ಮೂಲ: ಅಲ್ ಜಜೀರಾ
ಕನ್ನಡಕ್ಕೆ: ಆಯಿಷತುಲ್ ಅಫೀಫಾ
ಈಜಿಪ್ಟಿನೊಂದಿಗೆ ಶಸ್ತ್ರಾಸ್ತ್ರ ವ್ಯಾಪಾರವನ್ನು ಯುರೋಪಿಯನ್ ಯೂನಿಯನ್ ರದ್ದುಪಡಿಸಿದ್ದರೂ, ಫ್ರೆಂಚ್ ಕಂಪನಿಗಳು ಶಸ್ತ್ರಾಸ್ತ್ರ ಮಾರಾಟದಿಂದ ಲಾಭಗೊಳಿಸಿದೆ ‘ ಎಂದು ಫ್ರಾನ್ಸ್ ನ ಸರಕಾರೇತರ ಸಂಸ್ಥೆಗಳು ಹೇಳುತ್ತವೆ.
ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್ -ಸಿಸಿ ಸರ್ಕಾರಕ್ಕೆ ಶಸ್ತ್ರಾಸ್ತ್ರಗಳು ಮತ್ತು ಕಣ್ಗಾವಲು ವ್ಯವಸ್ಥೆಗಳನ್ನು ವಿತರಿಸುವ ಮೂಲಕ, ಕಳೆದ ಐದು ವರ್ಷಗಳಿಂದ ಫ್ರಾನ್ಸ್ “ರಕ್ತಸಿಕ್ತ ಈಜಿಪ್ಟಿನ ದಮನದಲ್ಲಿ ಭಾಗವಹಿಸಿದೆ” ಎಂದು ಇವು ವರದಿಯಲ್ಲಿ ತಿಳಿಸಿವೆ.
2010 ರ ಮತ್ತು 2016 ರ ನಡುವೆ 39.6 ಮಿಲಿಯನ್ ನಿಂದ 1.3 ಬಿಲಿಯನ್ ಯೂರೋಗಳಷ್ಟು ($ 1.5 ಬಿಲಿ) ಶಸ್ತ್ರಾಸ್ತ್ರವನ್ನು ಈಜಿಫ್ಟ್ ಗೆ ಫ್ರೆಂಚ್ ಮಾರಾಟ ಮಾಡಿದೆ ಎಂದು ನಾಲ್ಕು ಫ್ರೆಂಚ್ ಮತ್ತು ಈಜಿಪ್ಟ್ ನ ಮಾನವ ಹಕ್ಕುಗಳ ಆಯೋಗಗಳು ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿವೆ.
ಇದಲ್ಲದೆ, “ಈಜಿಪ್ಟ್ ಭದ್ರತಾ ಸೇವೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ಶಕ್ತಿಯುತ ಡಿಜಿಟಲ್ ಸಾಧನಗಳನ್ನು ಸರಬರಾಜು ಮಾಡುವ ಮೂಲಕ, ನಾಗರಿಕ ಪ್ರತಿಭಟನೆಯನ್ನು ನಿರ್ಮೂಲನೆ ಮಾಡಲು ಬಳಸಲಾಗುವ ಆರ್ವೆಲ್ಲಿಯನ್ ಕಣ್ಗಾವಲು ಮತ್ತು ನಿಯಂತ್ರಣ ವ್ಯವಸ್ಥೆಯನ್ನು ಸ್ಥಾಪಿಸಲು ಸಹಾಯ ಮಾಡಿದೆ” ಎಂದು ಸಂಸ್ಥೆಗಳು ತಿಳಿಸಿವೆ.
2013 ರಲ್ಲಿ ನಡೆದ ಅಧ್ಯಕ್ಷ ಮುಹಮದ್ ಮುರ್ಸಿಯವರ ಉಚ್ಛಾಟಣೆಗೆ ಫ್ರೆಂಚ್ ಕಂಪೆನಿಗಳು ಸಹಕರಿಸಿದೆ ಎಂದು ಇವು ಆರೋಪಿಸಿವೆ.
2011 ರಲ್ಲಿ ಈಜಿಪ್ಟ್ ಕ್ರಾಂತಿಗೆ ಯುವ ಸಮೂಹದ ಫೇಸ್ ಬುಕ್ ಕ್ರಾಂತಿ ಕಾರಣವಾಗಿತ್ತು. ಅದು ಯುವಸಮೂಹವನ್ನು ಒಟ್ಟುಗೂಡಿಸಲು ನೆರವಾಗಿತ್ತು. ಇಂದು, ಫ್ರಾನ್ಸ್ ನ ಈ ಆರ್ವೆಲ್ಲಿಯನ್ ಕಣ್ಗಾವಲು ಮತ್ತು ನಿಯಂತ್ರಣಾ ವ್ಯವಸ್ಥೆಯು ಈ ಪೀಳಿಗೆಯನ್ನು ಮುರಿಯಲು ಸಹಾಯ ಮಾಡಿದೆ, ಪ್ರತಿಭಟನೆಯನ್ನು ಮೊಗ್ಗಿನಲ್ಲಿಯೇ ಹೊಡೆಯುವ ಗುರಿ ಹೊಂದಿದೆ” ಎಂದು ಅವು ಹೇಳಿವೆ.
2013 ರಲ್ಲಿ ಐರೋಪ್ಯ ಒಕ್ಕೂಟದ ಘೋಷಣೆಯ ಹೊರತಾಗಿಯೂ ಕನಿಷ್ಟ ಎಂಟು ಫ್ರೆಂಚ್ ಕಂಪನಿಗಳು ಈ ವ್ಯಾಪಾರದಿಂದ ಲಾಭಗೊಳಿಸಿದೆ ಎಂದು ವರದಿಯು ಆರೋಪಿಸಿದೆ, ಪ್ರತಿಭಟನೆಯ ದಮನಕ್ಕಾಗಿ ಬಳಸಬಹುದಾದ ಸಾಧನಗಳನ್ನು ಈಜಿಪ್ಟ್ ಗೆ ರಫ್ತು ಮಾಡುವುದನ್ನು ಸದಸ್ಯ ರಾಷ್ಟ್ರಗಳು ರದ್ದುಗೊಳಿಸಿದ್ದವು.
ಈ ಪ್ರಾಣಾಂತಿಕ ರಫ್ತುಗಳನ್ನು ತಕ್ಷಣವೇ ಅಂತ್ಯಗೊಳಿಸುವಂತೆ ನಮ್ಮ ತಂಡವು ಫ್ರೆಂಚ್ ಕಂಪನಿಗಳು ಮತ್ತು ಅಧಿಕಾರಿಗಳಿಗೆ ಕೇಳಿಕೊಂಡಿದೆ ಎಂದು ಸಂಸ್ಥೆಗಳು ತಿಳಿಸಿವೆ.












