ನು ಹಾಕಿದ ಬಳಿಕ ವೆಬ್ ನಲ್ಲಿ ತೋರಿಸುವ Captcha ಹಾಕಿ, Submit ಮಾಡಿ.
4. ನಿಮ್ಮ ಬಿಲ್ ತೋರಿಸುತ್ತದೆ.
ನಂತರ View Bill option Click ಕೊಡಬೇಕು. ಬಳಿಕ ಬಿಲ್ ತೋರಿಸಿದ ನಂತರ ನಮ್ಮದೇ ಬಿಲ್ ಹೌದಾ ಎಂದು ನೋಡಿ, Pay Bill Click ಮಾಡಬೇಕು.
5. ನೀವು ಕಟ್ಟುವ ಹಣವನ್ನು Enter ಮಾಡಿದ ನಂತರ, ನಿಮ್ಮ ಇ-ಮೇಲ್ ID ಹಾಕಬೇಕು.
ನಂತರ ನೀವು ನಿಮ್ಮ ಮೊಬೈಲ್ ನಲ್ಲಿ ಇರುವ ಹಣಪಾವತಿ ಮಾಡುವ GooglePay, BHIM, Net Banking, Phonepe ನಂತರ ಯಾವುದಾದರೂ APP ಇದ್ದರೆ, ಅಥವಾ ಅಲ್ಲಿ ತೋರಿಸುವ option ನಲ್ಲಿ ಯಾವುದಾದರೊಂದು ಇದ್ದಲ್ಲಿ ಕ್ಲಿಕ್ ಮಾಡಿ. ಹಣ ಪಾವತಿಸಿ. Transaction Successfully ಆದ ನಂತರ ನೀವು ಕಟ್ಟಿದ ಬಿಲ್ ನ ರಶೀದಿ ನಿಮಗೆ ಕೂಡಲೇ ದೊರೆಯುತ್ತದೆ. ಈ ಸೌಲಭ್ಯವನ್ನು ಬಳಸಿಕೊಂಡು, ನಿಮಗೆ ನಿಮ್ಮ ಮನೆಯಲ್ಲೇ ಕುಳಿತು ವಿದ್ಯುತ್ ಬಿಲ್ ಪಾವತಿ ಮಾಡಬಹುದು. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು.
ಸಮಾಜ ಸೇವಾ ಘಟಕ,
ಜಮಾಅತೆ ಇಸ್ಲಾಮೀ ಹಿಂದ್,
ಹಿದಾಯತ್ ಸೆಂಟರ್,
ಬೀಬಿ ಅಲಾಬಿ ರಸ್ತೆ,
ಬಂದರ್, ಮಂಗಳೂರು- 575001
Mob: 8722760795












