ಏಡ್ಸ್ ಮತ್ತು ಕ್ಯಾನ್ಸರ್‌ಗೆ ಕಂಟಕವಾಗಿರುವ ಸುನ್ನತಿ

0
24

ಸನ್ಮಾರ್ಗ ವಾರ್ತೆ

✍️ ಡಾ| ಜಾವೇದ್ ಜಮೀಲ್

ತಮ್ಮ ಇತ್ತೀಚಿನ ಅಮೇರಿಕಾ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್‌ಗೆ ಸಂಬಧಿಸಿದಂತೆ ಹೆಚ್ಚುತ್ತಿರುವ ಘಟನೆಗಳು ಮತ್ತು ಮರಣದ ಬಗ್ಗೆ ಮಾತನಾಡಿದ್ದಾರೆ. ಡೆಲವೇರ್‌ನಲ್ಲಿ ನಡೆದ ಕ್ಯಾನ್ಸರ್ ಮೂನ್ಶಾಟ್ ಈವೆಂಟ್‌ನಲ್ಲಿ ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡುವ ದೇಶಗಳಿಗೆ $7.5 ಮಿಲಿಯನ್ ಬೆಂಬಲವನ್ನು ಅವರು ಘೋಷಿಸಿದರು. ಮೋದಿಯವರು “ಭಾರತದ ಕಡಿಮೆ ವೆಚ್ಚದ ಗರ್ಭಕಂಠದ ಕ್ಯಾನ್ಸರ್ ಸ್ಕ್ರೀನಿಂಗ್ ಕಾರ್ಯಕ್ರಮ” ಮತ್ತು ಂI- ಚಾಲಿತ ಚಿಕಿತ್ಸಾ ವಿಧಾನ(ಪ್ರೋಟೋಕಾಲ್)ಗಳ ಜೊತೆಗೆ ಗರ್ಭಕಂಠದ ಕ್ಯಾನ್ಸರ್ ಲಸಿಕೆಯ ಅಭಿವೃದ್ಧಿಯನ್ನು ಬೊಟ್ಟು ಮಾಡಿದರು. ಅಮೆರಿಕಾ ಅಧ್ಯಕ್ಷ ಬೈಡೆನ್ ಈ ಕಾರ್ಯಕ್ರಮವನ್ನು ಆಯೋಜಿಸಿದರು ಮತ್ತು ಪ್ರತಿ ವರ್ಷ ಗರ್ಭಕಂಠದ ಕ್ಯಾನ್ಸರ್‌ನಿಂದ ಜಗತ್ತಿನಲ್ಲಿ 300 ಸಾವಿರಕ್ಕೂ ಹೆಚ್ಚು ಜೀವಗಳನ್ನು ಕಳೆದುಕೊಳ್ಳುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಈಗ ಪ್ರಪಂಚದಾದ್ಯಂತ ವ್ಯಾಪಕವಾಗಿ ತಿಳಿದಿರುವ ಸಂಗತಿಗಳ ಪ್ರಕಾರ, ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ಪುರುಷರ ‘ಸುನ್ನತಿ’ಯು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದು ಗಮನಾರ್ಹವಾದುದು.
2023 ರಲ್ಲಿ, ಗರ್ಭಕಂಠದ ಕ್ಯಾನ್ಸರ್ ಜಾಗತಿಕವಾಗಿ ಎಂಟನೇ ಅತ್ಯಂತ ಸಾಮಾನ್ಯವಾಗಿ ಸಂಭವಿಸುವ ಕ್ಯಾನ್ಸರ್ ಮತ್ತು ಕ್ಯಾನ್ಸರ್ ಸಾವಿನ ಒಂಬತ್ತನೇ ಪ್ರಮುಖ ಕಾರಣವಾಗಿದೆ. ಇದು 6,61,044 ಹೊಸ ಪ್ರಕರಣಗಳು ಮತ್ತು 3,48,186 ಸಾವುಗಳಿಗೆ ಕಾರಣವಾಗಿದೆ. ಆಫ್ರಿಕಾ ಖಂಡ ಸೇರಿದಂತೆ, ಇದು 25 ದೇಶಗಳ ಮಹಿಳೆಯರಲ್ಲಿ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದೆ.

