ಬಾಂಗ್ಲಾದೇಶಿ ನುಸುಳುಕೋರರ ನೆಪದಲ್ಲಿ ಮುಸ್ಲಿಂ ದ್ವೇಷ ಹೇಳಿಕೆ ಜಾರ್ಖಂಡ್ ಬಿಜೆಪಿ ಸಂಸದ ನಿಶಿಕಾಂತ್ ದುಬೆ

0
57

ಸನ್ಮಾರ್ಗ ವಾರ್ತೆ

ಜಾರ್ಖಂಡ್ ನಲ್ಲಿ ಮುಸ್ಲಿಮರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರುತ್ತಿದ್ದು, ಇಲ್ಲಿನ ಒಟ್ಟು ಮುಸ್ಲಿಮರ ಪೈಕಿ 11 ಶೇಕಡ ಮುಸ್ಲಿಮರು ಬಾಂಗ್ಲಾದೇಶಿ ನುಸುಳುಕೋರರಾಗಿದ್ದಾರೆ ಎಂದು ಜಾರ್ಖಂಡ್ ಬಿಜೆಪಿ ಸಂಸದ ನಿಶೀಕಾಂತ್ ದುಬೆ ಹೇಳಿದ್ದಾರೆ.

1951 ರಲ್ಲಿ ಜಾರ್ಖಂಡ್ ನಲ್ಲಿ ಮುಸ್ಲಿಮರ ಪ್ರಮಾಣ ಒಂಬತ್ತು ಶೇಕಡವಿತ್ತು, ಈಗ ಅದು 24 ಶೇಕಡಕ್ಕೆ ಹೆಚ್ಚಿದೆ ಎಂದವರು ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಇದನ್ನು ಎ ಎನ್ ಐ ಪ್ರಕಟಿಸಿದೆ.

ಮುಸ್ಲಿಮರ ಜನಸಂಖ್ಯೆ ಹೆಚ್ಚಳವು ದೇಶದ ಬಹುದೊಡ್ಡ ಸಮಸ್ಯೆಯಾಗಿದೆ. ಇದು ಚುನಾವಣೆಗಿಂತ ಹೊರತಾದುದು. ಆದ್ದರಿಂದ ಬಿಜೆಪಿ ಈ ಇಶ್ಯೂ ಅನ್ನು ಮತ್ತೆ ಎತ್ತುತ್ತಿದೆ ಎಂದವರು ಸಮರ್ಥಿಸಿಕೊಂಡಿದ್ದಾರೆ.

ಜಾರ್ಖಂಡ್ ನಲ್ಲಿ ಬಾಂಗ್ಲಾದೇಶಿ ನುಸುಳುಕೋರರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಆದರೆ ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷಗಳು ಮುಸ್ಲಿಮರ ಓಲೈಕೆಯಲ್ಲಿ ತೊಡಗಿವೆ. ಜಾರ್ಖಂಡಿನ ಸಂತಾಲ್ ಪರಗಣದಲ್ಲಿ ಗಣನೀಯವಾಗಿ ಬಾಂಗ್ಲಾದೇಶಿ ನುಸುಳುರರಿದ್ದಾರೆ ಎಂದು ಅವರು ಹೇಳಿದ್ದಾರೆ.

ಮುಂದಿನ ತಿಂಗಳು ಜಾರ್ಖಂಡ್ ನಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಅವರು ಮತ್ತೆ ಮುಸ್ಲಿಂ ಜನಸಂಖ್ಯೆಯ ವಿಚಾರವನ್ನು ಎತ್ತಿದ್ದಾರೆ ಎಂದು ಹೇಳಲಾಗಿದೆ.