ಸನ್ಮಾರ್ಗ ವಾರ್ತೆ
ವಾಷಿಂಗ್ಟನ್,ಆ. 16: ಜಮ್ಮು-ಕಾಶ್ಮೀರ ವಿಷಯದಲ್ಲಿ ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಜ್ಜಾಗಿದ್ದು ಚೀನಾದ ನಿರಂತರ ಮನವಿಗೆ ಓಗೊಟ್ಟು ಭದ್ರತಾ ಸಮಿತಿ ಈ ವಿಷಯದಲ್ಲಿ ಚರ್ಚಿಸಲು ತೀರ್ಮಾನಿಸಿದೆ. ಶುಕ್ರವಾರ ಬೆಳಗ್ಗೆ ಹತ್ತು ಗಂಟೆಗೆ ಭಾರತೀಯ ಸಮಯ ಏಳೂರವರೆಗೆ ಗಂಟೆಗೆ ಮುಚ್ಚಲ್ಪಟ್ಟ ಕೋಣೆಯಲ್ಲಿ ಚರ್ಚೆ ನಡೆಯಲಿದೆ ಎಂದು ಸುದ್ದಿ ಸಂಸ್ಥೆಗಳನ್ನು ವರದಿ ಮಾಡಿವೆ.
ಪಾಕಿಸ್ತಾನ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ. ಚರ್ಚೆಯ ಪ್ರಸಾರವನ್ನೋ, ವರದಿಯನ್ನೋ ನೀಡಲಾಗುವುದಿಲ್ಲ. ಚರ್ಚೆಯ ಪ್ರಸ್ತಾವಗಳು ಮತ್ತು ಪರಾಮರ್ಶೆಗಳನ್ನು ದಾಖಲೆಯಾಗಿ ಇಡಲಾಗುವುದಿಲ್ಲ. ವಿವರವನ್ನು ಸಾರ್ವಜನಿಕ ಸಮೂಹಕ್ಕೆ ತಿಳಿಸಲಾಗುವುದಿಲ್ಲ. ಗುರುವಾರ ಕಾಶ್ಮೀರ ವಿಷಯ ಚರ್ಚೆ ಮಾಡಬೇಕೆಂದು ಚೀನ ಆಗ್ರಹಿಸಿತ್ತು.ಆದರೆ ಸಮಿತಿಯ ಸಭೆಯನ್ನು ಮೊದಲೇ ನಿಗದಿಗೊಳಿಸಿದ್ದುದರಿಂದ ಶುಕ್ರವಾರ ಸಭೆ ನಡೆಸಲು ನಿರ್ಧರಿಸಲಾಯಿತು. ಸೆಕ್ಯುರಿಟಿ ಕೌನ್ಸಿಲ್ ಅಧ್ಯಕ್ಷ ಜೊನ್ನ ರೊನಕ್ ಚರ್ಚೆಯಲ್ಲಿ ಸೇರಿಸಬೇಕಾದ ವಿಷಯಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ರಾಜತಾಂತ್ರಿಕರು ತಿಳಿಸಿದ್ದಾರೆ.
ಕಾಶ್ಮೀರದ ವಿಷಯದಲ್ಲಿ ಚರ್ಚಿಸಬೇಕೆಂದು ಈ ಹಿಂದೆ ಪಾಕಿಸ್ತಾನದ ವಿದೇಶ ಸಚಿವ ಶಾ ಮುಹಮ್ಮದ್ ಖುರೇಶಿ ಬರೆದ ಪತ್ರವನ್ನು ಪಾಕಿಸ್ತಾನದ ರಾಯಭಾರಿ ಮಲೀಹಾ ಲೋಧಿ ವಿಶ್ವಸಂಸ್ಥೆ ಭದ್ರತಾ ಸಮಿತಿ ಅಧ್ಯಕ್ಷರಿಗೆ ಹಸ್ತಾಂತರಿಸಿದ್ದರು. ಈ ಪತ್ರದಲ್ಲಿ ಚರ್ಚೆ ನಡೆಯಬೇಕೆಂದು ಚೀನ ಕೂಡ ಆಗ್ರಹಿಸಿತ್ತು. ಚೀನ ಹೊರತು ಪಡಿಸಿ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಇತರ ನಾಲ್ಕು ಖಾಯಂ ಸದಸ್ಯರು ಭಾರತದ ತೀರ್ಮಾನವನ್ನು ಬೆಂಬಲಿಸಿದ್ದರು. ಕಾಶ್ಮೀರ ಭಾರತದ ಆಂತರಿಕ ವಿಷಯವೆಂದು ಅಮೆರಿಕ ಕೂಡ ಹೇಳಿತ್ತು.