ಗರ್ಭಕಂಠದ ಕ್ಯಾನ್ಸರ್ ಭಾರತದ ಮಹಿಳೆಯರಲ್ಲಿ ಕ್ಯಾನ್ಸರ್ ಸಾವುಗಳಿಗೆ ಎರಡನೇ ಪ್ರಮುಖ ಕಾರಣವಾಗಿದೆ. ಗರ್ಭಕಂಠದ ಕ್ಯಾನ್ಸರ್‌ನಿಂದಾಗುವ ಎಲ್ಲಾ ಜಾಗತಿಕ ಸಾವುಗಳಲ್ಲಿ ಇಪ್ಪತ್ತೆöÊದು ಪ್ರತಿ ಶತ ಭಾರತದಲ್ಲಿ ಸಂಭವಿಸುತ್ತದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಅಂದಾಜು 1,23,907 ಮಹಿಳೆ ಯರು ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಮತ್ತು ಅಂದಾಜು 77,348 ಮಹಿಳೆಯರು ಪ್ರತಿ ವರ್ಷ ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ ನಿಂದ ಸಾಯುತ್ತಾರೆ.

ಆದರೆ, ವಿಶ್ವ ಮಟ್ಟದಲ್ಲಿ ಮತ್ತು ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ ಮುಸ್ಲಿಂ ಮಹಿಳೆಯರಲ್ಲಿ ಅಪರೂಪವಾಗಿದೆ. ಮತ್ತು ಇದಕ್ಕೆ ಪ್ರಮುಖ ಅಂಶವೆಂದರೆ ‘ಸುನ್ನತಿ’.

ಟೈಮ್ಸ್ ಆಫ್ ಇಂಡಿಯಾ ವರದಿಯು ಇದನ್ನು ಖಚಿತಪಡಿಸುತ್ತದೆ:
“ಬಿಹಾರದಲ್ಲಿ ವಾಸಿಸುವ ಯುವತಿಗೆ ಹೋಲಿಸಿದರೆ ಭಾರತದ ಈಶಾನ್ಯದಲ್ಲಿ ವಾಸಿಸುವ ಯುವತಿ ತನ್ನ ಜೀವಿತಾವಧಿಯಲ್ಲಿ ಕ್ಯಾನ್ಸರ್‌ಗೆ ಒಳಗಾಗುವ ಮತ್ತು ಸಾಯುವ ಸಾಧ್ಯತೆ ನಾಲ್ಕು ಪಟ್ಟು ಹೆಚ್ಚು. ಪ್ರತಿ ಏಳು ನಿಮಿಷಕ್ಕೆ ಒಬ್ಬ ಭಾರತೀಯ ಮಹಿಳೆಯನ್ನು ಕೊಲ್ಲುವ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾಯುವ ಹಿಂದೂ ಮಹಿಳೆಗಿಂತ ಮುಸ್ಲಿಂ ಮಹಿಳೆಯ ಸಾಧ್ಯತೆ ಕಡಿಮೆಯಿದೆ.

ಸುನ್ನತಿ
ಏಡ್ಸ್ ಸೇರಿದಂತೆ ಲೈಂಗಿಕವಾಗಿ ಹರಡುವ ರೋಗಗಳ ವಿರುದ್ಧ ಬಲವಾದ ರಕ್ಷಣಾತ್ಮಕ ಪರಿಣಾಮವನ್ನು ಸುನ್ನತಿ ಹೊಂದಿದೆ ಎಂಬುದಕ್ಕೆ ಪುರಾವೆಗಳು ಸಂಗ್ರಹವಾಗುತ್ತಿರುವುದರಿಂದ ‘ಸುನ್ನತಿ’ ಅಥವಾ ಮುಂಜಿ ಹೆಚ್ಚು ಜನಪ್ರಿಯವಾಗುತ್ತಿದೆ. ವಿಶ್ವ ಮಟ್ಟದಲ್ಲಿ ಏಡ್ಸ್ ಸಾವಿನ ಪ್ರಮುಖ ಕಾರಣವಾಗಿ ಹೊರಹೊಮ್ಮಿದಾಗ ಸುನ್ನತಿ ಮುಖ್ಯವಾಯಿತು.

