ನೈಜ ಸಮಾನತೆ, ನ್ಯಾಯಕ್ಕಾಗಿ ಸಂಸತ್ತಿನಲ್ಲಿ ಹೆಚ್ಚಿನ ಮಹಿಳೆಯರ ಅಗತ್ಯವಿದೆ: ರಾಹುಲ್ ಗಾಂಧಿ

0
58

ಸನ್ಮಾರ್ಗ ವಾರ್ತೆ

ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ನಾಯಕತ್ವದ ಸ್ಥಾನಗಳಲ್ಲಿ ಮಹಿಳೆಯರ ಸಮಾನತೆ ಕೊರತೆಯಿದೆ. ಈ ಸಂಸ್ಥೆಗಳಲ್ಲಿ ಹೆಚ್ಚು ಹೆಚ್ಚು ಮಹಿಳೆಯರ ಪ್ರಾತಿನಿಧ್ಯದ ಅಗತ್ಯವಿದೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಇಂತಹ ನಿರ್ಣಾಯಕ ಸಂಸ್ಥೆಗಳಲ್ಲಿ ಮಹಿಳೆಯರ ಹೆಚ್ಚು ಹೆಚ್ಚು ಪ್ರಾತಿನಿಧ್ಯದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಅವರ ಈ ಹೇಳಿಕೆಯು ಭಾರತೀಯ ರಾಜಕಾರಣದಲ್ಲಿ ಲಿಂಗ ಸಮಾನತೆಯ ಬಗ್ಗೆ ನಡೆಯುತ್ತಿರುವ ಚರ್ಚೆ ಮತ್ತು ನಡೆಯಬೇಕಾದ ಸುಧಾರಣೆಯನ್ನು ಒತ್ತಿ ಹೇಳುತ್ತದೆ.

ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ತನ್ನ ಪಕ್ಷದ ‘ಶಕ್ತಿ ಅಭಿಯಾನ’ದಲ್ಲಿ ಮಹಿಳೆಯರು ಮುಂದೆ ಬಂದು ಪಾಲ್ಗೊಳ್ಳಲು ಕರೆ ನೀಡಿದ್ದಾರೆ. ಅಭಿಯಾನವು ರಾಜಕೀಯದಲ್ಲಿ ‘ಮಹಿಳೆಯರ ಹಿತಾಸಕ್ತಿಗೆ’ ಸಮಾನ ಜಾಗವನ್ನು ಸೃಷ್ಟಿಸುವ ಗುರಿ ಹೊಂದಿದೆ.

“ಮಹಿಳೆಯರು ಸದಾ ನಮ್ಮ ಸಮಾಜ ಮತ್ತು ರಾಜಕಾರಣದಲ್ಲಿ ಪ್ರಮುಖ ಶಕ್ತಿಯಾಗಿದ್ದಾರೆ, ಆದರೆ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಇನ್ನೂ ನಾಯಕತ್ವದ ಸ್ಥಾನಗಳಲ್ಲಿ ಅಸಮಾನತೆ ಇದೆ,” ಎಂದು ಅವರು ಫೇಸ್ಬುಕ್‌ನಲ್ಲಿ ಹಿಂದಿಯಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ಹೇಳಿದ್ದಾರೆ.

“‘ಆದಿ ಆಬಾದಿ, ಪೂರೆ ಹಕ್’ ಅಂದರೆ, “ಅರ್ಧ ಜನಸಂಖ್ಯೆ, ಸಂಪೂರ್ಣ ಹಕ್ಕು ” ಎಂಬ ವಿಚಾರದೊಂದಿಗೆ ನಾವು ಈ ಗುರಿಯನ್ನು ಸಾಧಿಸಲು ಸಂಪೂರ್ಣವಾಗಿ ಸಮರ್ಪಿತರಾಗಿದ್ದೇವೆ. ನೀವು ಈ ಬದಲಾವಣೆಯನ್ನು ತರುವುದಕ್ಕೆ ಸಿದ್ಧರಾಗಿದ್ದರೆ, ‘ಶಕ್ತಿ ಅಭಿಯಾನ’ದಲ್ಲಿ ಭಾಗವಹಿಸಿ,” ಎಂದು ಕಾಂಗ್ರೆಸ್ ನಾಯಕರು ಹೇಳಿದರು.

“ ಸಂಘಟನೆಯನ್ನು ತಳಮಟ್ಟದಲ್ಲಿ ಬಲಪಡಿಲು ಮತ್ತು ನೈಜ ಬದಲಾವಣೆ ತರಲು ನಿಮ್ಮ ಭಾಗವಹಿಸುವಿಕೆ ಅತ್ಯಂತ ಮುಖ್ಯವಾಗಿದೆ,” ಎಂದು ಅವರು ಹೇಳಿದರು.