ಬ್ರಾಹ್ಮಣ ಪೂಜಾರಿಯ ಫೋಟೋ ಶೇರ್ ಮಾಡಿ ವಿಕೃತ ಸಂದೇಶ ; ಫ್ಯಾಕ್ಟ್ ಚೆಕ್

0
687

ಸನ್ಮಾರ್ಗ ವಾರ್ತೆ

ಸಾಮಾಜಿಕ ಮಾಧ್ಯಮದಲ್ಲಿನಕಲಿ ಸುದ್ದಿಗಳು ವ್ಯಾಪಕವಾಗಿ ಪ್ರಚಾರ ಪಡೆಯುತ್ತದೆ. ಹಿರಿಯ ವ್ಯಕ್ತಿಯ ಮಡಿಲಲ್ಲಿ ಕೂತ ವಧುವಿನ ಫೋಟೋವನ್ನು ಶೇರ್ ಮಾಡಿ ವಿಕೃತ ಸಂದೇಶ ಹಾಕಿ ಫೋಟೋ ಶೇರ್ ಮಾಡಲಾಗಿದೆ.

ಟ್ವಿಟರ್ ಬಳಕೆದಾರ @mahakaalkabaap ಈ ಚಿತ್ರವನ್ನು ಟ್ವೀಟ್ ಮಾಡಿದ್ದು, “ಬ್ರಾಹ್ಮಣ ಪೂಜಾರಿ ವಧುವನ್ನು ತನ್ನ ಮಡಿಲಲ್ಲಿ ಕುಳ್ಳಿರಿಸಿ ಆಶೀರ್ವಾದ ನೀಡುತ್ತಿದ್ದಾನೆಯೇ? ಬ್ರಾಹ್ಮಣರಿಂದ ಹೊಸ ಪದ್ಧತಿ ಪ್ರಾರಂಭವಾಗಿದೆವಾ? ಇದನ್ನೇ #ಬ್ರಾಹ್ಮಣ ಜೀನ್ಸ್ ಎನ್ನಬಹುದೇ?” ಎಂದು ಫೋಟೋ ಶೇರ್ ಮಾಡಲಾಗಿದೆ. ಹೀಗೆ ಹಲವರು ವಿವಿಧ ಸಂದೇಶಗಳನ್ನು ಹಾಕಿ ಅಪಾರ್ಥ ಮಾಡಿದ್ದಾರೆ.

https://x.com/mahakaalkabaap/status/1840335466769584392?t=fQCkZUbLWuyUBjr4VdVoGg&s=19

ಫ್ಯಾಕ್ಟ್ ಚೆಕ್

ಈ ಫೋಟೋ ಮೂಲವನ್ನು ಹುಡುಕಿದ ಆಲ್ಟ್ ನ್ಯೂಸ್, ಫೋಟೋ ಕ್ಲಿಕ್ಕಿಸಿದ ಫೋಟೋಗ್ರಫರ್ ಯೋಗೇಶ್ ಸಂಪರ್ಕಿಸಿದ್ದು, ಇದು ದಕ್ಷಿಣ ಭಾರತದ ಮದುವೆಯ ಫೋಟೋ ಆಗಿದ್ದು, ಫೋಟೋದಲ್ಲಿ ಕಾಣಿಸುವವರು ತಂದೆ ಮತ್ತು ಮಗಳು ಎಂದು ದೃಢೀಕರಿಸಿದ್ದಾರೆ. ವೈರಲ್ ಫೋಟೋದಲ್ಲಿ ಕಾಣುವ ಕ್ಷಣವು ಹಿಂದೂ ಮದುವೆಯ ‘ಕನ್ಯಾದಾನ’ ಸಂಪ್ರದಾಯವಾಗಿದೆ. ಚಿತ್ರದಲ್ಲಿ ಕಾಣುತ್ತಿರುವ ಹಿರಿಯ ವ್ಯಕ್ತಿ ಬ್ರಾಹ್ಮಣ ಪೂಜಾರಿಯಲ್ಲ, ವಧುವಿನ ತಂದೆಯೇ ಆಗಿದ್ದಾರೆ ಎಂದು ಹೇಳಿದ್ದಾರೆ.

https://www.instagram.com/p/C_cmC7oOCSz/?utm_source=ig_embed&ig_rid=0c8f9b7c-4fdb-4a23-8bf3-5d6dc0239b76&ig_mid=492A3744-B28B-4959-B7D2-3F5A06430E3E