ಆಫ್ರಿಕದ ವರದಿಯು ಹೀಗೆ ಹೇಳುತ್ತದೆ:
“ಆಸ್ಪತ್ರೆಯ ವಾರ್ಡ್ಗಳು ತುಂಬಿ ಕೊಳ್ಳುತ್ತಿದ್ದಂತೆಯೇ, ಎಚ್‌ಐವಿಯನ್ನು ತಪ್ಪಿಸುವುದು ತಲೆ ನೋವಾಗಿದೆ. ಸುನ್ನತಿ ಮಾಡಿಸಿಕೊಂಡ ಪುರುಷರು ಏಡ್ಸ್ ಸೋಂಕಿಗೆ ಒಳಗಾಗುವ ಸಾಧ್ಯತೆ 60 ಪ್ರತಿಶತ ಕಡಿಮೆ ಎಂದು ದಕ್ಷಿಣ ಆಫ್ರಿಕಾದ ವರದಿ ಬಂದಂದಿನಿಂದ, ಸುನ್ನತಿಯ ಕುರಿತಾದ ಧೋರಣೆಯಲ್ಲಿ ಬದಲಾವಣೆಯಾಯಿತು. ಆಫ್ರಿಕಾದ ರೇಡಿಯೋ ಕಾರ್ಯಕ್ರಮವನ್ನು ಹೊಂದಿರುವ ವೈದ್ಯರೊಬ್ಬರು ಸುನ್ನತಿ ಮಾಡುವಂತೆ ಕರೆ ನೀಡಿದ್ದಾರೆ, ಇದು ಶಿಶ್ನನ ಮುಂದೊಗಲನ್ನು ತೆಗೆದು ಹಾಕುತ್ತದೆ ಮತ್ತು ಅದರೊಂದಿಗೆ ಎಚ್‌ಐವಿಗೆ ಹೆಚ್ಚು ತುತ್ತಾಗುವ ದುರ್ಬಲ ಜೀವಕೋಶಗಳನ್ನು ತೆಗೆದು ಹಾಕುತ್ತದೆ. ಸಂಸತ್ತಿನಲ್ಲಿ ಆಫ್ರಿಕನ್ ಸಂಸದರೊಬ್ಬರು ಮಾಡಿದ ಭಾಷಣದಲ್ಲಿ, ಈ ಕಾರ್ಯ ವಿಧಾನವನ್ನು ಪ್ರತಿಪಾದಿಸಿ, ಸರ್ಕಾರ ಸಬ್ಸಿಡಿ ನೀಡಬೇಕೆಂದು ಒತ್ತಾಯಿಸಿದರು.

ನಾನು 1997ರಲ್ಲಿ ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಭಾಗವಾಗಿ ಸುನ್ನತಿಯನ್ನು ಸೇರಿಸುವುದನ್ನು ಪ್ರತಿಪಾದಿಸಿದ್ದೇನೆ. ಆಗ ನನ್ನ ಸಲಹೆಯು ನಗೆಪಾಟಲಿಗೀಡಾಯಿತು. ನಂತರ, Wಊಔ ಸಹ ಏಡ್ಸನ್ನು ಎದುರಿಸುವ ತಂತ್ರದಲ್ಲಿ ಸುನ್ನತಿ ಪ್ರಮುಖ ಭಾಗವೆಂದು ಗುರುತಿಸಿತು. “ಲೈಂಗಿಕ ಕ್ರಾಂತಿ”ಯ ಮುನ್ನಡೆಯೊಂದಿಗೆ ಹೊಸ ಸೋಂಕುಗಳು ಮಾನವರನ್ನು ಕಾಡುತ್ತಲೇ ಇರುವುದೆಂದು ನಿರೀಕ್ಷಿಸಬಹುದು; ಮತ್ತು ಜೀವಿತಾವಧಿಯನ್ನು ಹೆಚ್ಚಿಸುವಲ್ಲಿ ಸುನ್ನತಿ ಪ್ರಮುಖ ಪಾತ್ರ ವಹಿಸಬಹುದು. ಈಗ, ಗರ್ಭಕಂಠದ ಕ್ಯಾನ್ಸರ್, ಸಾವಿನ ದೊಡ್ಡ ಕಾರಣವಾಗಿ ಹೊರಹೊಮ್ಮಿದೆ ಮತ್ತು ಇದು ಹ್ಯೂಮನ್ ಪ್ಯಾಪಿಲೋಮಾ ವೈರಸ್ ಎಂದು ಕರೆಯಲ್ಪಡುವ ಮತ್ತೊಂದು ವೈರಸ್‌ನಿಂದ ಉಂಟಾಗುತ್ತದೆ. ಈ ವೈರಸ್ ಪುರುಷರಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಉಂಟು ಮಾಡಿದರೆ, ಈ ವೈರಸ್ ಹೊಂದಿರುವ ಪುರುಷರೊಂದಿಗೆ ಸಂಪರ್ಕಕ್ಕೆ ಬರುವ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಅನ್ನು ಉಂಟು ಮಾಡುತ್ತದೆ.

ಸುನ್ನತಿಯ ಪ್ರಯೋಜನಕಾರಿ ಪರಿಣಾಮಗಳನ್ನು ಕಡೆಗಣಿಸುವ ಪ್ರಯತ್ನಗಳು ಹಿಂದೆ ನಡೆದಿವೆ. ಆದರೆ ಇತ್ತೀಚಿನ ದಶಕಗಳಲ್ಲಿ, ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಪ್ರಪಂಚದಾದ್ಯಂತ ಸುನ್ನತಿ ಹೆಚ್ಚು ಜನಪ್ರಿಯವಾಗುತ್ತಿದೆ. ಜಾನ್ಸ್ ಹಾಪ್ಕಿನ್ಸ್ ಬ್ಲೂಮ್ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನ ವೈದ್ಯ ಮತ್ತು ಪ್ರಾಧ್ಯಾಪಕರಾದ ರೊನಾಲ್ಡ್ ಗ್ರೇ ಅವರು ನವಜಾತ ಶಿಶುಗಳ ಸುನ್ನತಿ ಪರವಾಗಿ ವಾದಿಸುತ್ತಾರೆ.

ಅವರ ಲೇಖನ, “ಹೌದು: ಪ್ರಯೋಜನಗಳು ಹಲವು, ಅಪಾಯಗಳು ಕಡಿಮೆ”ಯ ಕೆಲವು ಆಯ್ದ ಭಾಗಗಳು ಇಲ್ಲಿವೆ:
“ನವಜಾತ ಗಂಡು ಶಿಶುವಿನ ‘ಸುನ್ನತಿ’ಯಲ್ಲಿ ಹಲವು ಪ್ರಯೋಜನಗಳಿವೆ. ಬಾಲ್ಯದಲ್ಲಿ ಉಂಟಾಗುವ ಮೂತ್ರದ ಸೋಂಕುಗಳಿಗೆ ತಡೆ ನೀಡುತ್ತದೆ. ಸುನ್ನತಿಯು ಹರ್ಪಿಸ್ ಸೋಂಕನ್ನು ತಡೆಗಟ್ಟುತ್ತದೆ ಮತ್ತು ಪುರುಷರಲ್ಲಿ ಜನನಾಂಗದ ಹುಣ್ಣುಗಳನ್ನು ಕಡಿಮೆ ಮಾಡುತ್ತದೆ. ಇದು ಪುರುಷರು ಮತ್ತು ಅವರ ಸ್ತ್ರೀ ಸಂಗಾತಿಗಳಲ್ಲಿ ಮಾನವ ಪ್ಯಾಪಿಲೋಮಾ ವೈರಸ್‌ಗಳು ಮಾಡುವ ಸೋಂಕನ್ನು ಕಡಿಮೆ ಮಾಡುತ್ತದೆ. ಪ್ಯಾಪಿಲೋಬೂ ವೈರಸ್‌ನಿಂದಾಗುವ ಕಾಯಿಲೆಯು ಅಮೇರಿಕದಲ್ಲಿ ಸಾಮಾನ್ಯವಾಗಿ ಅತೀ ಹೆಚ್ಚು ಲೈಂಗಿಕವಾಗಿ ಹರಡುವ ಸೋಂಕುಗಳಲ್ಲಿ ಒಂದಾಗಿದೆ. ಇದು ಗರ್ಭಕಂಠ, ಶಿಶ್ನ ಮತ್ತು ಗುದದ್ವಾರದ ಕ್ಯಾನ್ಸರ್ ಮತ್ತು ಜನನಾಂಗದ ಹುಣ್ಣುಗಳಿಗೆ ಕಾರಣವಾಗುತ್ತದೆ. ಸುನ್ನತಿ ಮಾಡಿಸಿಕೊಂಡ ಪುರುಷರ ಸ್ತ್ರೀ ಸಂಗಾತಿಗಳು ಜನನಾಂಗದ ಹುಣ್ಣುಗಳು ಮತ್ತು ಯೋನಿ ಸೋಂಕುಗಳ ಕಡಿಮೆ ಪ್ರಮಾಣವನ್ನು ಹೊಂದಿರುತ್ತಾರೆ. ಸಂಕ್ಷಿಪ್ತವಾಗಿ, ಗಂಡು ಶಿಶುವಿನ ಸುನ್ನತಿಯು ಜೀವನರ‍್ಯಂತ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಅದು ತಕ್ಷಣದ ಅಪಾಯಗಳನ್ನು ತಡೆಗಟ್ಟುತ್ತದೆ.

ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿ ಹೆಚ್ಚು ಮಾರಣಾಂತಿಕವಾಗುತ್ತಿರುವುದರಿಂದ, ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಸುನ್ನತಿಯನ್ನು ಪ್ರೋತ್ಸಾಹಿಸಲು ಉತ್ತಮ ಸಮಯ. ಆರೋಗ್ಯ ಸಚಿವಾಲಯ ಮತ್ತು ದೇಶದ ವೈದ್ಯಕೀಯ ಕೂಟ ಇದನ್ನು ಬೃಹತ್ ಪ್ರಮಾಣದಲ್ಲಿ ಪ್ರಚಾರ ಮಾಡುವುದು ಉತ್ತಮ. ಮುಸ್ಲಿಮರೊಂದಿಗಿನ ಧಾರ್ಮಿಕ ಸಂಬಂಧದ ಆಧಾರದ ಮೇಲೆ ಅದನ್ನು ಅಪಖ್ಯಾತಿಗೊಳಿಸುವ ಯಾವುದೇ ಪ್ರಯತ್ನವನ್ನು ಅವರು ವಿರೋಧಿಸಬೇಕು. ಪ್ರಪಂಚದಾದ್ಯಂತ ಕ್ರಿಶ್ಚಿಯನ್ನರು ಇದನ್ನು ತಮ್ಮ ಧಾರ್ಮಿಕ ಆಚರಣೆಯಾಗಿಲ್ಲದಿದ್ದರೂ ಸಹ ಸ್ವೀಕರಿಸಿರುವಾಗ, ಎಲ್ಲಾ ರೀತಿಯ ಲೈಂಗಿಕವಾಗಿ ಹರಡುವ ರೋಗಗಳು ಮತ್ತು ಗರ್ಭಕಂಠ, ಶಿಶ್ನ ಮತ್ತು ಗುದದ್ವಾರದ ಕ್ಯಾನ್ಸರ್‌ಗಳನ್ನು ತಡೆಗಟ್ಟುವಲ್ಲಿ ಭಾರತ ಸರಕಾರವು ಇದನ್ನು ಪ್ರೋತ್ಸಾಹಿಸಬೇಕು.

(ಡಾ ಜಾವೇದ್ ಜಮಿಲ್ ಭಾರತ ಮೂಲದ ಚಿಂತಕ ಮತ್ತು ಬರಹಗಾರರಾಗಿದ್ದು, “ಎಕನಾಮಿಕ್ಸ್ ಫಸ್ಟ್ ಅಥವಾ ಹೆಲ್ತ್ ಫಸ್ಟ್?”, “ಎ ಸಿಸ್ಟಮ್ಯಾಟಿಕ್ ಸ್ಟಡಿ ಆಫ್ ದಿ ಹೋಲಿ ಕುರಾನ್”, “ರಿಡಿಸ್ಕವರಿಂಗ್ ದಿ ಯೂನಿವರ್ಸ್”, “ಜಸ್ಟೀಸ್ ಇಂಪ್ರಿಝನ್‌ಡ್”, “ಮುಸ್ಲಿಂ ವಿಷನ್ ಆಫ್ ಸೆಕ್ಯುಲರ್ ಇಂಡಿಯಾ: ಡೆಸ್ಟಿನೇಶನ್ & ರೋಡ್ ಮ್ಯಾಪ್” ಮತ್ತು “ಮುಸ್ಲಿಮ್ಸ್ ಮೋಸ್ಟ್ ಸಿವಿಲೈಸ್‌ಡ್, ಯೆಟ್ ನಾಟ್ ಇನಫ್” ಸೇರಿದಂತೆ ಎರಡು ಡಜನ್ ಪುಸ್ತಕಗಳನ್ನು ಬರೆದಿದ್ದಾರೆ.)